ಆನೇಕಲ್: ಜಿಗಣಿ ಕೈಗಾರಿಕಾ ಪ್ರದೇಶದಲ್ಲಿ ನಡೆದು ಹೋಗುತ್ತಿದ್ದ ಪಾದಚಾರಿಯನ್ನು ಇರಿದು ಕೊಲೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೇಲ್ನೋಟಕ್ಕೆ ರಸ್ತೆ ಅಪಘಾತದಂತೆ ಕಂಡ ಘಟನೆ ಇದೀಗ ಕೊಲೆ ಎಂದು ತಿಳಿದು ಬಂದಿದೆ. ಪ್ರಕರಣವನ್ನು ಜಿಗಣಿ ಪೊಲೀಸರು ದಾಖಲಿಸಿಕೊಂಡಿದ್ದಾರೆ. ಕೇರಳ ಕಾಸರಗೂಡು ಮೂಲದ ಸನು ಥಾಮ್ಸನ್(31) ಕೊಲೆಯಾದವರು.
ಚಾಕುವಿನಿಂದ ಇರಿದು ಪಾದಚಾರಿಯ ಭೀಕರ ಕೊಲೆ - ಕೇರಳ ಕಾಸರಗೂಡು ಮೂಲದ ವ್ಯಕ್ತಿಯ ಸಾವು
ಟಾಟಾ ಅಡ್ವಾನ್ಸ್ನಲ್ಲಿ ಕೆಲಸ ಮಾಡುತ್ತಿದ್ದ ಕೇರಳ ಕಾಸರಗೂಡು ಮೂಲದ ವ್ಯಕ್ತಿಯ ಸಾವು ಅಪಘಾತ ಎಂದು ಭಾವಿಸಲಾಗುತ್ತು ಆದರೆ, ಅದು ಕೊಲೆ ಎಂದು ತಿಳಿದು ಬಂದಿದೆ. ಅಪರಾಧಿಗಳಿಗಾಗಿ ಹುಡುಕಾಟ ನಡೆಯುತ್ತಿದೆ.
ಚಾಕುವಿನಿಂದ ಇರಿದು ಪಾದಚಾರಿ ಭೀಕರ ಕೊಲೆ
ಜಿಗಣಿಯ ಟಾಟಾ ಅಡ್ವಾನ್ಸ್ನಲ್ಲಿ ಕೆಲಸ ಮಾಡುತ್ತಿದ್ದ ಸನು ಥಾಮ್ಸನ್ ರಾತ್ರಿ ಕೆಲಸ ಮುಗಿಸಿಕೊಂಡು ಬರುತ್ತಿದ್ದಾಗ ಮೂರು ಮಂದಿ ದುಷ್ಕರ್ಮಿಗಳು ಅಡ್ಡಗಟ್ಟಿ ಕೊಲೆ ಮಾಡಿ ಕೆಇಬಿ ಮುಂಭಾಗದಲ್ಲಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ನೂತನ ಹೆಚ್ಚುವರಿ ವರಿಷ್ಠಾದಿಕಾರಿ ಎಂ ಎಲ್ ಪುರುಷೋತ್ತಮ್, ಡಿವೈಎಸ್ಪಿ ಎಂ ಮಲ್ಲೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಿಗಣಿ ಪೋಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಸೆರೆಗೆ ಬಲೆ ಬೀಸಿದ್ದಾರೆ.
ಇದನ್ನೂ ಓದಿ :ಶೀಲ ಶಂಕಿಸಿ ಹೆಂಡತಿ ಕೊಂದ ಪತಿ