ಕರ್ನಾಟಕ

karnataka

ETV Bharat / city

ಏಪ್ರಿಲ್ 1 ರಿಂದ ನೂತನ ಜಿಎಸ್​ಟಿ ಪದ್ದತಿ ಪರಿಣಾಮಕಾರಿ ಅನುಷ್ಠಾನ: ಸುಶೀಲ್ ಕುಮಾರ್ ಮೋದಿ - Sushil Kumar Modi benglore press meet news

ಜಿಎಸ್​ಟಿಯನ್ನು ರಾಷ್ಟ್ರದಲ್ಲಿ ಪರಿಣಾಮಕಾರಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ನಿನ್ನೆ ಜಿಎಸ್​ಟಿ ಉಸ್ತುವಾರಿ, ಬಿಹಾರ ಡಿಸಿಎಂ ಸುಶೀಲ್ ಕುಮಾರ್ ಮೋದಿ ನಗರದ ಖಾಸಗಿ ಹೋಟೆಲ್​ನಲ್ಲಿ ಸಭೆ ಮಾಡಿ ಜಿಎಸ್​ಟಿ ಕುರಿತು ಮಾಹಿತಿ ನೀಡಿದರು.

Sushil Kumar Modi
ಸುಶೀಲ್ ಕುಮಾರ್ ಮೋದಿ

By

Published : Dec 24, 2019, 7:51 AM IST

ಬೆಂಗಳೂರು: ಜಿಎಸ್​ಟಿಯನ್ನು(ಸರಕು ಮತ್ತು ಸೇವಾ ತೆರಿಗೆ) ರಾಷ್ಟ್ರದಲ್ಲಿ ಪರಿಣಾಮಕಾರಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ನಿನ್ನೆ ಜಿಎಸ್​ಟಿ ಉಸ್ತುವಾರಿ, ಬಿಹಾರ ಡಿಸಿಎಂ ಸುಶೀಲ್ ಕುಮಾರ್ ಮೋದಿ ನಗರದ ಖಾಸಗಿ ಹೋಟೆಲ್​ನಲ್ಲಿ ಸಭೆ ಮಾಡಿ, ಜಿಎಸ್​ಟಿ ಕುರಿತು ಮಾಹಿತಿ ನೀಡಿದರು.

ಖಾಸಗಿ ಹೋಟೆಲ್​ನಲ್ಲಿ ಸುಶೀಲ್ ಕುಮಾರ್ ಮೋದಿ ಸಭೆ

ಸಭೆಯಲ್ಲಿ ಪ್ರಮುಖವಾಗಿ ಈ ಕೆಳಗಿನ ನಿರ್ಣಯಗಳನ್ನು ಕೈಗೊಳ್ಳಲಾಯಿತು:

ಜಿಎಸ್​ಟಿ ಸ್ಲಾಬ್​ಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಜಿಎಸ್​ಟಿ ತೆರಿಗೆಗಳಲ್ಲಿ ಯಾವುದೇ ಹೆಚ್ಚಳ ಹಾಗೂ ಬದಲಾವಣೆ ಮಾಡುವುದಿಲ್ಲ. ಆರ್ಥಿಕ ಸುಸ್ಥಿರತೆ ಹಿನ್ನೆಲೆ ಯಾವುದೇ ತೆರಿಗೆ ಏರಿಕೆ ಇಲ್ಲ. ಎಲ್ಲಾ ರಾಜ್ಯಗಳ ಜಿಎಸ್​ಟಿ ಪಾಲನ್ನು ಈಗಾಗಲೇ ಸೆಪ್ಟಂಬರ್​ವರೆಗೂ ಕ್ಲಿಯರ್ ಮಾಡಲಾಗಿದೆ. ಏಪ್ರಿಲ್ 1 ರಿಂದ ಎಲೆಕ್ಟ್ರಾನಿಕ್ ರಿಟರ್ನ್ಸ್‌ ಸಿಸ್ಟಮ್ ಜಾರಿಗೆ ತರುವುದಾಗಿ ಸುಶೀಲ್ ಕುಮಾರ್ ತಿಳಿಸಿದ್ರು.

ಜನವರಿಯಿಂದ ಹಂತಹಂತವಾಗಿ ಪ್ರಾಯೋಗಿಕವಾಗಿ ಜಿಎಸ್​ಟಿ ಜಾರಿಗೆ ತರಲಾಗುವುದು. ವ್ಯಾಪಾರಿಗಳು ಈ ಬಗ್ಗೆ ಸಾಧಕ-ಬಾಧಕಗಳನ್ನು ತಿಳಿಯಬಹುದಾಗಿದೆ. ಈ ಹಿಂದಿನ ಜಿಎಸ್​ಟಿ ರಿಟರ್ನ್ಸ್ ಫೈಲ್ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷಗಳಿದ್ದು, ಅದನ್ನು ಪರಿಹರಿಸಲಾಗಿದೆ. ಈ ಹೊಸ ವಿಧಾನದಿಂದ ರಿಟರ್ನ್ಸ್ ಫೈಲ್ ಮಾಡುವುದು ಇನ್ನಷ್ಟು ಸುಲಭವಾಗಿದೆ. ಕಡ್ಡಾಯವಾಗಿ ಏಪ್ರಿಲ್ 1 ರಿಂದ ನೂತನ ಪದ್ದತಿ ಅಳವಡಿಸಿಕೊಳ್ಳಲು ಅವರು ಮನವಿ ಮಾಡಿದ್ರು.

ಇನ್ನು 24.86 ಲಕ್ಷ ನಕಲಿ ಖಾತೆಗಳು ಪತ್ತೆಯಾಗಿದ್ದು, ಅವುಗಳನ್ನು ಪತ್ತೆಹಚ್ಚಿ ರದ್ದು ಮಾಡಲಾಗಿದೆ. 66.79 ಸಾವಿರ ಹೊಸದಾಗಿ ನೋಂದಣಿಯಾದ ತೆರಿಗೆದಾರರಿದ್ದು, ಕಳೆದ 8 ತಿಂಗಳಲ್ಲಿ ಪ್ರತಿ ತಿಂಗಳಿಗೆ 95 ಲಕ್ಷ ಕೋಟಿ ರೂ ಆದಾಯ ಬಂದಿದೆ. ಜಿಎಸ್​ಟಿ ಗೆ ಅಧಾರ್ ನೋಂದಾಣಿ ಕಡ್ಡಾಯವಾಗಿರುವುದಾಗಿ ತಿಳಿಸಿದರು.

ABOUT THE AUTHOR

...view details