ಕರ್ನಾಟಕ

karnataka

ETV Bharat / city

ನೂತನ ಸಚಿವರಿಗೆ ಸದ್ಯದಲ್ಲೇ ಹೊಸ ಕಾರು: ಡಿಪಿಎಆರ್ ಆದೇಶ ಶೀಘ್ರ - ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆ

ಆರ್ಥಿಕ ಸಂಕಷ್ಟದ ಮಧ್ಯೆ ರಾಜ್ಯ ಸರ್ಕಾರ ನೂತನ ಸಚಿವರಿಗೆ ಕಾರು ಖರೀದಿಸಲು ಮುಂದಾಗಿದೆ. ಈ ಸಂಬಂಧ ಡಿಪಿಎಆರ್ ಇಲಾಖೆ ಆದೇಶ ಹೊರಡಿಸಲಿದೆ. ಎಷ್ಟು‌ ಹೊಸ ಕಾರುಗಳ ಖರೀದಿಗೆ ಪ್ರಸ್ತಾವನೆ ಇದೆ ಎಂಬ ಬಗ್ಗೆ ವರದಿ ಇಲ್ಲಿದೆ.

new-cars-for-state-ministers
ನೂತನ ಸಚಿವರಿಗೆ ಸದ್ಯದಲ್ಲೇ ಹೊಸ ಕಾರು: ಡಿಪಿಎಆರ್ ಆದೇಶ ಶೀಘ್ರ

By

Published : Mar 1, 2021, 11:59 PM IST

ಬೆಂಗಳೂರು: ರಾಜ್ಯ ಸರ್ಕಾರ ಕೋವಿಡ್ ಹಿನ್ನೆಲೆ ತೀವ್ರ ಸಂಕಷ್ಟ ಎದುರಿಸುತ್ತಿದೆ. ಈ ಹಿನ್ನೆಲೆ ಈಗಾಗಲೇ ಮಿತವ್ಯಯಕ್ಕೆ ಆರ್ಥಿಕ ಇಲಾಖೆ ಆದೇಶ ಹೊರಡಿಸಿದೆ. ದುಂದು ವೆಚ್ಚಕ್ಕೆ ಕಡಿವಾಣ ಹಾಕುವಂತೆ ಎಲ್ಲಾ ಇಲಾಖೆಗಳಿಗೆ ಸುತ್ತೋಲೆ ಹೊರಡಿಸಿದೆ.

ಈ ಮಧ್ಯೆ ನೂತನ ಸಚಿವರಿಗೆ ಹೊಸ ಕಾರು ಖರೀದಿಸಲು ಸರ್ಕಾರ ಮುಂದಾಗಿದೆ. ಈ ವಾರದೊಳಗೆ ಹೊಸ ಕಾರು ಖರೀದಿ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಡಿಪಿಎಆರ್) ಆದೇಶ ಹೊರಡಿಸಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇತ್ತೀಚೆಗೆ ನೂತನವಾಗಿ ಪ್ರಮಾಣ ವಚನ ಸ್ವೀಕರಿಸಿದ 7 ಸಚಿವರಿಗೆ ಹೊಸ ಖರೀದಿ ಮಾಡಲು ಮುಂದಾಗಿದೆ. ಸಿಎಂ ಅವರು ಏಳು ಹೊಸ ಕಾರು ಖರೀದಿಗೆ ಅನುಮೋದನೆ ನೀಡಿದ್ದು, ಆರ್ಥಿಕ ಇಲಾಖೆಯ ಅನುಮತಿಯೊಂದಿಗೆ ಈ ವಾರಾಂತ್ಯದಲ್ಲಿ ಡಿಪಿಎಆರ್ ಇಲಾಖೆ ಹೊಸ ಕಾರು ಖರೀದಿ ಸಂಬಂಧ ಆದೇಶ ಹೊರಡಿಸಲಿದೆ. ಸಚಿವರಿಗೆ ಕೊಡ ಮಾಡುವ ಇನ್ನೋವಾ ಕ್ರೆಸ್ಟಾ ಕಾರನ್ನು ಖರೀದಿಸಲು ಮುಂದಾಗಿದೆ. ಮೊನ್ನೆಯಷ್ಟೆ ಡಿಪಿಎಆರ್ ಇಲಾಖೆ ಕಾರು ಖರೀದಿ ವೆಚ್ಚದ ಮಿತಿಯನ್ನು 23 ಲಕ್ಷಕ್ಕೆ ಹೆಚ್ಚಿಸಿ ಆದೇಶ ಹೊರಡಿಸಿದೆ.

ಇದನ್ನೂ ಓದಿ:ರಾಜ್ಯ ಬಿಜೆಪಿ ಶಿಸ್ತು ಸಮಿತಿಗೆ ತಂಡ ರಚಿಸಿದ ಕಟೀಲ್​

ಬಹುತೇಕ ಎಲ್ಲಾ ಸಚಿವರು ಇನ್ನೋವಾ ಕ್ರೆಸ್ಟ ಕಾರಿಗೆ ಒಲವು ಹೊಂದಿದ್ದು, ಇತ್ತೀಚೆಗೆ ಬಿಡುಗಡೆಯಾದ ಹೊಸ ಮಾಡೆಲ್ ಇನ್ನೋವಾ ಕ್ರೆಸ್ಟ ಕಾರನ್ನು ಖರೀದಿಸಲು ಸರ್ಕಾರ‌ ಮುಂದಾಗಿದೆ. ಕಳೆದ ಫೆಬ್ರವರಿಯಲ್ಲಿ ಕಾರು ಖರೀದಿ ವೆಚ್ಚದ ಮಿತಿಯನ್ನು 22 ಲಕ್ಷ ರೂ.ಗೆ ಏರಿಕೆ ಮಾಡಿ ಆದೇಶ ಹೊರಡಿಸಲಾಗಿತ್ತು. ಇದೀಗ ಆ ಮಿತಿಯನ್ನು 1 ಲಕ್ಷ ರೂ.ಗೆ ಏರಿಸಿ 23 ಲಕ್ಷಕ್ಕೆ ಹೆಚ್ಚಳ ಮಾಡಿ ಆದೇಶ ಹೊರಡಿಸಲಾಗಿದೆ. ಹೊಸ ಏಳು ಸಚಿವರಿಗೆ ಖರೀದಿ ಮಾಡಲಿರುವ ಈ ಏಳು ಹೊಸ ಮಾಡೆಲ್ ಇನ್ನೋವಾ ಕ್ರೆಸ್ಟಗೆ ಒಟ್ಟು 1.61 ಕೋಟಿ ರೂ. ವೆಚ್ಚ ತಗುಲಲಿದೆ.

ಕೆಲ ಸಂಸದರಿಂದಲೂ ಹೊಸ ಕಾರಿಗೆ ಪ್ರಸ್ತಾಪ

ಇತ್ತ ಕೆಲ ಸಂಸದರೂ ಹೊಸ ಕಾರು ಖರೀದಿಗೆ ಪ್ರಸ್ತಾಪ ಇಟ್ಟಿದ್ದಾರೆ ಎಂದು ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಸುಮಾರು 5 ರಿಂದ 6 ಮಂದಿ ಸಂಸದರು ಹೊಸ ಕಾರು ಖರೀದಿಸುವಂತೆ ಕೋರಿ ಪ್ರಸ್ತಾಪ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಿಎಂ ಸಂಸದರ ಹೊಸ ಕಾರಿನ ಬೇಡಿಕೆಗೆ ಅನುಮತಿ ನೀಡಿದ ಬಳಿಕ ಆರ್ಥಿಕ ಇಲಾಖೆಯಿಂದ ಸಹಮತಿ ಬಂದ ಬಳಿಕ ಹೊಸ ಕಾರು ಸಂಬಂಧ ಆದೇಶ ಹೊರಡಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೊಸ ಕಾರು ಖರೀದಿ ನಿಯಮ ಏನಿದೆ?

ನಿಯಮದ‌ ಪ್ರಕಾರ ಸಚಿವರು ಹಾಗೂ ಸಂಸದರಿಗೆ ಡಿಪಿಎಆರ್ ಇಲಾಖೆ ವತಿಯಿಂದ ಅಧಿಕೃತ ಕಾರು ಹೊಂದಲು ಅರ್ಹರಿರುತ್ತಾರೆ. ಸಚಿವರು ಹಾಗೂ ಸಂಸದರಿಗೆ ನೀಡಿರುವ ವಾಹನಗಳು ಮೂರು ವರ್ಷ ಹಳೆಯದಾಗಿದ್ದರೆ ಅಥವಾ 1 ಲಕ್ಷ ಕಿ.ಮೀ ಮೇಲ್ಪಟ್ಟು ದೂರ ಕ್ರಮಿಸಿದ್ದರೆ ಮಾತ್ರ ಕಾರು ಬದಲಾಯಿಸಿ, ಹೊಸ ಕಾರು ಖರೀದಿಸಿ ಕೊಡಬೇಕೆಂಬ ನಿಯಮ ಇದೆ.

ಈಗಾಗಲೇ ಬಹುತೇಕ ಸಚಿವರು ಹಾಗೂ ಸಂಸದರ ಕಾರುಗಳು ಒಂದು ಲಕ್ಷ ಕಿ.ಮೀ.ಗಿಂತಲೂ ಮೇಲ್ಪಟ್ಟು ದೂರ ಕ್ರಮಿಸಿವೆ. ಹೀಗಾಗಿ ಅಂಥ ಕಾರನ್ನು ಬದಲಾಯಿಸುವುದು ಅನಿವಾರ್ಯವಾಗಿರುತ್ತದೆ. ಮಿತಿ ಮೀರಿ ಓಡಾಡಿದ ಕಾರನ್ನು ಮುಂದುವರಿಸಿದರೆ ಅವಘಡ ಆಗುವ ಸಾಧ್ಯತೆ ಹೆಚ್ಚಿರುವುದರಿಂದ ಹೊಸ ಕಾರು ಖರೀದಿಸುವುದು ಅನಿವಾರ್ಯವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ABOUT THE AUTHOR

...view details