ಕರ್ನಾಟಕ

karnataka

ETV Bharat / city

ನ್ಯಾಯ ಸಿಗುವ ನಿರೀಕ್ಷೆಯಲ್ಲಿ ಎಂಟಿಬಿ... ಜನರ ಆಶೀರ್ವಾದ ಬೇಡಿದ ಸುಧಾಕರ್​ - by election in disqualified MLA's constituency

ಅನರ್ಹ ಶಾಸಕರ ಬಗ್ಗೆ ಇಂದು ಸುಪ್ರೀಂಕೋರ್ಟ್​ ತೀರ್ಪು ನೀಡಲಿದ್ದು, ಎಲ್ಲರ ಚಿತ್ತ ಸುಪ್ರೀಂಕೋರ್ಟ್​ನತ್ತ ನೆಟ್ಟಿದೆ. ಈ ಬಗ್ಗೆ ಮಾತನಾಡಿದ ಅನರ್ಹ ಶಾಸಕ ಎಂಟಿಬಿ ನಾಗರಾಜ್​ ನ್ಯಾಯ ಸಿಗುವ ಭರವಸೆ ವ್ಯಕ್ತಪಡಿಸಿದ್ದರೆ, ಇನ್ನೋರ್ವ ಶಾಸಕ ಕೆ. ಸುಧಾಕರ್ ಜನರ ಆಶೀರ್ವಾದ ಬೇಡಿದ್ದಾರೆ.

ಕೆ. ಸುಧಾಕರ್ , ಎಂಟಿಬಿ ನಾಗರಾಜ್

By

Published : Nov 13, 2019, 10:04 AM IST

Updated : Nov 13, 2019, 10:46 AM IST

ಬೆಂಗಳೂರು: ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಯಾವುದೇ ನಿರೀಕ್ಷೆಯಿಟ್ಟುಕೊಂಡಿಲ್ಲ, ಆದರೆ ನ್ಯಾಯ ಸಿಗುವುದೆಂಬ ನಂಬಿಕೆ ಇದೆ ಎಂದು ಹೊಸಕೋಟೆ ಅನರ್ಹ ಶಾಸಕ ಎಂಟಿಬಿ ನಾಗರಾಜ್​ ಹೇಳಿದ್ದಾರೆ.

ಮಹದೇವಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಎಂಟಿಬಿ

ಅನರ್ಹ ಶಾಸಕರ ಬಗ್ಗೆ ಸುಪ್ರೀಂ ತೀರ್ಪಿಗೂ ಮುನ್ನ ಮಹದೇವಪುರದಲ್ಲಿರುವ ಮನೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಎಂಟಿಬಿ, ಸುಪ್ರೀಂಕೋರ್ಟ್​ನಲ್ಲಿ ತೀರ್ಪು ವ್ಯತಿರಿಕ್ತವಾಗಿ ಬಂದರೆ, ಕಾರ್ಯಕರ್ತರು ಮತ್ತು ಮಗನ ಬಳಿ ಚರ್ಚೆ ನಡೆಸಿ ತೀರ್ಮಾನಿಸುವೆ. ಬಿಜೆಪಿ ನನ್ನ ಬೆನ್ನಿಗೆ ನಿಲ್ಲಲಿದೆ ಎಂದು ಎಂಟಿಬಿ ನಾಗರಾಜ್ ವಿಶ್ವಾಸ ವ್ಯಕ್ತಪಡಿಸಿದರು.

ಜನರ ಆಶೀರ್ವಾದ ಬಯಸಿದ ಡಾ ಕೆ. ಸುಧಾಕರ್

ಇತ್ತ ಚಿಕ್ಕಬಳ್ಳಾಪುರ ಅನರ್ಹ ಶಾಸಕ ಕೆ ಸುಧಾಕರ್, ಜನರ ಆಶೀರ್ವಾದ ಬಯಸಿ ಟ್ವೀಟ್ ಮಾಡಿದ್ದಾರೆ. ನನಗೆ ನಿಮ್ಮ ಆಶೀರ್ವಾದ ಬೇಕಾಗಿದೆ. ನನ್ನ ವಿಜಯೋತ್ಸವಕ್ಕೆ ಪ್ರಾರ್ಥಿಸಿ, ನನ್ನ ಕ್ಷೇತ್ರ ಹಾಗೂ ರಾಷ್ಟ್ರದ ಅಭಿವೃದ್ಧಿಗೆ ನನ್ನ ಸೇವೆಯನ್ನು ಅರ್ಪಿಸುತ್ತೇನೆ. ಈ ನಿಟ್ಟಿನಲ್ಲಿ ನನಗೆ ಇನ್ನಷ್ಟು ಸರ್ವಶಕ್ತಿಯನ್ನು ನೀಡಿ ಆಶೀರ್ವದಿಸಲು ಬೇಡುತ್ತೇನೆ ಎಂದು ಟ್ವಿಟ್ಟರ್​​ನಲ್ಲಿ ಪೋಸ್ಟ್​ ಮಾಡಿದ್ದಾರೆ.

ಕೆ. ಸುಧಾಕರ್ ಟ್ವೀಟ್​
Last Updated : Nov 13, 2019, 10:46 AM IST

ABOUT THE AUTHOR

...view details