ಕರ್ನಾಟಕ

karnataka

ETV Bharat / city

ಮೈ ಸಿಟಿ - ಮೈ ಬಜೆಟ್​​ ಅಭಿಯಾನಕ್ಕೆ ಚಾಲನೆ - My City - My Budget campaign

ಬಸ್ ಹಾಗೂ ಬ್ಯಾಟರಿ ಚಾಲಿತ ಆಟೋಗಳ ಮೂಲಕ ಜನರ ಮನೆ ಬಾಗಿಲಿಗೆ ಹೋಗಿ, ಪಾಲಿಕೆ ಬಜೆಟ್​ನಲ್ಲಿ ಮುಂದೆ ಜಾರಿಗೆ ತರಬೇಕಾದ ಅಗತ್ಯ ಯೋಜನೆಗಳ ಬಗ್ಗೆ ಅನಿಸಿಕೆ ಸಂಗ್ರಹಿಸಲು ಹಮ್ಮಿಕೊಂಡಿರುವ ಮೈ ಸಿಟಿ - ಮೈ ಬಜೆಟ್ ಎಂಬ ಅಭಿಯಾನಕ್ಕೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್​ ಚಾಲನೆ ನೀಡಿದರು.

ಅಭಿಯಾನಕ್ಕೆ ಚಾಲನೆ ನೀಡಿದ ಮಂಜುನಾಥ್ ಪ್ರಸಾದ್
ಅಭಿಯಾನಕ್ಕೆ ಚಾಲನೆ ನೀಡಿದ ಮಂಜುನಾಥ್ ಪ್ರಸಾದ್

By

Published : Dec 21, 2020, 3:53 PM IST

ಬೆಂಗಳೂರು: ಮೈ ಸಿಟಿ - ಮೈ ಬಜೆಟ್ ಎಂಬ ಅಭಿಯಾನವನ್ನು ಜನಾಗ್ರಹ ಹಾಗೂ ವಿವಿಧ ಸಂಘ ಸಂಸ್ಥೆಗಳು ನಡೆಸುತ್ತಿದ್ದು, ಆಯುಕ್ತ ಮಂಜುನಾಥ್ ಪ್ರಸಾದ್​ ಇಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಚಾಲನೆ ನೀಡಿದರು.

ಅಭಿಯಾನಕ್ಕೆ ಚಾಲನೆ ನೀಡಿದ ಮಂಜುನಾಥ್ ಪ್ರಸಾದ್

ಬಸ್ ಹಾಗೂ ಬ್ಯಾಟರಿ ಚಾಲಿತ ಆಟೋಗಳ ಮೂಲಕ ಜನರ ಮನೆ ಬಾಗಿಲಿಗೆ ಹೋಗಿ ಪಾಲಿಕೆ ಬಜೆಟ್​ನಲ್ಲಿ ಮುಂದೆ ಜಾರಿಗೆ ತರಬೇಕಾದ ಅಗತ್ಯ ಯೋಜನೆಗಳ ಬಗ್ಗೆ ಅನಿಸಿಕೆ ಸಂಗ್ರಹಿಸಲಿದ್ದಾರೆ.

ಈ ಕುರಿತು ಆಯುಕ್ತ ಮಂಜುನಾಥ್ ಪ್ರಸಾದ್ ಮಾತನಾಡಿ, ನಗರದಲ್ಲಿ 14,000 ಕಿ.ಮೀ. ರಸ್ತೆಯಿದೆ. ಈ ಎಲ್ಲ ರಸ್ತೆಗಳಲ್ಲಿ ಫುಟ್​ಪಾತ್ ಇರಬೇಕು. ಆದರೆ, ಹಲವಾರು ಕಡೆ ಫುಟ್​​​​ಪಾತ್ ಇಲ್ಲ. ಇದರಿಂದಾಗಿ ಸಾರ್ವಜನಿಕರು ಸುರಕ್ಷಿತವಾಗಿ ನಡೆದುಕೊಂಡು ಹೋಗಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಉತ್ತಮ ಫುಟ್​ಪಾತ್ ಸೇವೆ ಒದಗಿಸಿಕೊಡಬೇಕಿದೆ. ನಗರದಲ್ಲಿ 1,600 ಶೌಚಾಲಯಗಳ ಅಗತ್ಯವಿದ್ದು, ಈಗ ಕೇವಲ 478 ಶೌಚಾಲಯಗಳಿವೆ. ಹೀಗಾಗಿ ಅಗತ್ಯವಿರುವ ಕಡೆ ಶೌಚಾಲಯ ನಿರ್ಮಾಣ ಮಾಡಬೇಕಿದೆ. ಇದನ್ನು ಸಾರ್ವಜನಿಕರ ಅನಿಸಿಕೆ ಪಡೆದು ನಿರ್ಮಾಣ ಮಾಡಲಾಗುವುದು ಎಂದರು.

ಜನಾಗ್ರಹ ಟೀಂ ಲೀಡರ್ ಸ್ವಪ್ನಾ ಮಾತನಾಡಿ, 2015ರಿಂದ ಈ ಅಭಿಯಾನ ಮಾಡುತ್ತಿದ್ದು, 50 ಸಾವಿರಕ್ಕೂ ಹೆಚ್ಚು ಜನ 90 ಸಾವಿರಕ್ಕೂ ಹೆಚ್ಚು ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಬಜೆಟ್​ನಲ್ಲಿ ಏನೆಲ್ಲಾ ಪ್ರಮುಖ ಯೋಜನೆಗಳ ಅಗತ್ಯವಿದೆ ಎಂದು ಜನರು ನೀಡುವ ಮಾಹಿತಿ ಸಂಗ್ರಹಿಸಿ, ಬಿಬಿಎಂಪಿ ಬಜೆಟ್​ನಲ್ಲಿ ಅಳವಡಿಸಿಕೊಳ್ಳಲಾಗುತ್ತಿದೆ. ಈ ವರ್ಷ ಪ್ರಮುಖವಾಗಿ ಫುಟ್​ಪಾತ್ ಹಾಗೂ ಶೌಚಾಲಯ ನಿರ್ಮಾಣದ ಬಗ್ಗೆ ಹೆಚ್ಚು ಒತ್ತು ನೀಡಿ, ಎಲ್ಲಿ ಶೌಚಾಲಯದ ಅಗತ್ಯವಿದೆ ಎಂಬ ಮಾಹಿತಿ ಪಡೆಯಲಾಗುತ್ತಿದೆ. ಜನವರಿ 7ರವರೆಗೆ ಈ ಅಭಿಯಾನ ನಡೆಯಲಿದೆ ಎಂದರು.

ABOUT THE AUTHOR

...view details