ಬೆಂಗಳೂರು: ಸ್ನಾತಕೋತ್ತರ ದಂತ ವೈದ್ಯಕೀಯ ಕೋರ್ಸುಗಳ ಪ್ರದೇಶಕ್ಕಾಗಿ, NEET MDS 2021 ರಲ್ಲಿ ಕನಿಷ್ಠ ಅರ್ಹತೆಯ ಅಂಕಗಳನ್ನ ಪರಿಷ್ಕರಿಸಿದೆ. ಈ ಹಿನ್ನೆಲೆಯಲ್ಲಿ ಪ್ರಾಧಿಕಾರದಲ್ಲಿ ಆನ್‌ಲೈನ್ ಮೂಲಕ ನೊಂದಾಯಿಸಿರುವ ಅರ್ಹ ಅಭ್ಯರ್ಥಿಗಳು (NEET MDS 2021 Enrollment Review) ನವೆಂಬರ್ 18 ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 2.30 ರವರೆಗೆ ನಡೆಯಲಿದ್ದು, ದಾಖಲಾತಿ ಪರಿಶೀಲನೆಗೆ ಹಾಜರಾಗಲು ಕೆಇಎ ಸೂಚಿಸಿದೆ.
NEET MDS 2021: ಪಿಜಿ ದಂತ ವೈದ್ಯಕೀಯ ದಾಖಲಾತಿ ಪರಿಶೀಲನೆಗೆ ಸೂಚನೆ - NEET MDS 2021 Enrollment list
NEET MDS 2021 ಸ್ನಾತಕೋತ್ತರ ದಂತ ವೈದ್ಯಕೀಯ ಕೋರ್ಸ್ಗಳು ಪ್ರವೇಶಕ್ಕಾಗಿ ಕನಿಷ್ಠ ಅರ್ಹತೆಯ ಅಂಕಗಳನ್ನ ಪರಿಷ್ಕರಿಸಿದ್ದು, ಪ್ರಾಧಿಕಾರದಲ್ಲಿ ಆನ್‌ಲೈನ್ ಮೂಲಕ ನೊಂದಾಯಿಸಿರುವ ಅರ್ಹ ಅಭ್ಯರ್ಥಿಗಳು ನವೆಂಬರ್ 18 ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 2.30 ರವರೆಗೆ ದಾಖಲಾತಿ ಪರಿಶೀಲನೆಗೆ (NEET MDS 2021 Enrollment Review) ಹಾಜರಾಗಲು ಕೆಇಎ ಸೂಚನೆ ನೀಡಿದೆ.
![NEET MDS 2021: ಪಿಜಿ ದಂತ ವೈದ್ಯಕೀಯ ದಾಖಲಾತಿ ಪರಿಶೀಲನೆಗೆ ಸೂಚನೆ NEET MDS 2021](https://etvbharatimages.akamaized.net/etvbharat/prod-images/768-512-13646986-thumbnail-3x2-kdkdd.jpg)
ಪಿಜಿ ದಂತ ವೈದ್ಯಕೀಯ ದಾಖಲಾತಿ ಪರಿಶೀಲನೆ
ಈ ಮೊದಲು ನೋಂದಣಿ ಮಾಡಿ ದಾಖಲಾತಿ ಪರಿಶೀಲನೆ ಪೂರ್ಣಗೊಳಿಸದಿರುವ ಅರ್ಹ ಅಭ್ಯರ್ಥಿಗಳೂ ಎಲ್ಲಾ ಮೂಲ ದಾಖಲಾತಿಗಳೊಂದಿಗೆ ದಾಖಲಾತಿ ಪರಿಶೀಲನೆಗೆ ಹಾಜರಾಗಬಹುದಾಗಿದೆ.
NEET-PG 2021 ಮಾಹಿತಿ ಪುಸ್ತಕದಲ್ಲಿ ಅರ್ಹತಾ ಮಾನದಂಡಗಳನ್ನು ಮತ್ತು ದಾಖಲಾತಿ ಪರಿಶೀಲನೆಗೆ ಸಲ್ಲಿಸಬೇಕಾದ ಮೂಲ ದಾಖಲೆಗಳ ವಿವರಗಳನ್ನು ಅಭ್ಯರ್ಥಿಗಳ ಮಾಹಿತಿ ಪ್ರಾಧಿಕಾರದ ವೆಬ್ಸೈಟ್ನಲ್ಲಿ ನೋಡಬಹುದಾಗಿದೆ. ದಾಖಲಾತಿ ಪರಿಶೀಲನೆಯನ್ನು ಪೂರ್ಣಗೊಳಿಸುವ ಅಭ್ಯರ್ಥಿಗಳು ಮಾತ್ರ ಪಿಜಿ ದಂತವೈದ್ಯಕೀಯ ಸೀಟಿಗೆ ಅರ್ಹತೆ ಪಡೆಯಲಿದ್ದಾರೆ.