ಕರ್ನಾಟಕ

karnataka

ETV Bharat / city

ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರೇ ಕಾಂಗ್ರೆಸ್: ಎಂ.ಪಿ.ರೇಣುಕಾಚಾರ್ಯ

ದೇಶವನ್ನು ಲೂಟಿ ಮಾಡಿದ್ದು ಕಾಂಗ್ರೆಸ್​​. ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರೇ ಕಾಂಗ್ರೆಸ್​. ನಮ್ಮದು ಪಾರದರ್ಶಕ ಆಡಳಿತದ ಸರ್ಕಾರ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ, ಬಿಜೆಪಿ ನಲವತ್ತು ಪರ್ಸೆಂಟ್​ ಸರ್ಕಾರ ಎಂಬ ಕಾಂಗ್ರೆಸ್​ ಆರೋಪಕ್ಕೆ ಪ್ರತ್ಯುತ್ತರ ನೀಡಿದರು.

mp-renukacharya
ರೇಣುಕಾಚಾರ್ಯ

By

Published : Nov 25, 2021, 5:58 PM IST

ಬೆಂಗಳೂರು: ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರೇ ಕಾಂಗ್ರೆಸ್​​. ನಮ್ಮ ಸರ್ಕಾರದಲ್ಲಿ ಯಾವ ಭ್ರಷ್ಟಾಚಾರ ಇಲ್ಲ. ನಾವು ಪಾರದರ್ಶಕ ಆಡಳಿತ ನಡೆಸುತ್ತಿದ್ದೇವೆ ಎಂದು ಎಂ.ಪಿ. ರೇಣುಕಾಚಾರ್ಯ ತಿರುಗೇಟು ನೀಡಿದರು.

ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯಪಾಲರಿಗೆ ಕಾಂಗ್ರೆಸ್ ದೂರು ನೀಡುವ ವಿಚಾರದಲ್ಲಿ ಕಾಂಗ್ರೆಸ್​ನವರು ಸರ್ವ ಸ್ವತಂತ್ರರು. ಅವರು ಎಲ್ಲ ಕಡೆ ಸುಮ್ಮನೆ ಹೋಗುತ್ತಿದ್ದಾರೆ. ದೇಶಕ್ಕೆ‌ ಸ್ವಾತಂತ್ರ್ಯ ತಂದಿದ್ದವರು ಅಂತ ಹೇಳ್ತಾರೆ. ಆದರೆ, ದೇಶ ಲೂಟಿ‌ಹೊಡೆದವರೇ ಕಾಂಗ್ರೆಸ್ಸಿಗರು. ಅವರ ಲೂಟಿಗೆ, ದಿಂಬು ಹಾಸಿಗೆ ಹಗರಣ ಸಾಕಲ್ಲ ಎಂದು ವಾಗ್ದಾಳಿ ನಡೆಸಿದರು.

ನಮ್ಮ ಬಾಯಿಗೆ ಯಾರೂ ಟೇಪ್​ ಹಾಕಿಲ್ಲ:

ಸಂಪುಟ ಪುನಾರಚನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾವ್ಯಾರೂ ಕಾಯುತ್ತಿಲ್ಲ. ನಾವು ಜಾತ್ರೆ ಪಕ್ಷದವರಲ್ಲ. ರಾಜುಗೌಡ ಆರಂಭದಲ್ಲೇ ಬೇಡ ಅಂದಿದ್ದಾರೆ. ಆದರೆ, ಕೇಳುವುದಕ್ಕೆ ನಮ್ಮ ಬಾಯಿಗೆ ಯಾರೂ ಟೇಪ್ ಹಾಕಿಲ್ಲ. ಮುಖ್ಯಮಂತ್ರಿಗಳು ಹಾಗೂ ವರಿಷ್ಠರು ನಿರ್ಧಾರ ಮಾಡಬೇಕು ಎಂದರು.

ಟೈಮ್​ ಬಂದಾಗ ನೋಡೋಣ:

ರಾಜಕಾರಣದಲ್ಲಿ ಯಾರು ಸನ್ಯಾಸಿಗಳಲ್ಲ. ಖಾಲಿ ಹುದ್ದೆಗಳನ್ನು ಕೊಟ್ಟರೆ ತಪ್ಪೇನಿದೆ?. ನನ್ನನ್ನು ಸುಮ್ಮನಿರಿಸೋಕೆ ಯಾರ ಕೈಯಲ್ಲೂ ಆಗಲ್ಲ. ಸಂದರ್ಭ ಬಂದಾಗ ನೋಡೋಣ ಎಂದು ಮಾರ್ಮಿಕವಾಗಿ ನುಡಿದರು.

ನಾವೆಲ್ಲ ಸ್ಟೋರ್ಸ್​ ಮನ್ :

ಶಾಸಕ ರಾಜೂಗೌಡ ಮಾತನಾಡಿ, ವರ್ಲ್ಡ್ ಕಪ್​ನಲ್ಲಿ ಏನಾಯ್ತು. 29 ರನ್ನಿನಲ್ಲಿ ಒಂದು ರನ್ ಹೊಡೆಯುವುದಕ್ಕೆ ಆಗಲಿಲ್ಲ. ಹಾಗೆಯೇ ನಾವು ಸಚಿವ ಸ್ಥಾನದ ಮೇಲೆ ಆಸೆ ಇಟ್ಟಾಗ ನಿರಾಸೆಯಾಗಿದೆ. ನಾನು ನೇರಾ ನೇರ ಮನುಷ್ಯ. ನನ್ನದೇನಿದ್ದರೂ ಪಕ್ಷ ಕಟ್ಟುವದಷ್ಟೇ ಕೆಲಸ. ನಾವೆಲ್ಲ ಸ್ಟೋರ್ಸ್‌ಮನ್ ಇದ್ದಂತೆ. ಸೋತಮೇಲೆ ಕಾಯುತ್ತಾ ಕೂರಲ್ಲ. ಮತ್ತೊಂದು ಮ್ಯಾಚ್​ಗೆ ರೆಡಿಯಾಗುವ ಕ್ಯಾರೆಕ್ಟರ್ ನಮ್ಮದು. ವರ್ಲ್ಡ್​ ಕಪ್​ನಲ್ಲಿ ಇಂಡಿಯಾಗೆ ಸೋಲಾಯಿತು. ನಂತರ ನ್ಯೂಜಿಲೆಂಡ್ ಮೇಲೆ ಗೆಲ್ಲಲಿಲ್ವೇ ಎಂದು ರಾಜೂಗೌಡ ಸಚಿವ ಸ್ಥಾನ ಸಿಗದ ಕೋಪವನ್ನು ಮ್ಯಾಚ್ ಮೂಲಕ ಹೊರಹಾಕಿದರು.

ABOUT THE AUTHOR

...view details