ಕರ್ನಾಟಕ

karnataka

ETV Bharat / city

ರಾಜ್ಯದಲ್ಲಿ ಮೊಟ್ಟ ಮೊದಲ ದೃಷ್ಟಿ ಪುನರ್ವಸತಿ ಕೇಂದ್ರ ಆರಂಭ: ಡಾ.ಕೆ.ಭುಜಂಗ ಶೆಟ್ಟಿ - ದೃಷ್ಟಿ ಪುನರ್ವಸತಿ ಕೇಂದ್ರ ಆರಂಭಕ್ಕೆ ಮುಂದಾದ ನಾರಾಯಣ ನೇತ್ರಾಲಯ

ನಾರಾಯಣ ನೇತ್ರಾಲಯದಿಂದ ನೇತ್ರ ರೋಗಗಳಿರುವ ಮಕ್ಕಳಿಗೆ ರಾಜ್ಯದಲ್ಲಿಯೇ ಮೊಟ್ಟಮೊದಲ ಬಾರಿಗೆ ಅತ್ಯಾಧುನಿಕ ದೃಷ್ಟಿ ಪುನರ್ವಸತಿ ಕೇಂದ್ರ ಆರಂಭಗೊಳ್ಳುತ್ತಿದೆ.

Narayana Nethralaya start of the vision rehabilitation cente
ಮೊಟ್ಟ ಮೊದಲ ದೃಷ್ಟಿ ಪುನರ್ವಸತಿ ಕೇಂದ್ರ ಆರಂಭಕ್ಕೆ ಮುಂದಾದ ನಾರಾಯಣ ನೇತ್ರಾಲಯ

By

Published : Dec 28, 2019, 12:26 PM IST

ಬೆಂಗಳೂರು:ನಾರಾಯಣ ನೇತ್ರಾಲಯರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ಅತ್ಯಾಧುನಿಕ ದೃಷ್ಟಿ ಪುನರ್ವಸತಿ ಕೇಂದ್ರ ಆರಂಭಿಸಲಿದೆ. ರೆಟಿನಲ್ ಡಿಸ್ಟ್ರೊಫೀಸ್ ಮತ್ತು ಬೆಳವಣಿಗೆಯ ವೈಪರೀತ್ಯಗಳಂತಹ ಚಿಕಿತ್ಸೆ ನೀಡಲಾಗದ ಸಮಸ್ಯೆಗಳಿಂದ ಬಳಲುತ್ತಿರುವ ಮಕ್ಕಳಿಗೆ ಅತ್ಯಾಧುನಿಕ ಪುನರ್ವಸತಿ ಕೇಂದ್ರದಿಂದ ಅನುಕೂಲವಾಗಲಿದೆ.

ಮೊಟ್ಟ ಮೊದಲ ದೃಷ್ಟಿ ಪುನರ್ವಸತಿ ಕೇಂದ್ರ ಆರಂಭಕ್ಕೆ ಮುಂದಾದ ನಾರಾಯಣ ನೇತ್ರಾಲಯ

ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಾರಾಯಣ ನೇತ್ರಾಲಯದ ವ್ಯವಸ್ಥಾಪಕ ನಿರ್ದೇಶಕ ಡಾ.ಕೆ.ಭುಜಂಗ ಶೆಟ್ಟಿ, ದೇಶದಲ್ಲಿ ಅಂದಾಜು 3 ಲಕ್ಷಕ್ಕೂ ಹೆಚ್ಚು ಮಕ್ಕಳು ನೇತ್ರ ರೋಗಗಳಿಂದ ಬಳಲುತ್ತಿದ್ದಾರೆ. ಅವರಲ್ಲಿ ಬಹಳಷ್ಟು ಮಂದಿ ಭಾಗಶಃ ದೃಷ್ಟಿ ಸಮಸ್ಯೆ ಎದುರಿಸುತ್ತಿದ್ದಾರೆ‌‌. ಮುಖ್ಯವಾಗಿ ಕಾರ್ಟಿಕಲ್ ವಿಷನ್, ಇಂಪೇರ್‌ಮೆಂಟ್, ರೆಟಿನಲ್ ಡಿಸ್ಟ್ರೊಫೀಸ್‌ ಸಮಸ್ಯೆ ಈ ಮಕ್ಕಳನ್ನು ಬಾಧಿಸುತ್ತಿದೆ. ಈ ಮಕ್ಕಳಿಗೆ ದೃಷ್ಟಿ ಪುನರ್ವಸತಿ ಅಗತ್ಯವಿದೆ ಎಂದು ತಿಳಿಸಿದರು.

ABOUT THE AUTHOR

...view details