ಕರ್ನಾಟಕ

karnataka

ETV Bharat / city

ಪ್ರಿಯಾಂಕ್ ಖರ್ಗೆ ಲೂಟಿ ಹೊಡೆದು ಆಸ್ತಿ ಮಾಡಿದ್ದಾರೆ : ಎಂ.ಪಿ.ರೇಣುಕಾಚಾರ್ಯ ಆರೋಪ - ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ

ಪ್ರಿಯಾಂಕ್ ಖರ್ಗೆ(Mla Priyank kharge) ರಾಜಕಾರಣಕ್ಕೆ ಬರುವ ಮುನ್ನ ಅವರ ಆಸ್ತಿ ಎಷ್ಟಿತ್ತು. ಈಗ ಎಷ್ಟಾಗಿದೆ?. ಅವರು ಲೂಟಿ ಹೊಡೆದು ಆಸ್ತಿ ಮಾಡಿದ್ದಾರೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ (Secretary to the Chief minister M.p. Renukacharya)ಗಂಭೀರ ಆರೋಪ ಮಾಡಿದರು..

mp renukacharya alligation
ಎಂ.ಪಿ.ರೇಣುಕಾಚಾರ್ಯ ಆರೋಪ

By

Published : Nov 13, 2021, 5:06 PM IST

ಬೆಂಗಳೂರು :ಪ್ರಿಯಾಂಕ್ ಖರ್ಗೆ ರಾಜಕಾರಣಕ್ಕೆ ಬರುವ ಮುನ್ನ ಅವರ ಆಸ್ತಿ ಎಷ್ಟಿತ್ತು. ಈಗ ಎಷ್ಟಾಗಿದೆ?. ಅವರು ಲೂಟಿ ಹೊಡೆದು ಆಸ್ತಿ ಮಾಡಿದ್ದಾರೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ(Secretary to the Chief minister M.p. Renukacharya) ಗಂಭೀರ ಆರೋಪ ಮಾಡಿದರು.

ಶಾಸಕ ಪ್ರಿಯಾಂಕ್ ಖರ್ಗೆ ವಿರುದ್ಧ ಎಂ.ಪಿ.ರೇಣುಕಾಚಾರ್ಯ ಆರೋಪ ಮಾಡಿರುವುದು..

ಬೆಂಗಳೂರಿನ ಆರ್.ಟಿ.ನಗರದಲ್ಲಿನ ಸಿಎಂ ನಿವಾಸದ ಬಳಿ ಮಾತನಾಡಿದ ಅವರು, ಬಿಟ್ ಕಾಯಿನ್ ವಿಚಾರದಲ್ಲಿ ಕಾಂಗ್ರೆಸ್ ಜನರ ದಾರಿ ತಪ್ಪಿಸುತ್ತಿದೆ. ಭ್ರಷ್ಟಾಚಾರಕ್ಕೆ ಇನ್ನೊಂದು ಹೆಸರೇ ಕಾಂಗ್ರೆಸ್. ಅಭಿವೃದ್ಧಿ ಪರ ರಾಜಕಾರಣ ಮಾಡುವುದು ಬಿಟ್ಟು ಕೇವಲ ಟೀಕೆಯಲ್ಲಿಯೇ ಕಾಲ ಕಳೆಯುತ್ತಿದೆ ಎಂದು ಕಾಲೆಳೆದರು.

ಇದನ್ನೂ ಓದಿ: Bitcoin scam: ನೋಡ್ತೀರಿ ಎಲ್ಲವೂ ಹೊರಬರುತ್ತೆ.. ಡಿ.ಕೆ.ಶಿವಕುಮಾರ್​ ಹೊಸ ಬಾಂಬ್​

ಬಿಟ್​ ಕಾಯಿನ್​ ಪ್ರಕರಣದ ತನಿಖೆಯನ್ನು ಮುಖ್ಯಮಂತ್ರಿಗಳು ಇಡಿಗೆ ವಹಿಸಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ಬಳಿ ದಾಖಲೆ ಇದ್ರೆ ಬಹಿರಂಗ ಪಡಿಸಲಿ. ಕಾಂಗ್ರೆಸ್ ನಾಯಕರ ಮಕ್ಕಳ ಹೆಸರೂ ಪ್ರಕರಣದಲ್ಲಿ ಕೇಳಿ ಬರ್ತಿದೆ. ದಾಖಲೆ ಸಿಕ್ಕಿದ್ರೆ ಅವರನ್ನೂ ಬಂಧಿಸಬೇಕಾಗುತ್ತದೆ.

ಕೇವಲ ಟೀಕೆ ಮಾಡಲು ಪ್ರತಿಪಕ್ಷ ಇರಬಾರದು. ಪ್ರತಿಪಕ್ಷ ಸರ್ವಾಧಿಕಾರಿ ಧೋರಣೆ ತೋರಬಾರದು. ರಾಜಕಾರಣಕ್ಕಾಗಿ ಸುಳ್ಳು ಹೇಳಬಾರದು ಎಂದು ವಾಗ್ದಾಳಿ ನಡೆಸಿದರು.

ಮಾಜಿ ಸಿಎಂ ಜಗದೀಶ್​ ಶೆಟ್ಟರ್ ದೆಹಲಿ ಭೇಟಿ ವಿಚಾರವಾಗಿ ಮಾತನಾಡಿ, ಶೆಟ್ಟರ್ ಅವರು ವೈಯಕ್ತಿಕ ಕಾರಣಕ್ಕಾಗಿ ದೆಹಲಿಗೆ ಭೇಟಿ ನೀಡಿದ್ದಾಗಿ ಹೇಳಿದ್ದಾರೆ. ಇದರಲ್ಲಿ ಯಾವುದೇ ರಾಜಕೀಯ ವಿಷಯವಿಲ್ಲ ಎಂದರು.

ABOUT THE AUTHOR

...view details