ಕರ್ನಾಟಕ

karnataka

ETV Bharat / city

ಎಂಜಿ ರಸ್ತೆಯಲ್ಲಿ ಇನ್ಮೇಲೆ ಸಂಭ್ರಮಾಚರಣೆ ಇರಬೇಕಾ ಬೇಡ್ವಾ.. ಹೊಸ ವರ್ಷ ಸಂಭ್ರಮಿಸುವ ಕುರಿತು ಸಿಎಂ ಜೊತೆ ಚರ್ಚೆ: ಸಚಿವ ವಿ.ಸೋಮಣ್ಣ - ಹೊಸ ವರ್ಷದಲ್ಲಿ ಜರುಗಿದ ಅಹಿತಕರ ಘಟನೆಗಳು

ಸಿಲಿಕಾನ್ ಸಿಟಿಯಲ್ಲಿ ಹೊಸ ವರ್ಷ ಸಂಭ್ರಮಾಚರಣೆ ನಿನ್ನೆ ಅದ್ದೂರಿಯಾಗಿ ಜರುಗಿತು. ಆದರೆ, ಈ ವೇಳೆ ಕೆಲವು ಅಹಿತಕರ ಘಟನೆಗಳೂ ನಡೆದಿವೆ.

New year celebration
ಸಚಿವ ವಿ.ಸೋಮಣ್ಣ

By

Published : Jan 1, 2020, 11:46 AM IST

Updated : Jan 1, 2020, 12:05 PM IST

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಹೊಸ ವರ್ಷ ಸಂಭ್ರಮಾಚರಣೆ ನಿನ್ನೆ ಅದ್ದೂರಿಯಾಗಿ ಜರುಗಿತು. ಆದರೆ, ಈ ವೇಳೆ ಕೆಲವು ಅಹಿತಕರ ಘಟನೆಗಳೂ ನಡೆದಿವೆ.

ನೂತನ ವರ್ಷದ ಸಂಭ್ರಮದಲ್ಲಿ ಹಲ್ಲೆ ಪ್ರಕರಣಗಳು ಸಂಭವಿಸುತ್ತಿವೆ. ಎಂ.ಜಿ.ರಸ್ತೆ, ಚರ್ಚ್ ಸ್ಟ್ರೀಟ್, ಕಮರ್ಷಿಯಲ್ ಸ್ಟ್ರೀಟ್​ ಸೇರಿದಂತೆ ಹಲವೆಡೆ ಸಾಕಷ್ಟು ದೌರ್ಜನ್ಯ ಪ್ರಕರಣಗಳು ನಡೆದಿವೆ. ಇಂಥ ಘಟನೆಗಳು ಹಿಂದೆಯೂ ನಡೆದಿವೆ ಎಂದು ಸಚಿವ ವಿ.ಸೋಮಣ್ಣ ಹೇಳಿದರು.

ಇಂದು ಬೆಳಗ್ಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಧವಳಗಿರಿ ನಿವಾಸಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ಇನ್ಮುಂದೆ ಈ ಪ್ರದೇಶಗಳಲ್ಲಿ ಹೊಸ ವರ್ಷ ಆಚರಿಸಬೇಕಾ? ಬೇಡವಾ? ಎಂಬ ಬಗ್ಗೆ ಯೋಚನೆ ಮಾಡಬೇಕಿದೆ. ಈ ಕುರಿತು ಸಿಎಂ ಮತ್ತು ಅಧಿಕಾರಿಗಳ ಜೊತೆ ಚರ್ಚಿಸಲಾಗುವುದು ಎಂದು ತಿಳಿಸಿದರು.

ಸಚಿವ ವಿ.ಸೋಮಣ್ಣ

ಹೊಸ ವರ್ಷಾಚರಣೆ ವೇಳೆ ಎಂ.ಜಿ. ರಸ್ತೆ, ಚರ್ಚ್ ಸ್ಟ್ರೀಟ್, ಕಮರ್ಷಿಯಲ್ ಸ್ಟ್ರೀಟ್ ಈ ಪ್ರದೇಶಗಳಲ್ಲಿ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿವೆ. ಇದರಿಂದ ನಮಗೆ ಮುಜುಗರ ಆಗುತ್ತದೆ. ಇದಕ್ಕೆ ಬದಲಾವಣೆ ತರಬೇಕು. ವರ್ಷಾಚರಣೆಗೆ ಪರ್ಯಾಯ ವ್ಯವಸ್ಥೆ ಮಾಡಬೇಕಿದೆ ಎಂದು ಹೇಳಿದರು.

Last Updated : Jan 1, 2020, 12:05 PM IST

ABOUT THE AUTHOR

...view details