ಕರ್ನಾಟಕ

karnataka

ETV Bharat / city

ಸರ್ಕಾರದಿಂದ ಹೊಸ ಸುತ್ತೋಲೆ.. ಪ್ರತಿಭಟನಾ ಸ್ವಾತಂತ್ರ್ಯಕ್ಕೆ ಬೀಳುತ್ತಾ ಬ್ರೇಕ್? - ತಿಭಟನೆ ಮಾಡಿದರೆ ಕಾದಿದೆ ಸರ್ಕಾರದಿಂದ ಕಠಿಣ ಶಿಕ್ಷೆ.

ರಾಜ್ಯ ಸರ್ಕಾರದ ಕಂದಾಯ ಇಲಾಖೆಯ ಆಯುಕ್ತರಿಂದ ಸೆಪ್ಟೆಂಬರ್ 5ರಂದು ಮಹತ್ವದ ಸುತ್ತೋಲೆಯೊಂದು ಹೊರಬಿದ್ದಿದೆ. ಇದು ಸರ್ಕಾರಿ ನೌಕರರ ಪ್ರತಿಭಟನೆ ಸ್ವಾತಂತ್ರ್ಯಕ್ಕೆ ಬ್ರೇಕ್​ ಹಾಕಲಿದೆ.

ಸರ್ಕಾರದಿಂದ ಹೊಸ ಸುತ್ತೋಲೆ

By

Published : Sep 7, 2019, 7:36 PM IST

Updated : Sep 7, 2019, 8:23 PM IST

ಬೆಂಗಳೂರು: ಇನ್ಮುಂದೆ ಸರ್ಕಾರಿ ನೌಕರರು ಪ್ರತಿಭಟನೆ ಮಾಡುವಂತಿಲ್ಲ. ಪ್ರತಿಭಟನೆ ಮಾಡಿದರೆ ಕಾದಿದೆ ಸರ್ಕಾರದಿಂದ ಕಠಿಣ ಶಿಕ್ಷೆ. ಇಂತಹದ್ದೊಂದು ಮಹತ್ವದ ಸುತ್ತೋಲೆಯನ್ನು ರಾಜ್ಯ ಸರ್ಕಾರ ಹೊರಡಿಸಿದೆ.

ಸರ್ಕಾರದಿಂದ ಹೊಸ ಸುತ್ತೋಲೆ

ಸರ್ಕಾರಿ ನೌಕರರ ಸಾಮೂಹಿಕ ರಜೆಗೆ ಈ ಆದೇಶದಿಂದ ತಡೆ ಬೀಳಲಿದೆ. ಸಾಮೂಹಿಕ ರಜೆ ನೀಡದಂತೆ ಅಧೀನ ಸಿಬ್ಬಂದಿಗೆ ಸೂಚನೆ ರವಾನಿಸಲಾಗಿದೆ. ಕಂದಾಯ ಇಲಾಖೆಯ ಆಯುಕ್ತರಿಂದ ಸೆಪ್ಟೆಂಬರ್ 5ರಂದು ಅಧಿಕೃತ ಸುತ್ತೋಲೆ ಹೊರಬಿದ್ದಿದೆ. ರಜೆ ಹಾಕಿದರೆ 'ನೋ ವರ್ಕ್, ನೋ ಪೇ' ಅಡಿ ಕ್ರಮ ಕ್ರಮಕೈಗೊಳ್ಳಲು ಈ ಸುತ್ತೋಲೆ ಪ್ರಕಾರ ಅವಕಾಶವಿದೆ.

ಅನಧಿಕೃತ ಗೈರು ಹಾಜರಿ ಎಂದು ದಾಖಲೆಯಲ್ಲಿ ನಮೂದು ಮಾಡಲಾಗುತ್ತದೆ. ಇದನ್ನೇ ಮಾನದಂಡವಾಗಿ ಪರಿಗಣಿಸಿ ದುರ್ನಡತೆಯ ಪಟ್ಟ ಕಟ್ಟಲು‌ ಅವಕಾಶ ಸಿಗಲಿದೆ. ನೌಕರನಿಗೆ ಸಿಗಬೇಕಾದ ಎಲ್ಲಾ ಸೌಲಭ್ಯಗಳಿಗೆ ಕತ್ತರಿ ಬೀಳುವ ಆತಂಕವೂ ಇದರ ಹಿಂದೆ ಇದೆ. ಈ ಬೆದರಿಕೆ ತಂತ್ರದ ಮೂಲಕ ನೌಕರರಿಗೆ ಭಯ ಮೂಡಿಸಲು ಸರ್ಕಾರ ಮುಂದಾಗಿದ್ದು, ಇನ್ಮುಂದೆ ಪ್ರತಿಭಟನೆ ಹತ್ತಿಕ್ಕಲು ಸರ್ಕಾರದ ತಂತ್ರಗಾರಿಕೆ ಆಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

Last Updated : Sep 7, 2019, 8:23 PM IST

ABOUT THE AUTHOR

...view details