ಬೆಂಗಳೂರು:ನನ್ನ ಕೆಣಕಿದ್ರೆ ಹುತ್ತದಲ್ಲಿರೋ ನಾಗರಹಾವನ್ನು ಕೆಣಕಿದಂತೆ. ಮಲಗಿರೋ ಹಾವನ್ನು ಕೆಣಕಿದರೆ ಕಚ್ಚಿಸಿಕೊಳ್ಳುದು ಗ್ಯಾರೆಂಟಿ ಎಂದು ಹೊಸಕೋಟೆ ಅನರ್ಹ ಶಾಸಕ ಎಂಟಿಬಿ ನಾಗರಾಜ್, ಕಾಂಗ್ರೆಸ್ ನಾಯಕರಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.
ನನ್ನ ಕೆಣಕಿದ್ರೆ ಹುತ್ತದಲ್ಲಿರೋ ನಾಗರಹಾವನ್ನು ಕೆಣಕಿದಂತೆ: ಕೈ ನಾಯಕರಿಗೆ ಎಂಟಿಬಿ ಎಚ್ಚರಿಕೆ - MTB Nagaraj fires at Congress leaders
ಯಾರ್ಯಾರು ಸಚಿವ ಸಂಪುಟದಲ್ಲಿ 5 ರಿಂದ 10 ಬಾರಿ ಮಂತ್ರಿ ಆಗಿ ಖಜಾನೆ ಲೂಟಿ ಹೊಡೆದಿದ್ದೀರಿ ಎಂಬುದರ ಎಲ್ಲಾ ದಾಖಲೆ ನನ್ನ ಬಳಿ ಇದೆ. ನಾನು ಅವರ ಕಥೆ ತೆಗೆದ್ರೆ ಅವರ ಕಥೆ ಮುಗಿಯುತ್ತೆ. ನನ್ನ ಕೆಣಕಿದ್ರೆ ಹುತ್ತದಲ್ಲಿರೋ ನಾಗರಹಾವನ್ನು ಕೆಣಕಿದಂತೆ. ಮಲಗಿರೋ ಹಾವನ್ನು ಕೆಣಕಿ ಕಚ್ಚಿಸಿಕೊಳ್ಳಬೇಡಿ ಎಂದು ಎಂಟಿಬಿ ನಾಗರಾಜ್ ಖಡಕ್ ವಾರ್ನಿಂಗ್ ನೀಡಿದ್ದಾರೆ.
![ನನ್ನ ಕೆಣಕಿದ್ರೆ ಹುತ್ತದಲ್ಲಿರೋ ನಾಗರಹಾವನ್ನು ಕೆಣಕಿದಂತೆ: ಕೈ ನಾಯಕರಿಗೆ ಎಂಟಿಬಿ ಎಚ್ಚರಿಕೆ](https://etvbharatimages.akamaized.net/etvbharat/prod-images/768-512-4294190-thumbnail-3x2-megha.jpg)
ಶುಕ್ರವಾರ ಅನರ್ಹ ಶಾಸಕ ಎಂಟಿಬಿ ನಾಗರಾಜ್ ತಮ್ಮ ಹುಟ್ಟುಹಬ್ಬದ ಅಂಗವಾಗಿ ಕ್ಷೇತ್ರದ ಮಹಿಳೆಯರಿಗೆ ಬಾಗಿನ ವಿತರಿಸುವ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಬಳಿಕ ಮಾತನಾಡಿದ ಅವರು, ಯಾರ್ಯಾರು ಸಚಿವ ಸಂಪುಟದಲ್ಲಿ 5 ರಿಂದ 10 ಬಾರಿ ಮಂತ್ರಿ ಆಗಿ ಖಜಾನೆ ಲೂಟಿ ಹೊಡೆದಿದ್ದೀರಿ, ಅಧಿಕಾರವಿದ್ದಾಗ ಯಾರು ಎಷ್ಟು ಆಸ್ತಿ ಮಾಡಿದ್ದೀರಿ, ಎಲ್ಲಾ ದಾಖಲೆ ನನ್ನ ಬಳಿ ಇದೆ. ಆದಾಯ ತೆರಿಗೆ ಭಯದಿಂದ ರಾಜೀನಾಮೆ ನೀಡಲಾಗಿದೆ ಎಂದು ಯಾರೂ ಆರೋಪ ಮಾಡಿದ್ದೀರಿ ಈ ಬಗ್ಗೆ ನನ್ನ ಬಗ್ಗೆ ದಾಖಲೆ ಏನಾದ್ರು ಇದ್ರೆ ಮಾಧ್ಯಮದ ಮುಂದೆ ತೆಗೆದುಕೊಂಡು ಬನ್ನಿ ಎಂದು ಸವಾಲಾಕಿದ್ದಾರೆ.
ನಾನು ಯಾರಿಗೂ ಭಯ ಪಡೋದಿಲ್ಲ. ಮಗನನ್ನು ಉದ್ದಾರ ಮಾಡಲು 30 ಕೋಟಿ ಕೊಟ್ಟು ಬಿಜೆಪಿಗೆ ಹೋಗಿದ್ದೇನೆಂದು ಕಾಂಗ್ರೆಸ್ನ ದೊಡ್ಡ ದೊಡ್ಡ ನಾಯಕರು ಹೇಳ್ತಾರೆ. ನಾನು ಅವರ ಕಥೆ ತೆಗೆದ್ರೆ ಅವರ ಕಥೆ ಮುಗಿಯುತ್ತೆ. ಯಾವ ಪುರುಷಾರ್ಥಕ್ಕೆ ಸುಳ್ಳು ಹೇಳಬೇಕು? ರಾಜಕೀಯದಿಂದ ಬೇಸರವಾಗಿ ರಾಜೀನಾಮೆ ಕೊಟ್ಟಿದ್ದೇನೆ. ನನ್ನ ಕೆಣಕಿದ್ರೆ ಹುತ್ತದಲ್ಲಿರೋ ನಾಗರಹಾವನ್ನು ಕೆಣಕಿದಂತೆ. ಮಲಗಿರೋ ಹಾವನ್ನು ಕೆಣಕಿ ಕಚ್ಚಿಸಿಕೊಳ್ಳ ಬೇಡಿ ಎಂದು ಎಂಟಿಬಿ ನಾಗರಾಜ್ ಖಡಕ್ ವಾರ್ನಿಂಗ್ ನೀಡಿದ್ದಾರೆ.