ಕರ್ನಾಟಕ

karnataka

ETV Bharat / city

ರಾಜ್ಯಾದ್ಯಂತ ಆಸ್ತಿ ನೋಂದಣಿಗೆ ಹೊಸ ವ್ಯವಸ್ಥೆ: ಈ ತಿಂಗಳಿಂದಲೇ ಜಾರಿ - ಒಟಿಪಿ ಆಧಾರಿತ ಸೇವೆ

ಆಸ್ತಿ ನೋಂದಣಿ ಆನ್‌ಲೈನ್ ವ್ಯವಸ್ಥೆಯನ್ನು ಸದೃಢಗೊಳಿಸಲು ರಾಜ್ಯದಲ್ಲಿ ಎಲ್ಲಾ ಆಸ್ತಿ ನೋಂದಣಿಗೆ ಒಟಿಪಿ ಆಧಾರಿತ ಸೇವೆಯನ್ನು ಕಡ್ಡಾಯವಾಗಿ ಜಾರಿಗೆ ತರಲು ರಾಜ್ಯ ಸರ್ಕಾರ ನಿರ್ಧರಿಸಿದೆ.

New system for statewide property registration

By

Published : Nov 2, 2019, 8:32 PM IST

ಬೆಂಗಳೂರು:ಭೂ ದಾಖಲೆಗಳ ದತ್ತಾಂಶ ಸಾಫ್ಟ್‌ವೇರ್ ಹ್ಯಾಕ್ ಆಗುವುದನ್ನು ನಿಯಂತ್ರಿಸಲು ಹಾಗೂ ಆಸ್ತಿ ನೋಂದಣಿ ಆನ್‌ಲೈನ್ ವ್ಯವಸ್ಥೆಯನ್ನು ಸದೃಢಗೊಳಿಸಲು ನವೆಂಬರ್​ನಿಂದ ರಾಜ್ಯದಲ್ಲಿ ಎಲ್ಲಾ ಆಸ್ತಿ ನೋಂದಣಿಗೆ ಒಟಿಪಿ ಆಧಾರಿತ ಸೇವೆಯನ್ನು ಕಡ್ಡಾಯವಾಗಿ ಜಾರಿಗೆ ತರಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಆಸ್ತಿ ನೋಂದಣಿ ವೇಳೆ ನಡೆಯುವ ಅಕ್ರಮ ಹಾಗೂ ಇತರ ಅವ್ಯವಹಾರಗಳನ್ನು ತಡೆಯಲು ಈ ಹೊಸ ವ್ಯವಸ್ಥೆ ಪರಿಚಯಿಸಲಾಗುತ್ತಿದೆ. ಭೂ ದಾಖಲೆಗಳ ದತ್ತಾಂಶ ಒಳಗೊಂಡಿದ್ದ ಕಾವೇರಿ ಸಾಫ್ಟ್​​ವೇರ್ ಹ್ಯಾಕ್ ಆದ ಬೆನ್ನಲ್ಲೇ ಆಸ್ತಿ ನೋಂದಣಿಗೆ ಒಟಿಪಿ ಆಧಾರಿತ ಸೇವೆ ಆರಂಭಿಸಲಾಗುತ್ತಿದೆ.

ಒಟಿಪಿ ಜತೆಗೆ ಆಸ್ತಿಗಳಿಗೆ ಸಂಬಂಧಿಸಿದ ಪೂರಕ ದಾಖಲೆಗಳ ಸ್ಕ್ಯಾನ್ಡ್​ ಪ್ರತಿಯನ್ನೂ ಅಪ್​ಲೋಡ್ ಮಾಡುವುದು ಕಡ್ಡಾಯ. ಶಿವಮೊಗ್ಗದಲ್ಲಿ ಪ್ರಾಯೋಗಿಕವಾಗಿ ಒಟಿಪಿ ವ್ಯವಸ್ಥೆ ಆರಂಭಿಸಲಾಗಿತ್ತು. ಇದೀಗ ರಾಜ್ಯದ‌ ಎಲ್ಲಾ ಜಿಲ್ಲೆಗಳ ಉಪ ನೋಂದಣಿ ಕಚೇರಿಗಳಲ್ಲಿ ಈ ಸೇವೆಗೆ ಚಾಲನೆ ನೀಡಲಾಗುತ್ತಿದೆ ಎಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಯುಕ್ತರು ತಿಳಿಸಿದ್ದಾರೆ. ನವೆಂಬರ್ ಮೊದಲ ವಾರದಲ್ಲಿ ಈ ಹೊಸ ಒಟಿಪಿ ವ್ಯವಸ್ಥೆ ಜಾರಿಗೆ ಬರಲಿದೆ.

ಹೊಸ ವ್ಯವಸ್ಥೆ ಜಾರಿಗೆ ಬಂದ ಬಳಿಕ ಇಲಾಖೆ ನಿತ್ಯ 30,000ಕ್ಕೂ ಅಧಿಕ ಎಸ್ಎಂಎಸ್​ಗಳನ್ನು ಆಸ್ತಿ ನೋಂದಣಿ ಮಾಡುವವರಿಗೆ ಕಳುಹಿಸಲಾಗುತ್ತದೆ. ನಿತ್ಯ ರಾಜ್ಯಾದ್ಯಂತ ಸುಮಾರು 10,000ಕ್ಕೂ ಅಧಿಕ ಆಸ್ತಿಗಳನ್ನು ನೋಂದಾಯಿಸಲಾಗುತ್ತಿದೆ.

ಡಿಸೆಂಬರ್​ನಲ್ಲಿ ಅಕ್ರಮ ಪತ್ತೆ:ಕುಮಾರಸ್ವಾಮಿ ಸರ್ಕಾರ ಆಸ್ತಿ ನೋಂದಣಿ ಸಲುವಾಗಿ ಕಾವೇರಿ ಆನ್​​ಲೈನ್ ವ್ಯವಸ್ಥೆಯನ್ನು ಲೋಕಾರ್ಪಣೆ ಮಾಡಿತ್ತು. ಈ ವೆಬ್​​ಸೈಟ್ ಮೂಲಕ ಆಸ್ತಿ ನೋಂದಣಿ ಮಾಡಬಹುದಾಗಿತ್ತು. ಆ‌ ಮೂಲಕ ಸಾರ್ವಜನಿಕರು ನಿತ್ಯ ಆಸ್ತಿ ನೋಂದಣಿಗೆ ಸಬ್​​ ರಿಜಿಸ್ಟ್ರಾರ್ ಕಚೇರಿಗಳಿಗೆ ಸುತ್ತಾಡುವುದನ್ನು ತಪ್ಪಿಸಲು ಈ ಸೇವೆ ಆರಂಭಿಸಲಾಗಿತ್ತು.

ಕಳೆದ ಡಿಸೆಂಬರ್‌ನಲ್ಲಿ ಕಾವೇರಿ ಆನ್​ಲೈನ್​​ ವ್ಯವಸ್ಥೆ ಮೂಲಕ ದಾಖಲಾತಿಗಳ ಅದಲು-ಬದಲು ಮಾಡಿ ವಂಚನೆ ನಡೆದಿರುವ 300 ಪ್ರಕರಣಗಳು ಪತ್ತೆಯಾಗಿದ್ದವು. ಇದು ಆಂತರಿಕ‌ ತನಿಖೆ ವೇಳೆ ಬಯಲಿಗೆ ಬಂದಿತ್ತು. ಅದಾದ ಬಳಿಕ ಸಾಫ್ಟ್‌ವೇರ್​​ ಲೋಪದೋಷಗಳನ್ನು ನಿವಾರಿಸಲಾಗುತ್ತಿದೆ. ಇಲಾಖೆಯಲ್ಲಿ ವಂಚನೆ‌ ಮಾಡಿದವರನ್ನೂ ಪತ್ತೆ ಹಚ್ಚಲು ಕ್ರಮ ಕೈಗೊಳ್ಳುತ್ತಿದೆ. ಬಹುತೇಕ ಬೆಂಗಳೂರಿನಲ್ಲೇ ಅಧಿಕ ಪ್ರಕರಣಗಳು ಪತ್ತೆಯಾಗಿವೆ. ಮೈಸೂರು, ಉತ್ತರ ಕರ್ನಾಟಕದ‌ ಕೆಲ‌ ಜಿಲ್ಲೆಗಳಲ್ಲೂ ಈ ವಂಚನೆ ಪತ್ತೆಯಾಗಿದ್ದು, ಸೈಬರ್ ಕ್ರೈಂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ABOUT THE AUTHOR

...view details