ಕರ್ನಾಟಕ

karnataka

ETV Bharat / city

ಸಿದ್ದರಾಮಯ್ಯರದ್ದು ದುಷ್ಟತನದ ಬುದ್ಧಿ: ನಳಿನ್ ಕುಮಾರ್ ಕಟೀಲ್ - ಸಿದ್ದರಾಮಯ್ಯ ಟ್ವೀಟ್​ ವಾದ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಟ್ವೀಟ್​ಗೆ ಪ್ರತ್ಯುತ್ತರ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಿದ್ದರಾಮಯ್ಯ ಜನರ ಜೀವನ ಜೊತೆ ಆಟವಾಡುವ ಮೂಲಕ ಕೊಲೆಗಡುಕ ಆಗುತ್ತಾರೆ ಎಂದು ವಾಗ್ದಾಳಿ ನಡೆಸಿದರು.

nalin-kumar-kateel-reation-for-siddaramaiah-tweet
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್​ ಕಟೀಲ್​​

By

Published : Jul 6, 2020, 11:29 PM IST

ಬೆಂಗಳೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಜನರ ಬದುಕಿನ ಜೊತೆ ಚೆಲ್ಲಾಟ ಆಡುತ್ತಿದ್ದಾರೆ, ಇದು ದುಷ್ಟತನದ ಬುದ್ಧಿ. ಈ ರೀತಿ ಮಾಡಿದರೆ ಅವರೇ ಕೊಲೆಗಡುಕ ಆಗುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿರುಗೇಟು ನೀಡಿದ್ದಾರೆ.

ಸಿದ್ದರಾಮಯ್ಯ ಟ್ವೀಟ್​ಗೆ ತಿರುಗೇಟು ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್​ ಕಟೀಲ್​​
ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಟ್ವೀಟ್​ಗೆ ಕಿಡಿಕಾರಿದರು. ಸಿದ್ದರಾಮಯ್ಯ ಐದು ವರ್ಷ ಏನು ಮಾಡಿದ್ದರು ಎಂದು ಗೊತ್ತಿದೆ. ಡಿವೈಎಸ್​ಪಿ ಗಣಪತಿ, ಡಿಕೆ ರವಿ ಸಾವಿಗೀಡಾದಾಗ, ಹಿಂದೂ ಕಾರ್ಯಕರ್ತರ ಕೊಲೆಯಾದಾಗ, ಮಂಗಳೂರಲ್ಲಿ ಜೋಡಿ ಕೊಲೆ ಆದಾಗ ಕಣ್ಣೀರು ಸುರಿಸದ ಸಿದ್ದರಾಮಯ್ಯ ಈಗ ಕೊರೊನಾ ವಿಚಾರದಲ್ಲಿ ಜನರ ಜೊತೆ ಚಲ್ಲಾಟ ಆಡುತ್ತಾ ಇದ್ದಾರೆ. ಅವರ ಐದು ವರ್ಷದ ಆಡಳಿತ ಕೊಲೆಗಡುಕ ಸರ್ಕಾರವಾಗಿತ್ತು ಎಂದು ಆರೋಪಿಸಿದರು.

ಕೊರೊನಾ ತಡೆಯಲು ಸರ್ಕಾರ ಎಲ್ಲ ಕ್ರಮ ತಗೋತಿದೆ, ಕೊರೊನಾ ನಿರ್ವಹಣೆಯಲ್ಲಿ ರಾಜ್ಯ, ದೇಶ ಯಶಸ್ಸು ಸಾಧಿಸಿದೆ. ರಾಜ್ಯದಲ್ಲಿ ಡಿಸ್ಚಾರ್ಜ್ ಆದವರು ಹೆಚ್ಚಿದ್ದಾರೆ. ಸೋಂಕಿತರ ಬಗ್ಗೆ ಎಲ್ಲ ನಿಗಾ, ಕ್ರಮ‌ವನ್ನು ಸರ್ಕಾರ ತಗೊಂಡಿದೆ ಎಂದು ತಿಳಿಸಿದರು.

ಸರ್ಕಾರಕ್ಕೆ ಕೊರೊನಾ ಕಂಟ್ರೋಲ್​ ಮಾಡುವ ಸಾಮರ್ಥ್ಯ ಇದೆ

ಬೆಂಗಳೂರು ಬಿಟ್ಟು ಜನ ಹೋಗುತ್ತಿರುವ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಕಟೀಲ್, ಸರ್ಕಾರ ಎಲ್ಲಾ ಎಚ್ಚರಿಕೆ ಕ್ರಮ ತಗೊಂಡಿದೆ. ನಮ್ಮಲ್ಲಿ ಲಾಕ್ ಡೌನ್ ಬಗ್ಗೆ ಸ್ಪಷ್ಟತೆ ಇದೆ. ವಾರದಲ್ಲಿ ಒಂದು ದಿನ ಲಾಕ್ ಡೌನ್ ಮಾಡಿದ್ದಾರೆ. ಹೀಗಾಗಿ ಮತ್ತೆ ಸಂಪೂರ್ಣ ಲಾಕ್ ಡೌನ್ ಇರಲ್ಲ ಎಂದು ಸರ್ಕಾರ ಹೇಳಿದೆ. ನಮಗೆ ಕೊರೊನಾ ಕಂಟ್ರೋಲ್ ಮಾಡುವ ಸಾಮರ್ಥ್ಯ ಇದೆ. ಯಾರೂ ಭಯಪಡಬೇಡಿ ಸರ್ಕಾರ ನಿಮ್ಮ ಜೊತೆ ಇದೆ ಎಂದು ಮನವಿ ಮಾಡಿದರು.

ಜನ ಸಂವಾದ ರ‌್ಯಾಲಿಯ ಸಮಾರೋಪ

ಮೋದಿಯವರ ನೇತೃತ್ವದ ಎರಡನೇ ಅವಧಿಯ ಸರ್ಕಾರ ಒಂದು ವರ್ಷ ಪೂರೈಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 350 ರ‌್ಯಾಲಿ, 45 ಲಕ್ಷ ಮನೆಗಳ ಸಂಪರ್ಕ ಅಭಿಯಾನ ನಡೆಸಲಾಯಿತು. ಇದರ ಸಮಾರೋಪ ಸಮಾರಂಭ ಇವತ್ತು ನಡೆದಿದ್ದು, ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ. ಎಲ್. ಸಂತೋಷ್ ಅವರು ಕಾರ್ಯಕರ್ತರಿಗೆ ಉತ್ತೇಜನ ಕೊಡುವ ಭಾಷಣ ಮಾಡಿದರು ಎಂದರು‌.

ABOUT THE AUTHOR

...view details