ಕರ್ನಾಟಕ

karnataka

ETV Bharat / city

ಒಕ್ಕಲಿಗ ಅಭಿವೃದ್ಧಿ ನಿಗಮ ಸ್ಥಾಪನೆಗೆ ನಂಜಾವಧೂತ ಸ್ವಾಮೀಜಿ ಪಟ್ಟು - ಒಕ್ಕಲಿಗ ಅಭಿವೃದ್ಧಿ ನಿಗಮ ಸ್ಥಾಪನೆ

ಸರ್ಕಾರ ಬಸವಣ್ಣನವರ ಆಶಯದಂತೆ ವೀರಶೈವ ಲಿಂಗಾಯತ ಅಭಿವೃದ್ದಿ ನಿಗಮ ಸ್ಥಾಪನೆ ಮಾಡಿದ್ದು, ಸಮುದಾಯದ ಅಭಿವೃದ್ದಿಗೆ ಸರ್ಕಾರ ಮುಂದಾಗಿದೆ. ಹಾಗೆಯೇ ಒಕ್ಕಲಿಗ ಸಮುದಾಯದಲ್ಲಿ ಸಹ ಸಾಕಷ್ಟು ಸಮಸ್ಯೆಗಳಿದ್ದು, ಕೆಲವರು ಬೀದಿಗೆ ಬಿದ್ದಿದ್ದಾರೆ ಎಂದರು..

Nanjavaduta Swamiji
ನಂಜಾವಧೂತ ಸ್ವಾಮೀಜಿ

By

Published : Nov 28, 2020, 1:00 PM IST

Updated : Nov 28, 2020, 7:58 PM IST

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸಾಕಷ್ಟು ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ಲಿಂಗಾಯತ ಅಭಿವೃದ್ಧಿ ನಿಗಮದಂತೆ ಒಕ್ಕಲಿಗರ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವಂತೆ ನಂಜಾವಧೂತ ಸ್ವಾಮೀಜಿ ಪಟ್ಟು ಹಿಡಿದ್ದಾರೆ.

ರಾಜ್ಯದಲ್ಲಿ ಬಹುದೊಡ್ಡ ಸಮುದಾಯವಾಗಿ ಒಕ್ಕಲಿಗ ಸಮುದಾಯ ಹೊರಹೊಮ್ಮಿದೆ. ಅವರ ಭಾವನೆ, ಅನಿಸಿಕೆಗಳನ್ನು ಸರ್ಕಾರಕ್ಕೆ ತಿಳಿಸುವುದು ಅನಿವಾರ್ಯವಾಗಿದೆ. ಒಕ್ಕಲಿಗ ಸಮುದಾಯ ಸರ್ವರಿಗೂ ಸಮಪಾಲು ಕೊಟ್ಟಿದೆ. ನಮ್ಮ ಸಮುದಾಯದಲ್ಲೂ ಕೂಡ ಬಡತನ ರೇಖೆಗಿಂತ ಕೆಳಗಿರುವವರು ಹೆಚ್ಚಿನ ಜನರಿದ್ದು, ಸರ್ಕಾರ ಗಮನ ಹರಿಸಬೇಕು ಎಂದು ತಿಳಿಸಿದ್ದಾರೆ.

ನಂಜಾವಧೂತ ಸ್ವಾಮೀಜಿ

ಸರ್ಕಾರ ಬಸವಣ್ಣನವರ ಆಶಯದಂತೆ ವೀರಶೈವ ಲಿಂಗಾಯತ ಅಭಿವೃದ್ದಿ ನಿಗಮ ಸ್ಥಾಪನೆ ಮಾಡಿದ್ದು, ಸಮುದಾಯದ ಅಭಿವೃದ್ದಿಗೆ ಸರ್ಕಾರ ಮುಂದಾಗಿದೆ. ಹಾಗೆಯೇ ಒಕ್ಕಲಿಗ ಸಮುದಾಯದಲ್ಲಿ ಸಹ ಸಾಕಷ್ಟು ಸಮಸ್ಯೆಗಳಿದ್ದು, ಕೆಲವರು ಬೀದಿಗೆ ಬಿದ್ದಿದ್ದಾರೆ ಎಂದರು.

ಒಕ್ಕಲಿಗ ಸಮುದಾಯಕ್ಕೂ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವಂತೆ ಮಾಜಿ ಸಿಎಂ ಹೆಚ್‌ ಡಿ ಕುಮಾರಸ್ವಾಮಿ ಒತ್ತಾಯಿಸಿದ್ದರು. ಇದೀಗ ಸರ್ಕಾರ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿ, ಒಂದು ಸಾವಿರ ಕೋಟಿ ಅನುದಾನ ಮೀಸಲಿಡಬೇಕು ಮತ್ತು ವೀರಶೈವ ಲಿಂಗಾಯತ ಸಮುದಾಯವನ್ನು ಒಬಿಸಿಗೆ ಸೇರಿಸುವ ಮಾದರಿ ಒಕ್ಕಲಿಗ ಸಮುದಾಯವನ್ನು ಒಬಿಸಿ ಪಟ್ಟಿಗೆ ಸೇರಿಸುವಂತೆ ಮನವಿ ಮಾಡಿದರು.

Last Updated : Nov 28, 2020, 7:58 PM IST

ABOUT THE AUTHOR

...view details