ಆನೇಕಲ್: ಯುವಕನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಬೆಂಗಳೂರು-ಹೊಸೂರು ಹೆದ್ದಾರಿ ಭಾಗದ ಪರಪ್ಪನ ಅಗ್ರಹಾರ ಬಳಿಯ ಎಇಸಿಎಸ್ ಲೇಔಟ್ನಲ್ಲಿ ನಡೆದಿದೆ.
ಹಳೆ ದ್ವೇಷದಿಂದ ಮಚ್ಚಿನಿಂದ ಕೊಚ್ಚಿ ಕೊಲೆ: ಎರಡು ದಿನದ ನಂತರ ಬೆಳಕಿಗೆ - ಬೆಂಗಳೂರು ಅಪರಾಧ ಸುದ್ದಿ
ಹಳೆ ದ್ವೇಷದ ಹಿನ್ನೆಲೆ ವ್ಯಕ್ತಿಯನ್ನು ಮಚ್ಚಿನಿಂದ ಭೀಕರವಾಗಿ ಕೊಚ್ಚಿ ಕೊಲೆಗೈದ ಘಟನೆ ಸಿಲಿಕಾನ್ ಸಿಟಿಯ ಪರಪ್ಪನ ಅಗ್ರಹಾರ ಬಳಿ ನಡೆದಿದೆ. ಸದ್ಯ ಆರೋಪಿ ಪರಾರಿಯಾಗಿದ್ದು, ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.
ಬೆಂಗಳೂರು ಹತ್ಯೆ ಪ್ರಕರಣ
ಯೋಗೇಶ್ ಕೊಲೆಯಾದ ಯುವಕ. ಶನಿವಾರ ರಾತ್ರಿ ಕೊಲೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇಂದು ಬೆಳಿಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು, ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಮಹೇಶ್ ಕೊಲೆಯ ಆರೋಪಿ ಎಂದು ತಿಳಿದುಬಂದಿದೆ. ಮಹೇಶ್ ಮತ್ತು ಯೋಗೇಶ್ ಮಧ್ಯೆ ಕಳೆದ ಒಂದು ವರ್ಷಗಳಿಂದ ದ್ವೇಷವಿತ್ತು. ಇದೇ ದ್ವೇಷಕ್ಕಾಗಿ ಕೊಲೆ ನಡೆದಿದೆ. ಸದ್ಯ ಆರೋಪಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.