ಬೆಂಗಳೂರು:ಕೊರೊನಾ ಹರಡುವಿಕೆ ನಿಯಂತ್ರಿಸಲು ಹೇರಿದ್ದ ಲಾಕ್ಡೌನ್ ಅನ್ನು ಹಂತ ಹಂತವಾಗಿ ಸಡಿಲಿಸಿ ರಾಜ್ಯದಲ್ಲಿ ಬಿಎಂಟಿಸಿ, ಕೆಎಸ್ಆರ್ಟಿಸಿ, ಖಾಸಗಿ ಬಸ್ಗಳು, ಓಲಾ-ಉಬರ್, ಕ್ಯಾಬ್ಗಳ ಸಂಚಾರಕ್ಕೆ ಸರ್ಕಾರ ಅನುಮತಿ ನೀಡಿದೆ. ಈಗ ಮೆಟ್ರೊ ಸೇವೆಗೂ ಅವಕಾಶ ನೀಡುವ ಸಾಧ್ಯತೆ ಇದೆ.
ಮೇ 31ರಂದು 4.0 ಲಾಕ್ಡೌನ್ ಮುಗಿಯಲಿದ್ದು, ಅನುಮತಿ ಸಿಕ್ಕರೆ ಜೂನ್ 1 ರಿಂದ ಸೇವೆ ಪುನರಾರಂಭಿಸಲು ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (ಬಿಎಂಆರ್ಸಿಎಲ್) ಸಿದ್ಧತೆ ನಡೆಸುತ್ತಿದೆ.
ಕೇಂದ್ರ-ರಾಜ್ಯ ಸರ್ಕಾರಗಳು ಷರತ್ತು ಬದ್ಧ ಆದೇಶ ಹೊರಡಿಸುವ ನಿರೀಕ್ಷೆಯಲ್ಲಿದ್ದು, ಮೆಟ್ರೊ ಹಳಿಗಿಳಿಸಲು ಬಿಎಂಆರ್ಸಿಎಲ್ ಸನ್ನದ್ಧವಾಗಿದೆ. ಇದಕ್ಕಾಗಿ ಮೆಟ್ರೊ ಸಿಬ್ಬಂದಿಗೆ ಕಳೆದೆರಡು ದಿನಗಳಿಂದ ತರಬೇತಿ ನೀಡಲಾಗುತ್ತಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.