ನೆಲಮಂಗಲ: ಅಚ್ಚೇದಿನ್ ದಿನ್ ಖರಾಬ್ ದಿನವಾಗಿದೆ. ಕೋವಿಡ್ 19 ವೈರಸ್ ನಿಂದ ಆರ್ಥಿಕತೆ ಕುಸಿದಿದೆ. ಆನೆವಾಲೇ ದಿನ್ ಮೇ ಅಚ್ಚಾ ದಿನ್ ಆನೆವಾಲಾ ಹೈ ಎಂದು ಪೌರಾಡಳಿತ , ಸಣ್ಣ ಕೈಗಾರಿಕೆಗಳು ಮತ್ತು ಸಾರ್ವಜನಿಕ ಉದ್ಯಮಗಳ ಸಚಿವ ಎಂಟಿಬಿ ನಾಗರಾಜ್ ವಿಶ್ವಾಸ ವ್ಯಕ್ತಪಡಿಸಿದರು.
’ಆನೆವಾಲೇ ದಿನ್ ಮೇ ಅಚ್ಚಾ ದಿನ್ ಆನೆವಾಲಾ ಹೈ’: ಎಂಟಿಬಿ ನಾಗರಾಜ್ - ಬೆಂಗಳೂರು
ಕೊರೊನಾ ಹಿನ್ನೆಲೆ ಆರ್ಥಿಕತೆ ಕುಸಿದಿದೆ. ಸರ್ಕಾರದ ತೆರಿಗೆ ಸಂಗ್ರಹದಲ್ಲಿಯೂ ಇಳಿಕೆಯಾಗಿದೆ. ಅಚ್ಚೇದಿನ್ ದಿನ್ ಖರಾಬ್ ದಿನವಾಗಿದ್ದು, ಮುಂದಿನ ದಿನಗಳಲ್ಲಿ ಅಚ್ಚಾ ದಿನ್ ಆನೇವಾಲಾ ಹೈ ಎಂದು ಸಚಿವ ಎಂಟಿಬಿ ನಾಗರಾಜ್ ಹೇಳಿದರು.
ತಾಲೂಕಿನ ಡಾಬಸ್ ಪೇಟೆ - ತ್ಯಾಮಗೊಂಡ್ಲು ಕೈಗಾರಿಕಾ ವಲಯದಲ್ಲಿ ಕೌಶಲ್ಯ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅಚ್ಚೇ ದಿನ್ ಮತ್ತು ಬೆಲೆ ಏರಿಕೆಯ ಕುರಿತು ಪ್ರತಿಕ್ರಿಯೆ ನೀಡಿ, ಅಚ್ಚೇದಿನ್ ದಿನ್ ಖರಾಬ್ ದಿನವಾಗಿದೆ. ಕೋವಿಡ್ -19 ವೈರಸ್ ನಿಂದ ಆರ್ಥಿಕತೆ ಕುಸಿದಿದೆ. ಸರ್ಕಾರದ ತೆರಿಗೆ ಸಂಗ್ರಹದಲ್ಲೂ ಇಳಿಕೆಯಾಗಿದೆ. ಮುಂದಿನ ದಿನಗಳಲ್ಲಿ ಅಚ್ಚೇ ದಿನ್ ಬರಲಿದೆ, ಆನೆವಾಲೇ ದಿನ್ ಮೇ ಅಚ್ಚಾ ದಿನ್ ಆನೆವಾಲಾ ಹೈ ಎಂದು ಎಂದು ಹಾಸ್ಯ ಚಟಾಕಿ ಹಾರಿಸಿದರು.
ಇದೇ ವೇಳೆ, ಉಪ ಚುನಾವಣೆಗಳ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಎರಡು ಕ್ಷೇತ್ರಗಳಲ್ಲಿ ಉಪಚುನಾವಣೆ ಬಂದಿದೆ. ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳು ಚುನಾವಣೆಗಳ ಪ್ರಚಾರದಲ್ಲಿ ಆರೋಪ - ಪ್ರತ್ಯಾರೋಪ ಮಾಡುವುದು ಇದ್ದೇ ಇರುತ್ತದೆ. ಆಡಳಿತ ಪಕ್ಷಗಳು ಸರ್ಕಾರದ ಸಾಧನೆಗಳ ಬಗ್ಗೆ ಮಾತನಾಡಿದ್ದಾರೆ. ವಿರೋಧ ಪಕ್ಷಗಳು ಸರ್ಕಾರದ ಲೋಪಗಳ ಬಗ್ಗೆ ಮಾತನಾಡುತ್ತಾರೆ ಇದೇ ರಾಜಕೀಯ ಎಂದರು.