ಕರ್ನಾಟಕ

karnataka

ETV Bharat / city

ಕುಡಿದ ನಶೆಯಲ್ಲಿ ಗಲಾಟೆ: ಬೆಂಗಳೂರಲ್ಲಿ ಯುವಕನ ಬರ್ಬರ ಹತ್ಯೆ - ಭಾರತಿ ನಗರ ಪೊಲೀಸ್ ಠಾಣೆ ನ್ಯೂಸ್​

ಯುವಕನೋರ್ವನನ್ನು ಬರ್ಬರವಾಗಿ ಕೊಲೆ‌ ಮಾಡಿರುವ ಘಟನೆ ಸಿಲಿಕಾನ್ ಸಿಟಿಯ ಭಾರತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬರ್ಬರ ಹತ್ಯೆ
Murder

By

Published : Dec 30, 2019, 4:05 PM IST

ಬೆಂಗಳೂರು: ಯುವಕನೋರ್ವನನ್ನು ಬರ್ಬರವಾಗಿ ಕೊಲೆ‌ ಮಾಡಿರುವ ಘಟನೆ ಸಿಲಿಕಾನ್ ಸಿಟಿಯ ಭಾರತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಹೂವಿನ ವ್ಯಾಪಾರಿ ಇರ್ಷಾದ್ ಕೊಲೆಯಾದ ವ್ಯಕ್ತಿ ಎಂದು ತಿಳಿದು ಬಂದಿದೆ. ಕಮರ್ಷಿಲ್ ಸ್ಟ್ರೀಟ್ ನಿವಾಸಿ ಇರ್ಷಾದ್ ಸ್ನೇಹಿತರಾದ ಶಕ್ತಿವೇಲು ಮತ್ತು ಮಣಿ ಎಂಬುವವರು ನಿನ್ನೆ ರಾತ್ರಿ ಕುಡಿದು ಫುಲ್​ ಟೈಟ್​ ಆಗಿದ್ರಂತೆ. ಈ ವೇಳೆ ಕ್ಷುಲ್ಲಕ ಕಾರಣಕ್ಕೆ ಇವರ ನಡುವೆ ಗಲಾಟೆ ನಡೆದಿದೆ ಎನ್ನಲಾಗಿದೆ. ಹೀಗಾಗಿ ಕುಡಿದ ನಶೆಯಲ್ಲಿ ಶಕ್ತಿವೇಲು ಹಾಗೂ ಮಣಿ, ಇರ್ಷಾದ್ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಸದ್ಯಕ್ಕೆ ಭಾರತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ABOUT THE AUTHOR

...view details