ಕರ್ನಾಟಕ

karnataka

ETV Bharat / city

ಮೈಸೂರು ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಮರಣ ದಂಡನೆಗೆ ಕ್ರಮ.. ಸಿಎಂ ಬಿ ಎಸ್‌ ಬೊಮ್ಮಾಯಿ - ವಿಧಾನಸಭೆ ಅಧಿವೇಶನ ನೇರ ಪ್ರಸಾರ

ರಾಜ್ಯದಲ್ಲಿ ಒಂದು ಲಕ್ಷಕ್ಕೆ ಜನರಿಗೆ 192 ಪೊಲೀಸರು ಇರುತ್ತಾರೆ. ಮೈಸೂರಿನಲ್ಲಿ ಪೊಲೀಸರ ಸಂಖ್ಯೆ 1 ಲಕ್ಷಕ್ಕೆ 317 ಇದೆ. ಹೊಯ್ಸಳ 20 ಹಾಗೂ ಪೆಟ್ರೋಲಿಂಗ್ ವಾಹನ 23 ಇವೆ. ಒಟ್ಟು 45 ಗಸ್ತು ವಾಹನಗಳಿವೆ. ರಾತ್ರಿ 250 ಮಂದಿ ಪೊಲೀಸರು ಗಸ್ತು ತಿರುಗುತ್ತಿದ್ದಾರೆ‌ ಎಂದು ಸದನಕ್ಕೆ ಗೃಹ ಸಚಿವರು ಮಾಹಿತಿ ನೀಡಿದರು..

Mysore rape case; Home Minister Araga Jnanendra answer in Assembly Session
ಮೈಸೂರು ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಮರಣ ದಂಡನೆಗೆ ಕ್ರಮ - ಸಿಎಂ ಬೊಮ್ಮಾಯಿ

By

Published : Sep 22, 2021, 8:26 PM IST

ಬೆಂಗಳೂರು :ಮೈಸೂರು ಅತ್ಯಾಚಾರ ಪ್ರಕರಣದ ತನಿಖೆಯನ್ನು ಬಿಗಿಯಾಗಿ ಮಾಡುತ್ತೇವೆ. ಸರಿಯಾದ ರೀತಿಯಲ್ಲಿ ಚಾರ್ಜ್‌ಶೀಟ್ ಹಾಕುತ್ತೇವೆ. ಈ ಪ್ರಕರಣದ ತನಿಖೆ ದೃಷ್ಟಿಯಿಂದ ವಿಶೇಷ ಅಭಿಯೋಜಕರನ್ನು ನೇಮಕ ಮಾಡುತ್ತೇವೆ. ಅಷ್ಟೇ ಅಲ್ಲ, ಆರೋಪಿಗಳಿಗೆ ಮರಣ ದಂಡನೆ ಶಿಕ್ಷೆ ಆಗುವಂತೆ ನೋಡಿಕೊಳ್ಳುತ್ತೇವೆ ಎಂದು ವಿಧಾನಸಭೆ ಕಲಾಪದಲ್ಲಿ ಸಿಎಂ ಬೊಮ್ಮಾಯಿ ಭರವಸೆ ನೀಡಿದರು.

ಮೈಸೂರು ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಮರಣ ದಂಡನೆಗೆ ಕ್ರಮ - ಸಿಎಂ ಬೊಮ್ಮಾಯಿ

ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಚರ್ಚೆ, ಗೃಹ ಸಚಿವರ ಉತ್ತರದ ಬಳಿ ಮಾತನಾಡಿದ ಸಿಎಂ, ಮುಂಬೈಗೆ ಹೋಗಿದ್ದ ಪೊಲೀಸರು ಸಂತ್ರಸ್ತೆ ಮನವೊಲಿಸಿ ಹೇಳಿಕೆ ಪಡೆದುಕೊಂಡಿದ್ದಾರೆ. ತನಿಖೆಗೆ ಏನು ತೊಂದರೆ ಆಗುವುದಿಲ್ಲ. ಸ್ಪೀಡ್‌ ಟ್ರ್ಯಾಕ್‌ನಲ್ಲಿ ಪ್ರಕರಣದ ತನಿಖೆ ಮಾಡುತ್ತೇವೆ ಎಂದರು.

ಶೂಟ್‌ಔಟ್ ಪ್ರಕರಣದ ಯುವಕನ ಕುಟುಂಬಕ್ಕೆ ಪರಿಹಾರ
ಮೈಸೂರು ದಡಹಳ್ಳಿಯಲ್ಲಿ ನಡೆದ ಶೂಟೌಟ್‌ ಪ್ರಕರಣದಲ್ಲಿ ಮೃತಪಟ್ಟ ಯುವಕನ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ನೀಡಲಾಗುವುದು ಎಂದು ಸಿಎಂ ತಿಳಿಸಿದರು. ಇದನ್ನೂ ಮೈಸೂರು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಲುವಳಿ ಸೂಚನೆ ಅಡಿಯಲ್ಲಿ ನಡೆದ ಚರ್ಚೆಗೆ ಉತ್ತರಿಸಿದ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು, ಪ್ರಕರಣವನ್ನು ಮುಚ್ಚಿ ಹಾಕುವ ಯಾವುದೇ ಪ್ರಯತ್ನ ಮಾಡಲು ಸಾಧ್ಯವಿಲ್ಲ. ಪೊಲೀಸರು ಅತ್ಯುತ್ತಮ ಕೆಲಸ ಮಾಡಿದ್ದಾರೆ ಎಂದು ಸಮರ್ಥಿಸಿಕೊಂಡರು.

ಮನುಷ್ಯನಲ್ಲಿ ಇರುವ ರಾಕ್ಷಸಿ ಗುಣ ಉದ್ದೀಪನಗೊಂಡಾಗ ಇಂತಹ ಘಟನೆ ನಡೆದು ಬಿಡುತ್ತದೆ. ಸರ್ಕಾರ ಆ ಸಂದರ್ಭದಲ್ಲಿ ಏನು ಮಾಡಿದೆ ಎಂದು ಕೇಳಿದರೆ ನಿರುತ್ತರರಾಗುತ್ತೇವೆ. ಇಂತಹ ನೀಚ ಕೆಲಸ ಮಾಡಿದವರಿಗೆ ಸದನದಿಂದ ಒಂದು ಸಂದೇಶ ಹೋಗಬೇಕು. ಗಂಡು ಮಕ್ಕಳು ಕೂಡ ತಾಯಿಯ ಮಕ್ಕಳು. ಯಾರು ಈ ಕೆಲಸವನ್ನು ಸರಿ ಎಂದು ಹೇಳಲ್ಲ ಎಂದರು.

ತಂದೆ ವ್ಯಭಿಚಾರಿ ಎಂದರೆ ಕೋಪ ಬರಲ್ಲ, ತಾಯಿಯನ್ನು ಹಾಗಂದರೆ ನಾವು ಸಹಿಸುವುದಿಲ್ಲ. ಹೆಣ್ಣಿನ ಶೀಲದ ಬಗ್ಗೆ ಪಾವಿತ್ರತೆಯ ಭಾವನೆ ಇದೆ.‌‌ ಈ ಮಾನಸಿಕತೆಯಿಂದ ನಾವು ಎಚ್ಚರಿಕೆಯಿಂದ ಇರಿ ಎಂದು ಹೆಣ್ಣು ಮಕ್ಕಳಿಗೆ ಹೇಳುತ್ತೇವೆ. ಅಂತಹ‌ ಸಂದರ್ಭದಲ್ಲಿ ಇಂತಹ ಉದ್ಘಾರ ಬರುತ್ತದೆ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.

ಈ ಪ್ರಕರಣದಲ್ಲಿ ಪೊಲೀಸರು ವಿಶೇಷ ಆಸಕ್ತಿ ವಹಿಸಿಕೊಂಡು ಬೇರೆ ಬೇರೆ ಸಾಕ್ಷಾಧಾರಗಳ ಆಧರಿಸಿ ಕ್ರಮ ಕೈಗೊಂಡಿದ್ದಾರೆ‌.‌ ಯುವಕನ ಹೇಳಿಕೆಯನ್ನು ಪೊಲೀಸರು ಪಡೆದುಕೊಂಡು ಅದರ ಆಧಾರದ ಮೇಲೆ ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಿದರು.

ಮೈಸೂರಿನಲ್ಲಿ ನಾನು ಹೋದ ರಾತ್ರಿ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ್ದೇನೆ. ಬೆಳಗ್ಗೆ 6.30ಕ್ಕೆ ಅಧಿಕಾರಿಗಳ ಜೊತೆ ಮತ್ತೊಂದು ಸಭೆ ನಡೆಸಿದ್ದೇನೆ.‌ ಬಳಿಕ ದೇವರ ಆಶೀರ್ವಾದ ಪಡೆಯಲು ಚಾಮುಂಡಿ ಬೆಟ್ಟಕ್ಕೆ ಹೋದೆ. ಆಗಲೂ ನನ್ನ ವಿರುದ್ಧ ಕಾಮೆಂಟ್‌ಗಳು ಬಂದವು. ಪೊಲೀಸ್ ಇಲಾಖೆಯಲ್ಲಿ ಪೂರ್ವ ನಿಗದಿಯಾಗಿದ್ದ ಕಾರ್ಯಕ್ರಮ ಇತ್ತು. ಆ ಕಾರಣಕ್ಕಾಗಿ ಭಾಗಿಯಾದೆ. ಪಿಸ್ತೂಲ್ ಕೊಟ್ಟು ಫೈರ್ ಮಾಡಿ ಎಂದು ಪೊಲೀಸರು ಕೊಟ್ಟರು. ಆ ಕಾರಣಕ್ಕಾಗಿ ಫೈರ್ ಮಾಡಿದೆ. ಯಾವುದೇ ಫೋಸ್ ಕೊಡುವ ಉದ್ದೇಶ ಇರಲಿಲ್ಲ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡರು.

ಮೈಸೂರು ಅತ್ಯಾಚಾರ ಪ್ರಕರಣ ಸಂಬಂಧ ವಿಧಾನಸಭೆ ಕಲಾಪದಲ್ಲಿ ಸಚಿವ ಆರಗ ಜ್ಞಾನೇಂದ್ರ ಮಾತನಾಡಿದರು.

ರಾಜ್ಯದಲ್ಲಿ ಒಂದು ಲಕ್ಷಕ್ಕೆ ಜನರಿಗೆ 192 ಪೊಲೀಸರು ಇರುತ್ತಾರೆ. ಮೈಸೂರಿನಲ್ಲಿ ಪೊಲೀಸರ ಸಂಖ್ಯೆ 1 ಲಕ್ಷಕ್ಕೆ 317 ಇದೆ. ಹೊಯ್ಸಳ 20 ಹಾಗೂ ಪೆಟ್ರೋಲಿಂಗ್ ವಾಹನ 23 ಇವೆ. ಒಟ್ಟು 45 ಗಸ್ತು ವಾಹನಗಳಿವೆ. ರಾತ್ರಿ 250 ಮಂದಿ ಪೊಲೀಸರು ಗಸ್ತು ತಿರುಗುತ್ತಿದ್ದಾರೆ‌ ಎಂದು ಸದನಕ್ಕೆ ಗೃಹ ಸಚಿವರು ಮಾಹಿತಿ ನೀಡಿದರು.

ಅತ್ಯಾಚಾರ ಪ್ರಕರಣಗಳ ಅಂಕಿ ಅಂಶಗಳನ್ನು ನೀಡಿದ ಸಚಿವರು, 2013 ರಲ್ಲಿ 13, 2014-23, 2015-18, 2016-14, 2017-13, 2018-16, 2019-14, 2020-15 ಹಾಗೂ 2021 ರಲ್ಲಿ 5 ಅತ್ಯಾಚಾರ ಪ್ರಕರಣಗಳು ನಡೆದಿವೆ ಎಂದು ಹೇಳಿದರು.

ಫಾಸ್ಟ್‌ ಟ್ರ್ಯಾಕ್ ಕೋರ್ಟ್‌ಗೆ ಸಿಜೆ ಜೆತೆ ಮಾತನಾಡಲು ಸೂಚನೆ

ಮೈಸೂರು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಫಾಸ್ಟ್ ಟ್ರ್ಯಾಕ್ ಕೋರ್ಟ್‌ಗೆ ವಿನಂತಿ ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಈ ಬಗ್ಗೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರಲ್ಲಿ ಮಾತನಾಡಲು ಹೇಳಿದ್ದೇನೆ.‌ ಸರ್ಕಾರದ ಕಡೆಯಿಂದ ವಿಶೇಷ ಅಭಿಯೋಜಕರ ನೇಮಕ ಮಾಡಿ ಈ ಕೇಸ್ ಗೆಲ್ಲಬೇಕು. ಅವರಿಗೆ ಖಾಯಂ ಶಿಕ್ಷೆ ಆಗಬೇಕು. ‌ಇದು ಸರ್ಕಾರದ ಉದ್ದೇಶ ಸಹ ಇದೆ ಎಂದರು.

ABOUT THE AUTHOR

...view details