ಬೆಂಗಳೂರು/ಆನೇಕಲ್: ಕೇಂದ್ರ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಅತ್ತಿಬೆಲೆಯಲ್ಲಿ ಮುಸ್ಲಿಂ ಸಮುದಾಯ ಪ್ರತಿಭಟನೆ ನಡೆಸಿ ಕಾಯ್ದೆ ಹಿಂಪಡೆಯುವಂತೆ ಆಗ್ರಹಿಸಿದರು.
ನಗರದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಸಾವಿರಾರು ಮುಸ್ಲಿಂ ಬಾಂಧವರು ಸೇರಿ ನಾವು ಭಾರತೀಯರು, ರಾಜಕಾರಣಕ್ಕಾಗಿ ಹಿಂದೂಗಳಿಂದ ನಮ್ಮನ್ನ ಬೇರ್ಪಡಿಸಬೇಡಿ ಎಂದು ಘೋಷಣೆ ಕೂಗಿದರು. ಅಲ್ಲದೆ, ಸಿಎಎ ಮತ್ತು ಎನ್ ಆರ್ಸಿ ವಾಪಸ್ ಪಡೆಯುವಂತೆ ಆಗ್ರಹಿಸಿದರು.
ಪೌರತ್ವ ತಿದ್ದುಪಡಿ ವಿರುದ್ಧ ಮುಸ್ಲಿಂ ಸಮುದಾಯದ ಪ್ರತಿಭಟನೆ ಸಮುದಾಯದ ಮುಖಂಡರು ಮಾತನಾಡಿ, ಈ ನೆಲದಲ್ಲಿ ದೇಶದ ಏಕತೆಗಾಗಿ ರಕ್ತ ಸುರಿಸಿದಷ್ಟು ಕೋಮುವಾದಿಗಳು ಬೆವರು ಸುರಿಸಿಲ್ಲ. ಡಾ. ಅಂಬೇಡ್ಕರ್ ರಚಿಸಿದ ಸಂವಿಧಾನದ ವಿರುದ್ಧ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಒಡೆದಾಳುವ ನೀತಿ ನಡೆಸಲು ಮುಂದಾಗಿದ್ದಾರೆ. ನಾವು ಭಾರತ ದೇಶದ ಮೂಲ ನಿವಾಸಿಗಳು ಸತ್ತರೂ ಇಲ್ಲೇ, ಬದುಕಿದರೂ ಇಲ್ಲೇ ಎಂದರು.
ಭಾರತ ಧರ್ಮದ ಆಧಾರದಲ್ಲಿ ನಡೆಯದು. ಧರ್ಮಕ್ಕಿಂತ ದೇಶ ಮುಖ್ಯ, ಅದನ್ನು ಇತಿಹಾಸದಲ್ಲೂ ಸಾಬೀತು ಪಡಿಸಿದ್ದೇವೆ ಎಂದು ವೇದಿಕೆಯಲ್ಲಿ ಮುಖಂಡರು ತಿಳಿಸಿದರು.