ಬೆಂಗಳೂರು: ಬಿಗಿ ಪೊಲೀಸ್ ಭದ್ರತೆಯ ನಡುವೆಯೂ ನಗರದಲ್ಲಿ ಹೊಸ ವರ್ಷದ ಸಂಭ್ರಮದ ವೇಳೆ ಕೆಲ ಅಹಿತಕರ ಘಟನೆಗಳು ನಡೆದಿವೆ.
ಬೆಂಗಳೂರಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಓರ್ವ ಪುಂಡ ಯುವತಿಯ ಜೊತೆಗೆ ಅನುಚಿತವಾಗಿ ವರ್ತಿಸಿರುವ ಘಟನೆ ಬೆಳಕಿಗೆ ಬಂದಿದ್ದು, ಜನಸ್ತೋಮದ ನಡುವೆಯೇ ಯುವಕನಿಗೆ ಯುವತಿ ಚಪ್ಪಲಿ ಏಟು ನೀಡಿದ್ದಾಳೆ. ಈ ಘಟನೆ ಬ್ರಿಗೇಡ್ ರಸ್ತೆ ಬಳಿ ನಡೆದಿದ್ದು, ಕೂಡಲೇ ಯುವಕನನ್ನು ಅಶೋಕ ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇನ್ನೊಂದೆಡೆ ಸಾರ್ವಜನಿಕರು ಇರುವ ಸ್ಥಳದಲ್ಲಿ ಸಿಗರೇಟ್ ಸೇದಬಾರದೆಂಬ ನಿಯಮವಿದೆ. ಪೊಲೀಸರು ಇದ್ದರೂ ಸಹ ಕೆಲ ಯುವಕರು ಡೋಂಟ್ ಕೇರ್ ಎಂದು ಜನರ ಮಧ್ಯೆಯೇ ಧಮ್ ಹೊಡೆದಿದದ್ದಾರೆ. ನಂತ್ರ ಪೊಲೀಸರ ಮುಖಕ್ಕೆ ಹೊಗೆ ಬಿಟ್ಟು ಯುವತಿಯರ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ. ಕೂಡಲೇ ಈ ಯುವಕರಿಂದ ತಪ್ಪಿಸಿಕೊಂಡು ಹೋದ ಯುವತಿಯರು ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ.
ಮತ್ತೊಂದೆಡೆ ಎಂ ಜಿ ರೋಡ್, ಬ್ರಿಗೇಡ್ ರೋಡ್ ಬಳಿ ಮೋಜು ಮಾಡಲು ಬಂದ ಯುವತಿವೋರ್ವಳು ಫುಲ್ ಟೈಟ್ ಆಗಿ ಸಂಭ್ರಮದ ನಡುವೆಯೇ ಅಸ್ತವ್ಯಸ್ತವಾಗಿ ಬಿದ್ದಿದ್ದಳು. ಕೂಡಲೇ ಆಕೆಯನ್ನು ಎತ್ತಿಕೊಂಡು ಹೋದ ಸ್ನೇಹಿತರು, ವಾಹನದಲ್ಲಿ ಮನೆಗೆ ಕಳಿಸಿದ್ರು. ಒಟ್ಟಾರೆ, ಈ ಬಾರಿ ಮುಂಚಿತವಾಗಿಯೇ ಪೊಲೀಸರು ಎಲ್ಲ ಭದ್ರತಾ ಕ್ರಮಗಳನ್ನು ಕೈಗೊಂಡರೂ ಇಂತಹ ಅಹಿತಕರ ಘಟನೆಗಳು ನಡೆದಿವೆ.