ಬೆಂಗಳೂರು: ಸ್ಕೂಟರ್ ಬೀಳಿಸಿದ್ದಕ್ಕೆ ಸೆಕ್ಯೂರಿಟಿಗೆ ಹಿಗ್ಗಾಮುಗ್ಗಾ ಥಳಿಸಿ ಆತನ ಸಾವಿಗೆ ಕಾರಣನಾದ ಡೆಲಿವರಿ ಬಾಯ್ನನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಾರ್ತಿಕ್ (25) ಬಂಧಿತ ಆರೋಪಿ, ಕುಮಾರ್ ನಾಯ್ಕ್ (45) ಮೃತ ದುರ್ದೈವಿ.
ಜೂ.12 ರಂದು ಕೊಡಿಗೆಹಳ್ಳಿ ಗೇಟ್ ಸಮೀಪದ ಗೋದ್ರೇಜ್ ಅಪಾರ್ಟ್‌ಮೆಂಟ್‌ಗೆ ಬಂದಿದ್ದ ಡೆಲಿವರಿ ಬಾಯ್ ಕಾರ್ತಿಕ್, ಅಡ್ಡಾದಿಡ್ಡಿ ಸ್ಕೂಟರ್ ಪಾರ್ಕ್ ಮಾಡಿದ್ದ. ಸ್ಥಳದಲ್ಲಿದ್ದ ಸೆಕ್ಯೂರಿಟಿ ಕುಮಾರ್ ನಾಯ್ಕ್ ತಾವೇ ಸ್ಕೂಟರ್ ಅನ್ನು ಸರಿಯಾಗಿ ಪಾರ್ಕ್ ಮಾಡಲು ತೆಗೆದಿದ್ದಾರೆ. ಈ ವೇಳೆ, ನಿಯಂತ್ರಣ ತಪ್ಪಿ ಆರೋಪಿಯ ಸ್ಕೂಟರ್ ಬಿದ್ದಿದೆ. ಅಷ್ಟಕ್ಕೆ ರೊಚ್ಚಿಗೆದ್ದ ಕಾರ್ತಿಕ್, ಸೆಕ್ಯೂರಿಟಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಿಗ್ಗಾಮುಗ್ಗಾ ಥಳಿಸಿದ್ದಾನೆ.