ಬೆಂಗಳೂರು: ಕೊರೊನಾ ಕರ್ಫ್ಯೂನಿಂದ ಮಿಲ್ಕ್ ಪಾರ್ಲರ್ಗಳಿಗೆ ವಿನಾಯಿತಿ ನೀಡಿ ಸರ್ಕಾರ ಪರಿಷ್ಕೃತ ಮಾರ್ಗಸೂಚಿ ಹೊರಡಿಸಿದೆ.
ಈ ಮುಂಚಿನ ಮಾರ್ಗಸೂಚಿಯಂತೆ ಮಿಲ್ಕ್ ಬೂತ್ಗಳಿಗೆ ಬೆಳಗ್ಗೆ 6 ಗಂಟೆಯಿಂದ 10 ಗಂಟೆವರೆಗೆ ಅನುಮತಿ ನೀಡಲಾಗಿತ್ತು. ಆದರೆ, ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ಸಮಸ್ಯೆ ಎದುರಾಗಿತ್ತು. ಬೆಳಗ್ಗೆಯಿಂದಲೇ ಹಾಲಿನ ಅಂಗಡಿ ಮುಂದೆ ಸರತಿ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ಎದುರಾಗಿತ್ತು. ಜೊತೆಗೆ ಹಲವರಿಗೆ ಹಾಲು ಸಿಗುತ್ತಿರಲಿಲ್ಲ.
ಸರ್ಕಾರದಿಂದ ಹೊಸ ಮಾರ್ಗಸೂಚಿ ಪ್ರಕಟ: ಬೆಳಗ್ಗೆ 6ರ ರಿಂದ ರಾತ್ರಿ 8 ಗಂಟೆವರೆಗೆ ಹಾಲು ಮಾರಾಟಕ್ಕೆ ಅನುಮತಿ - ಕೊರೊನಾ ಕರ್ಫ್ಯೂ
ಹಾಲಿನ ಅಂಗಡಿ ಮುಂದೆ ಕ್ಯೂ ತಪ್ಪಿಸಲು ಕರ್ನಾಟಕ ಹಾಲು ಒಕ್ಕೂಟದ ನಂದಿನಿ ಹಾಲು ಮಾರಾಟ ಮಳಿಗೆಗಳಲ್ಲಿ ಬೆಳಗ್ಗೆ 6 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಮಾರಾಟ ಮಾಡಲು ಅನುಮತಿ ನೀಡಿ ಸರ್ಕಾರ ಹೊಸ ಮಾರ್ಗಸೂಚಿ ಹೊರಡಿಸಿದೆ.

ನಂದಿನಿ
ಈ ಹಿನ್ನೆಲೆ ಸರ್ಕಾರ ಪರಿಷ್ಕೃತ ಮಾರ್ಗಸೂಚಿ ಹೊರಡಿಸಿದ್ದು, ಕರ್ನಾಟಕ ಹಾಲು ಒಕ್ಕೂಟದ ನಂದಿನಿ ಹಾಲು ಮಾರಾಟ ಮಳಿಗೆಗಳಲ್ಲಿ ಬೆಳಗ್ಗೆ 6 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಮಾರಾಟ ಮಾಡಲು ಅನುಮತಿಸಿದೆ.