ಬೆಂಗಳೂರು:ಹುಣುಸೂರು ಜಿಲ್ಲೆ ರಚನೆ ಸಂಬಂಧ ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಮೈಸೂರು ಭಾಗದ ಜನಪ್ರತಿನಿಧಿಗಳ ಸಹಕಾರ ಸಿಗುವ ವಿಶ್ವಾಸವಿದೆ ಎಂದು ಅನರ್ಹ ಶಾಸಕ ಹೆಚ್ ವಿಶ್ವನಾಥ್ ತಿಳಿಸಿದ್ದಾರೆ.
ಹುಣಸೂರು ಜಿಲ್ಲೆ ಆಗಿ ಅದಕ್ಕೆ ದೇವರಾಜ ಅರಸು ಹೆಸರೇ ಇಡಬೇಕು.. ಹೆಚ್.ವಿಶ್ವನಾಥ್ - bangalore news
ಹುಣುಸೂರು ಜಿಲ್ಲೆ ರಚನೆ ಸಂಬಂಧ ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಮೈಸೂರು ಭಾಗದ ಜನಪ್ರತಿನಿಧಿಗಳ ಸಹಕಾರ ಸಿಗುವ ವಿಶ್ವಾಸವಿದೆ ಎಂದು ಅನರ್ಹ ಶಾಸಕ ಹೆಚ್ ವಿಶ್ವನಾಥ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಹೊಸ ಜಿಲ್ಲೆ ರಚನೆ ಸಂಬಂಧ ಎಲ್ಲಾ ಮೈಸೂರು ಭಾಗದ ಜನಪ್ರತಿನಿಧಿಗಳ ಬೆಂಬಲ ಸಿಗುವ ವಿಶ್ವಾಸವಿದೆ. ಹುಣಸೂರು ಉಪ ಚುನಾವಣೆಗೂ ಹೊಸ ಜಿಲ್ಲೆಯ ರಚನೆಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು. ಹಿಂದುಳಿದ ವರ್ಗದ ನಾಯಕ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಹೆಸರಿನಲ್ಲಿ ಜಿಲ್ಲೆಯಾಗಬೇಕು. ಕರ್ನಾಟಕ ಎಂದು ಪುನರ್ ನಾಮಕರಣ ಮಾಡಿದ ಧೀಮಂತ ನಾಯಕ ದೇವರಾಜ ಅರಸು. ಹಾಗಾಗಿ ಅವರ ಹೆಸರಿನಲ್ಲಿ ಹುಣಸೂರು,ಪಿರಿಯಾಪಟ್ಟಣ,ಕೆಆರ್‌ನಗರ ಸೇರಿ 6 ತಾಲೂಕುಗಳನ್ನ ಒಳಗೊಂಡಂತೆ ಜಿಲ್ಲೆ ಆಗಬೇಕು. ಈ ಬಗ್ಗೆ ಮೈಸೂರು ಭಾಗದ ಜನರ ಮುಂದೆ ವಿಷಯ ಇಡಲಾಗುವುದು ಎಂದರು.
ಈಗಾಗಲೇ ಸಿಎಂ ಮುಂದೆ ನಾವು ಈ ಪ್ರಸ್ತಾವನೆ ಇಟ್ಟಿದ್ದೇವೆ. ದೇವರಾಜ್ ಅರಸು ಹೆಸರಲ್ಲಿ ಜಿಲ್ಲೆ ಮಾಡಬೇಕು ಅನ್ನೋದು ನಮ್ಮ ಒತ್ತಾಯ. ಶ್ರೀಘ್ರದಲ್ಲೆ 6 ತಾಲೂಕಿನ ಜನ ಪ್ರತಿನಿಧಿಗಳು,ಸಂಘ ಸಂಸ್ಥೆಗಳ ಜೊತೆ ಸಭೆ ಮಾಡುತ್ತೇವೆ. ಹೊಸ ಜಿಲ್ಲೆಗೆ ಸಂಬಂಧಿಸಿದಂತೆ ಒಂದು ಸಮಿತಿಯನ್ನು ರಚನೆ ಮಾಡುತ್ತೇವೆ. ಆ ನಂತರ ಹೋರಾಟದ ರೂಪುರೇಷೆಗಳನ್ನು ಸಿದ್ದಪಡಿಸುತ್ತೇವೆ ಎಂದಿದ್ದಾರೆ.