ಬೆಂಗಳೂರು:ಇಂದು ವಿಧಾನಸೌಧದ 313ರ ಸಮಿತಿ ಕೊಠಡಿಯಲ್ಲಿ ಕೆಲ ಸಭೆಗಳು ನಿಗದಿಯಾಗಿದ್ದವುಹಾಗೂ ಕೆಲ ನಿಯೋಗಗಳು ಸಿಎಂ ಬಿಎಸ್ವೈ ಅವರನ್ನ ಇಲ್ಲಿಯೇ ಭೇಟಿಯಾಗಬೇಕಿತ್ತು. ಆದ್ರೆ ಕೊಠಡಿಯೊಳಗೆ ಇಲಿಯೊಂದು ಸತ್ತಿದ್ದರಿಂದ ಕೊಠಡಿ ತುಂಬ ದುರ್ವಾಸನೆ ಉಂಟಾಗಿ ಅನಿವಾರ್ಯವಾಗಿ ಸಭೆಗಳನ್ನು ಸ್ಥಳಾಂತರಗೊಳಿಸಲಾಗಿದೆ.
ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಇಲಿ ಸತ್ತು ಫಜೀತಿ... ದುರ್ವಾಸನೆಗೆ ಸಿಎಂ ಸಭೆಗಳೇ ಶಿಫ್ಟ್ - bangalore latest news
ಇಂದು ವಿಧಾನಸೌಧದ 313ರ ಸಮಿತಿ ಕೊಠಡಿಯಲ್ಲಿ ಇಂದು ಕೆಲ ಸಭೆಗಳು ನಿಗದಿಯಾಗಿದ್ದವು. ಜತೆಗೆ ಕೆಲ ನಿಯೋಗಗಳು ಸಿಎಂ ಬಿಎಸ್ವೈ ಅವರನ್ನ ಭೇಟಿಯಾಗಬೇಕಿತ್ತು. ಆದರೆ ಕೊಠಡಿಯೊಳಗೆ ಇಲಿಯೊಂದು ಸತ್ತಿರುವ ಹಿನ್ನೆಲೆ, ಕೊಠಡಿ ತುಂಬ ದುರ್ವಾಸನೆ ಉಂಟಾಗಿದ್ದು, ಇದರಿಂದ ಅನಿವಾರ್ಯವಾಗಿ ಸಿಎಂ ಸಭೆಗಳನ್ನು ಸ್ಥಳಾಂತರಗೊಳಿಸಲಾಗಿದೆ.

ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಇಲಿ ಸತ್ತು ಪಜೀತಿ..ದುರ್ವಾಸನೆಗೆ ಸಿಎಂ ಸಭೆಗಳು ಶಿಫ್ಟ್!
ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಇಲಿ ಸತ್ತು ಪಜೀತಿ..ದುರ್ವಾಸನೆಗೆ ಸಿಎಂ ಸಭೆಗಳು ಶಿಫ್ಟ್!
ಸಮಿತಿ ಕೊಠಡಿಯೊಳಗೆ ಇಲಿ ಸತ್ತಿರುವ ಹಿನ್ನೆಲೆ ವಿಧಾನಸೌಧದ ನನ್ನ ಕಚೇರಿಯಲ್ಲೇ ಸಭೆ ಮಾಡೋಣ. ಇಲ್ಲಿ ಬೇಡ ಬನ್ನಿ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಸಮಿತಿ ಕೊಠಡಿಯಿಂದ 3ನೇ ಮಹಡಿಯಲ್ಲಿರುವ ತಮ್ಮ ಕೊಠಡಿಗೆ ಸಭೆಗಳನ್ನ ಸ್ಥಳಾಂತರಿಸಿದ್ರು.
ಬಿಎಸ್ವೈ ಬರುವ ಮುನ್ನ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇಲಿಗಳು ಸತ್ತ ದುರ್ವಾಸನೆಯಲ್ಲೇ ಸಮಿತಿ ಕೊಠಡಿಯಲ್ಲಿ ಕುಳಿತಿದ್ದರು. ನಂತರ ಬಂದ ಮುಖ್ಯಮಂತ್ರಿ ಅವರು ಅದೇನದು ದುರ್ವಾಸನೆ. ಮೊದಲು ಅದನ್ನು ಕ್ಲೀನ್ ಮಾಡಿ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ರು.