ಕರ್ನಾಟಕ

karnataka

By

Published : Jan 4, 2020, 6:54 PM IST

ETV Bharat / city

ನಾನೆಂದೂ ದ್ವೇಷದ ರಾಜಕಾರಣ ಮಾಡಿಲ್ಲ, ನನ್ನಿಂದ ತೊಂದರೆಯಾಗಿದ್ದರೆ ಕ್ಷಮಿಸಿ ಬಿಡಿ: ಎಸ್.ಎಂ. ಕೃಷ್ಣ

ನಾನು ಯಾರನ್ನು ಎಂದೂ ದ್ವೇಷಿಸುವ ಪ್ರಯತ್ನ ಮಾಡಲಿಲ್ಲ. ಆದರೂ ಕಳೆದ ಮೂರು ದಶಕಗಳಲ್ಲಿ ಯಾರಿಗಾದರೂ ನನ್ನಿಂದ ತೊಂದರೆಯಾಗಿದ್ದರೆ ಅವರ ಕ್ಷಮೆಯಾಚಿಸುತ್ತೇನೆ ಎಂದು ಎಸ್.ಎಂ. ಕೃಷ್ಣ ಮನವಿ ಮಾಡಿದ್ದಾರೆ.

KN_BNG_02_SMK_SPEECH_SCRIPT 9021933
ನಾನೆಂದೂ ದ್ವೇಷದ ರಾಜಕಾರಣ ಮಾಡಿಲ್ಲ, ಯಾರಿಗೂ ತೊಂದರೆ ಕೊಟ್ಟಿಲ್ಲ,ತೊಂದರೆಯಾಗಿದ್ದರೆ ಕ್ಷಮಿಸಿ ಬಿಡಿ: ಎಸ್.ಎಂ ಕೃಷ್ಣ ಮನವಿ

ಬೆಂಗಳೂರು: ನಾನು ಯಾರನ್ನು ಎಂದೂ ದ್ವೇಷ ಮಾಡುವ ಪ್ರಯತ್ನ ಮಾಡಲಿಲ್ಲ. ಆದರೂ ಕಳೆದ ಮೂರು ದಶಕಗಳಲ್ಲಿ ಯಾರಿಗಾದರೂ ನನ್ನಿಂದ ತೊಂದರೆಯಾಗಿದ್ದರೆ ಅವರ ಕ್ಷಮೆಯಾಚಿಸುತ್ತೇನೆ ಎಂದು ಎಸ್.ಎಂ ಕೃಷ್ಣ ಮನವಿ ಮಾಡಿದ್ದಾರೆ.

ನಾನೆಂದೂ ದ್ವೇಷದ ರಾಜಕಾರಣ ಮಾಡಿಲ್ಲ, ಯಾರಿಗೂ ತೊಂದರೆ ಕೊಟ್ಟಿಲ್ಲ,ತೊಂದರೆಯಾಗಿದ್ದರೆ ಕ್ಷಮಿಸಿ ಬಿಡಿ: ಎಸ್.ಎಂ ಕೃಷ್ಣ ಮನವಿ
ತಮ್ಮ ಸಾರ್ಥಕ ಸಂಸದೀಯ ನೆನಪುಗಳನ್ನು ಒಳಗೊಂಡ ಕೃಷ್ಣಪಥ‌ ಸೇರಿ ಸಾಧನೆ-ಸಿದ್ದಿಗಳ ಪರಿಚಯ ಮತ್ತು ಆಕರ ಗ್ರಂಥಗಳು ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಈಗ ಪ್ರಜಾಪ್ರಭುತ್ವ ಹಣಬಲದ ಮೇಲೆ ನಿಂತಿದೆ. ಒಳ್ಳೆಯ ದಿನಗಳನ್ನು ನೋಡಿ ಬಾಳ ಮುಸ್ಸಂಜೆಯಲ್ಲಿರುವ ನಮ್ಮಂತ ಕಾರ್ಯಕರ್ತರಿಗೆ ಇದು ಕಳವಳ‌ ಮೂಡಿಸುತ್ತಿದೆ. ಎಲ್ಲಿಯವರಗೆ ಹಣದ ಪ್ರಭಾವ ಇರುತ್ತದೊ ಅಲ್ಲಿಯವರಗೆ ಒಳ್ಳೆಯ ರಾಜಕಾರಣ ಸಾಧ್ಯವಿಲ್ಲ. ಇದಕ್ಕೆ ಪರಿಹಾರವೆಂದರೆ ಹೊಸದಾಗಿ ರಾಜಕೀಯ ಪ್ರವೇಶ ಮಾಡುತ್ತಿರುವ ಯುವ ಸಮೂಹ ಚಿಂತನೆ ನಡೆಸಬೇಕು ಎಂದು ಕರೆ ನೀಡಿದರು.
ಮೊದಲೆಲ್ಲಾ ದೇವರೇ ಕಷ್ಟಗಳನ್ನೆಲ್ಲಾ ನನಗೊಬ್ಬನಿಗೆ ಏಕೆ ಕೊಟ್ಟೆ ಎಲ್ಲರಿಗೂ ಸ್ವಲ್ಪಸ್ವಲ್ಪ ಹಂಚು ಎಂದು ಕೇಳುತ್ತಿದ್ದೆ‌. ರಾಜ್ ಕುಮಾರ್ ರನ್ನು ವೀರಪ್ಪನ್ ಅಪಹರಣ ಮಾಡಿದಾಗ ನನ್ನಲ್ಲಿ ತಳಮಳ ಇದ್ದಿದ್ದು ನಿಜ. ಆದರೆ ಎದೆಗುಂದಲಿಲ್ಲ ಧೈರ್ಯವಾಗಿ ಎದುರಿಸಿ, ಸವಾಲುಗಳೇ ಮನುಷ್ಯನನ್ನ ನಾಯಕನನ್ನಾಗಿ ಮಾಡುತ್ತದೆ ಎಂಬುದು ಸತ್ಯ. ಆ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ತಮಿಳರ ಆಸ್ತಿಪಾಸ್ತಿಗಳಿಗೆ ತೊಂದರೆಯಾಗುತ್ತದೆ ಎಂಬ ಭಯ ತಳಮಳ ಇತ್ತು. ಆದರೆ ಮುನ್ನೆಚ್ಚರಿಕೆ ತೆಗೆದುಕೊಂಡ ಕಾರಣ ಧೈರ್ಯವಾಗಿ ಪರಿಸ್ಥಿತಿ ನಿಭಾಯಿಸಿದೆವು ಎಂದು ಹಳೆಯ ನೆನಪುಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು.

For All Latest Updates

TAGGED:

ABOUT THE AUTHOR

...view details