ಕರ್ನಾಟಕ

karnataka

ETV Bharat / city

ನನ್ನ ಹೆಸರು ಹೇಳಿ ಬಿಜೆಪಿ ಟಿಕೆಟ್ ಗಿಟ್ಟಿಸಲು ಯತ್ನ.. ಮುನಿರತ್ನಗೆ ಸಂಸದ ಡಿ ಕೆ ಸುರೇಶ್ ಟಾಂಗ್ - ಸಿದ್ದರಾಮಯ್ಯ, ಡಿಕೆಶಿ ನಾಯಕತ್ವದಲ್ಲಿ ಚುನಾವಣೆ

ಸಿದ್ದರಾಮಯ್ಯ, ಡಿಕೆಶಿ ನಾಯಕತ್ವದಲ್ಲಿ ಚುನಾವಣೆ ನಡೆಸುತ್ತೇವೆ. ಕೆಲವರಿಗೆ ವ್ಯಕ್ತಿ ಮುಖ್ಯ, ನಮಗೆ ಪಕ್ಷ ಮುಖ್ಯವಾಗಿದೆ. ಆರೇಳು ಜನ ಆಕಾಂಕ್ಷಿಗಳಿದ್ದಾರೆ. ಪಕ್ಷ ರಾಮಲಿಂಗಾರೆಡ್ಡಿಗೆ ಸಂಪೂರ್ಣ ಜವಾಬ್ದಾರಿ ಕೊಟ್ಟಿದೆ..

mp-dk-suresh-talk-about-rr-nagar-by-election-issue
ನನ್ನ ಹೆಸರು ಹೇಳಿ ಬಿಜೆಪಿಯಲ್ಲಿ ಟಿಕೆಟ್ ಗಿಟ್ಟಿಸಲು ಯತ್ನ: ಮುನಿರತ್ನಗೆ ಟಾಂಗ್ ನೀಡಿದ ಡಿಕೆ ಸುರೇಶ್

By

Published : Oct 2, 2020, 5:07 PM IST

ಬೆಂಗಳೂರು :ಮಾಜಿ ಶಾಸಕ ಆರ್‌ ಮುನಿರತ್ನನನ್ನ‌ ಹೆಸರು ಹೇಳಿ ಬಿಜೆಪಿಯಲ್ಲಿ ಟಿಕೆಟ್ ಗಿಟ್ಟಿಸಿಕೊಳ್ಳುವ ಪ್ರಯತ್ನ ಮಾಡ್ತಿದ್ದಾರೆ ಎಂದು‌ ಕಾಂಗ್ರೆಸ್‌ ಸಂಸದ ಡಿ ಕೆ ಸುರೇಶ್ ಅವರು ಟಾಂಗ್ ನೀಡಿದರು.

ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಮುನಿರತ್ನ ನನ್ನ ಸಂಪರ್ಕದಲ್ಲಿಲ್ಲ. ಅವರಿಗೂ ನಮ್ಮ ಪಕ್ಷಕ್ಕೂ ಸಂಬಂಧ ಇಲ್ಲ, ಅವರಿಗೆ ಪಕ್ಷದ ಬಾಗಿಲು ಮುಚ್ಚಿದೆ. ಅವರು ಎಲ್ಲಿ ಹೋಗಿದ್ದಾರೆ ಅಲ್ಲೇ ಕಲ್ಲು ಹುಡುಕಲಿ. ಅವರು ಬಿಜೆಪಿಯಲ್ಲಿ ನನ್ನ ಹೆಸರು ಹೇಳಿ ಟಿಕೆಟ್ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂದು ಟಾಂಗ್ ನೀಡಿದರು.

ನನ್ನ ಹೆಸರು ಹೇಳಿ ಬಿಜೆಪಿಯಲ್ಲಿ ಟಿಕೆಟ್ ಗಿಟ್ಟಿಸಲು ಯತ್ನ.. ಮುನಿರತ್ನಗೆ ಟಾಂಗ್ ನೀಡಿದ ಡಿ ಕೆ ಸುರೇಶ್

ಆರ್‌ಆರ್‌ನಗರ ಉಪಚುನಾವಣೆ ಸಂಬಂಧ ಯಾರ್ಯಾರು ಆಕಾಂಕ್ಷಿಗಳಿದ್ದಾರೆ ಅವರ ಪಟ್ಟಿ ರಾಮಲಿಂಗಾರೆಡ್ಡಿಯವರಿಗೆ ಕೊಟ್ಟಿದ್ದೇವೆ. ನಾನೇ ಅಭ್ಯರ್ಥಿ ಅಂದುಕೊಂಡು ನನಗೆ ಮತ ಹಾಕಿ ಅಂತಾ ಕೇಳುತ್ತೇನೆ‌. ಚುನಾವಣೆ ಜವಾಬ್ದಾರಿ ನನ್ನದೇ ಎಂದು ತಿಳಿಸಿದರು.

ಸಿದ್ದರಾಮಯ್ಯ, ಡಿಕೆಶಿ ನಾಯಕತ್ವದಲ್ಲಿ ಚುನಾವಣೆ ನಡೆಸುತ್ತೇವೆ. ಕೆಲವರಿಗೆ ವ್ಯಕ್ತಿ ಮುಖ್ಯ, ನಮಗೆ ಪಕ್ಷ ಮುಖ್ಯವಾಗಿದೆ. ಆರೇಳು ಜನ ಆಕಾಂಕ್ಷಿಗಳಿದ್ದಾರೆ. ಪಕ್ಷ ರಾಮಲಿಂಗಾರೆಡ್ಡಿಗೆ ಸಂಪೂರ್ಣ ಜವಾಬ್ದಾರಿ ಕೊಟ್ಟಿದೆ ಎಂದರು.

ಕ್ಷೇತ್ರದಲ್ಲಿ ಇರುವವರನ್ನೇ ನಿಲ್ಲಿಸ್ತೇವೆ :ಇದೇ ವೇಳೆ ಮಾತನಾಡಿದ ಮಾಜಿ ಸಚಿವ ರಾಮಲಿಂಗರೆಡ್ಡಿ, ನನ್ನ ನೇತೃತ್ವದಲ್ಲೇ ಒಂದು ಸಮಿತಿ ಮಾಡಿದ್ದರು. ಅಧ್ಯಕ್ಷರು ನಾಳೆ ಬಂದ ಮೇಲೆ ಚರ್ಚೆ ಮಾಡುತ್ತೇವೆ. ಚೆಲುವರಾಯಸ್ವಾಮಿ, ಬಾಲಕೃಷ್ಣ ಸ್ಪರ್ಧೆಯಲಿಲ್ಲ. ಮೂರ್ನಾಲ್ಕು ಹೆಸರುಗಳು ಚರ್ಚೆಯಲ್ಲಿವೆ ಎಂದು ತಿಳಿಸಿದರು. ಕ್ಷೇತ್ರದಲ್ಲಿ ಇರುವವರನ್ನೇ ನಿಲ್ಲಿಸುತ್ತೇವೆ, ಹೊರಗಿನವರು ಸ್ಪರ್ಧಿಸಲ್ಲ. ಕುಸುಮಾ ಅವರ ಹೆಸರು ಕೂಡ ಇದೆ. ಆ ಬಗ್ಗೆನೂ ಚರ್ಚೆಯಾಗಿದೆ ಎಂದು ತಿಳಿಸಿದರು.

ನನ್ನ ಸ್ಪರ್ಧೆ ಬಗ್ಗೆ ಏನೂ ಹೇಳಲ್ಲ :ಆರ್‌ಆರ್‌ನಗರದಲ್ಲಿ ನಾನು ಸ್ಪರ್ಧಿಸುವ ಬಗ್ಗೆ ಏನೂ ಹೇಳಲ್ಲ. ನಮ್ಮ ಹೈಕಮಾಂಡ್ ನಿರ್ಧಾರಕ್ಕೆ ನಾವು ಬದ್ಧವಾಗಿದ್ದೇವೆ ಎಂದು ಮಾಗಡಿ ಮಾಜಿ ಶಾಸಕ ಬಾಲಕೃಷ್ಣ ಇದೇ ವೇಳೆ ತಿಳಿಸಿದರು. ಇದರ ಬಗ್ಗೆ ನಾವು ಈಗ ಮಾತನಾಡಲ್ಲ. ಹೈಕಮಾಂಡ್ ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತದೆ ಎಂದು ಸ್ಪಷ್ಟಪಡಿಸಿದರು.

ಅಭ್ಯರ್ಥಿ ಆಯ್ಕೆ ಸಂಬಂಧ ಸಭೆ :ಆರ್‌ಆರ್‌ನಗರ ಉಪ ಚುನಾವಣೆ ಹಿನ್ನೆಲೆ ಕೆಪಿಸಿಸಿ ಕಚೇರಿಯಲ್ಲಿ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಸಭೆ ನಡೆಯಿತು. ಈ ವೇಳೆ ಅಭ್ಯರ್ಥಿ ಆಯ್ಕೆ ಬಗ್ಗೆ ಸಮಾಲೋಚನೆ ನಡೆಯಿತು.‌ ಸಭೆಯಲ್ಲಿ ಟಿಕೆಟ್‌ ಆಕಾಂಕ್ಷಿ ಮಾಗಡಿ ಬಾಲಕೃಷ್ಣರೂ ಭಾಗವಹಿಸಿದ್ದರು. ಉಳಿದಂತೆ ಮಾಜಿ ಅಭ್ಯರ್ಥಿ ಆಯ್ಕೆ ಸಂಬಂಧ ರಚಿಸಲಾದ ಸಮಿತಿಯ ಅಧ್ಯಕ್ಷ ಸಚಿವ ರಾಮಲಿಂಗಾರೆಡ್ಡಿ, ಸಂಸದ ಡಿ ಕೆ ಸುರೇಶ್, ಚೆಲುವರಾಯಸ್ವಾಮಿ ಭಾಗಿಯಾಗಿದ್ದರು.

ABOUT THE AUTHOR

...view details