ಬೆಂಗಳೂರು:ವ್ಯಕ್ತಿಯೋರ್ವನನ್ನ ಬರ್ಬರವಾಗಿ ಕೊಲೆ ಮಾಡಿದ ಘಟನೆ ಬೆಂಗಳೂರು-ಹೊಸೂರು ಹೆದ್ದಾರಿಯ ಅತ್ತಿಬೆಲೆ ಟೋಲ್ ಬಳಿ ನಡೆದಿದೆ.
ಮುಖವನ್ನು ಕಲ್ಲಿನಿಂದ ಜಜ್ಜಿ ವ್ಯಕ್ತಿಯ ಬರ್ಬರ ಹತ್ಯೆ... - undefined
ಕಲ್ಲಿನಿಂದ ಜಜ್ಜಿ ಕೊಲೆ ಮಾಡಲಾದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯೋರ್ವನ ಪತ್ತೆಯಾಗಿದೆ. ಮುಖವನ್ನು ಜಜ್ಜಿ ಕೊಲೆ ಮಾಡಲಾಗಿದ್ದು, ಶವದ ಗುರುತು ಪತ್ತೆಯಾಗಿಲ್ಲ.
ಟೋಲ್ ಬಳಿಯ ಕಾವೇರಿ ದೇವಾಲಯದ ಹಿಂಭಾಗದ ಬಯಲಲ್ಲಿ ಕೊಲೆ ನಡೆದಿದೆ. ನಂಜುಂಡಪ್ಪ ಬಡಾವಣೆಯ ರಾಘವೇಂದ್ರ ಕಾಲನಿಯಲ್ಲಿ ಅಂದಾಜು 35-40 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯ ತಲೆಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.
ಮೇಲ್ನೋಟಕ್ಕೆ ತಡರಾತ್ರಿ ಜಗಳ ನಡೆದು ಕೊಲೆ ನಡೆದಿದೆ ಎಂದು ಕಂಡರೂ, ಮೃತ ವ್ಯಕ್ತಿಯ ಚಹರೆ ಸಿಗದಷ್ಟು ಮಟ್ಟಕ್ಕೆ ಮುಖ ಜಜ್ಜಿ, ಪರಿಚಯ ಸಿಗದಂತೆ ಕೊಲೆ ಮಾಡಲಾಗಿದೆ. ಅತ್ತಿಬೆಲೆ ಸಿಐ ಬಾಲಾಜಿ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರು ಗ್ರಾಮಾಂತರ ಎಸ್ಪಿ ರಾಮ್ ನಿವಾಸ್ ಸೆಪಟ್ ಸ್ಥಳಕ್ಕಾಗಮಿಸಿ, ಪ್ರಕರಣದ ಪ್ರಾಥಮಿಕ ವರದಿಯನ್ನು ಪರಿಶೀಲಿಸಿದ್ದಾರೆ.