ಕರ್ನಾಟಕ

karnataka

ETV Bharat / city

ಕೊರೊನಾ ಇದ್ರೇನಂತೆ.. ಮಗುವಿಗೆ ತಾಯಿ ಎದೆಹಾಲುಣಿಸಬಹುದು.. ತಜ್ಞ ವೈದ್ಯರ ಅಭಯ

ನಗರದ ಪ್ರತಿಷ್ಠಿತ ವಾಣಿವಿಲಾಸ್ ಆಸ್ಪತ್ರೆಯಲ್ಲಿ 260ಕ್ಕೂ ಹೆಚ್ಚು ಸೋಂಕಿತ ಗರ್ಭಿಣಿಯರಿಗೆ ಹೆರಿಗೆ ಮಾಡಿಸಲಾಗಿದೆ. ಇಲ್ಲಿ ಹಸುಗೂಸು ಮಕ್ಕಳ ಪಾಲಿಗೆ ಕೊರೊನಾ ವಾರಿಯರ್ಸ್​​​ಗಳೇ ತಾಯಂದಿರಾಗಿದ್ದಾರೆ. ಟ್ರಾಮಾ ಕೇರ್ ಸೆಂಟರ್​​ನಿಂದ ವಾಣಿವಿಲಾಸ ಐಸೋಲೇಷನ್ ವಾರ್ಡ್​​​ಗೆ ಮಕ್ಕಳನ್ನು ಶಿಫ್ಟ್ ಮಾಡಲಾಗುತ್ತದೆ..

breastfeed
ಎದೆಹಾಲು

By

Published : Sep 2, 2020, 8:49 PM IST

ಬೆಂಗಳೂರು :ಕೊರೊನಾ ಗರ್ಭಿಣಿಯರು ಮತ್ತು ಬಾಣಂತಿಯರ ನೆಮ್ಮದಿಯನ್ನೂ ಹಾಳು ಮಾಡಿದೆ. ಸಾಮಾನ್ಯ ದಿನಗಳಲ್ಲಾದ್ರೆ ಹೆರಿಗೆಯಾದ ತಕ್ಷಣವೇ ಮಗುವನ್ನು ಎದೆಗಪ್ಪಿ ಮುದ್ದಾಡುವ ಆ ಕ್ಷಣವನ್ನು ತಾಯಂದಿರ ಕಣ್ಣಂಚಿನಿಂದಲೇ ಕಾಣಬಹುದಿತ್ತು. ಇದೀಗ ಎಲ್ಲವೂ ಬದಲಾಗಿದೆ. ತಾಯಿ ಮಗುವನ್ನು ದೂರ ಮಾಡಲಾಗುತ್ತದೆ. ಅದಕ್ಕೆ ಕಾರಣ ಕೋವಿಡ್-19. ಕೊರೊನಾ ಕಾಲದಲ್ಲಿ ಸಾವಿರಾರು ಗರ್ಭಿಣಿಯರಿಗೆ ಸೋಂಕು ತಗುಲಿದ್ದು, ಚಿಕಿತ್ಸೆ ಪಡೆಯುವಾಗಲೇ ಮಗುವಿಗೆ ಜನ್ಮಕೊಟ್ಟಿದ್ದಾರೆ.

ಇಂತಹ ಸಂದರ್ಭದಲ್ಲಿ ಮೊದಲಿಗಿಂತಲ್ಲೂ ಮಗು ಹಾಗೂ ತಾಯಿ ಬಗೆಗೆ ಜಾಗೃತಿ, ಆರೈಕೆ, ಕಾಳಜಿಹೆಚ್ಚಾಗಿರಬೇಕು. ಈ ಬಗ್ಗೆ ಈಟಿವಿ ಭಾರತದೊಂದಿಗೆ ಫೋರ್ಟಿಸ್‌ ಲಾ ಫೆಮ್ಮೆ ಆಸ್ಪತ್ರೆಯ ಮಕ್ಕಳ ಹಾಗೂ ನವಜಾತ ಶಿಶುಗಳ ತಜ್ಞ ವೈದ್ಯ ಶ್ರೀನಾಥ್ ಮಣಿಕಂಠಿ ಮಾತಾನಾಡಿ, ಸೋಂಕು ಗರ್ಭಿಣಿಯರಲ್ಲೂ ಕಾಣಿಸಿದೆ. ನಮ್ಮ ಆಸ್ಪತ್ರೆಯಲ್ಲೇ 8 ಗರ್ಭಿಣಿಯರಿಗೆ ಸೋಂಕು ದೃಢಪಟ್ಟಿತ್ತು. ಆದರೆ, ಎಲ್ಲಾ ಮಕ್ಕಳಿಗೂ ನೆಗಟಿವ್ ವರದಿ ಬಂದಿತ್ತು. ಆದರೆ, ಕೊರೊನಾ ಕಾರಣ ತಾಯಿ-ಮಗುವಿವ ಆರೈಕೆ ಬಹಳ ಮುಖ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಎನ್-95 ಮಾಸ್ಕ್ ಹಾಕಿಸಿಯೇ ಎದೆಹಾಲು :ಮಗುವಿಗೆ ತಾಯಿಯ ಎದೆಹಾಲು ಬಹಳ ಶ್ರೇಷ್ಠ. ಮಗುವಿನ ಬೆಳವಣಿಗೆಗೆ ಹಾಗೂ ಇತರೆ ರೋಗ ರುಜಿನ ಬರದಂತೆ ತಡೆಯಲು ಎದೆಹಾಲು ಅಮೃತ. ‌ಆದರೆ, ಕೊರೊನಾ‌ ಪಿಡುಗಿನಿಂದಾಗಿ ಎದೆಹಾಲು ಕೊಡದೇ ಇರಲು ಕಷ್ಟ ಸಾಧ್ಯವಾಗಿದೆ. ಇತ್ತ ಮಗುವಿಗೆ ತಾಯಿಯ ಎದೆಹಾಲಿನಿಂದ ಕೊರೊನಾ ಬಾರದೇ ಇದ್ದರೂ, ಹತ್ತಿರದ ಸಂಪರ್ಕದಿಂದ ಹರಡುವ ಸಾಧ್ಯತೆ ಹೆಚ್ಚು. ಹೀಗಾಗಿ, ತಾಯಿಗೆ ಎನ್-95 ಮಾಸ್ಕ್ ಹಾಕಿಸಿಯೇ ಎದೆಹಾಲು ನೀಡಲಾಗುತ್ತದೆ ಎಂದು ಶ್ರೀನಾಥ್ ತಿಳಿಸಿದರು.

ಜೊತೆಗೆ ಹಾಲುಣಿಸಿದ ನಂತರ ಆರು ಅಡಿ‌ ಅಂತರದಲ್ಲಿ ಮಗು ತಾಯಿ ಇರುವಂತೆ ನೋಡಿಕೊಳ್ಳಲಾಗುತ್ತದೆ. ತಾಯಿಗೆ ಈ ಸಮಯದಲ್ಲಿ ಸ್ವಚ್ಛತೆ ಅರಿವು ಹೆಚ್ಚಿರಬೇಕು. ಮಗು ಮುಟ್ಟುವ ಮುನ್ನ ಕೈಗಳನ್ನು ಸೋಪಿನಿಂದ ಅಥವಾ ಸ್ಯಾನಿಟೈಸರ್​ನಿಂದ ತೊಳೆಯಬೇಕು. ಹಾಗೆಯೇ ಹಾಲುಣಿಸುವ ಮುನ್ನ ಎದೆಯ ಭಾಗವನ್ನು ಸ್ವಚ್ಛವಾಗಿ ತೊಳೆಯಬೇಕು ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ...'ಸೋಂಕಿದ್ದರೂ ತಾಯಂದಿರು ಶಿಶುಗಳಿಗೆ ಎದೆಹಾಲು ಉಣಿಸಿ'

ತಾಯಿಗೆ ಡಾಕ್ಟರ್ಸ್ ಪಾಠ :ಆಸ್ಪತ್ರೆಯಿಂದ ತಾಯಿ-ಮಗು ಡಿಸ್ಜಾರ್ಜ್ ಆಗುವಾಗ ಒಂದಷ್ಟು ತಿಳುವಳಿಕೆ ಪಾಠವನ್ನು ವೈದ್ಯರು ಮಾಡುತ್ತಾರೆ. ಮಗುವಿಗೆ ಹಾಲು ಕುಡಿಸಿದ ನಂತರ ಮಗುವಿನ ಆರೈಕೆ ಹೇಗೆ ಮಾಡಬೇಕು? ಯಾರು ಮಾಡಬೇಕು? ಜೊತೆಗೆ ಹೋಂ ಕ್ವಾರಂಟೈನ್ ನಿಯಮ ಯಾವ ರೀತಿ ಪಾಲಿಸಬೇಕು? ಹಾಲು ಕುಡಿಸುವ ಮುನ್ನ ತಾಯಿ ಹೇಗೆ ತಯಾರಿ ಮಾಡಿಕೊಳ್ಳಬೇಕು ಎಂಬುದನ್ನೆಲ್ಲಾ ತಿಳಿ ಹೇಳಲಾಗುತ್ತದೆ.

ಸೋಂಕಿತ ತಾಯಿ ಮಗುವಿಗೆ ಎದೆಹಾಲು ಕೊಡುವ ಕುರಿತು ವೈದ್ಯರ ಅಭಿಪ್ರಾಯ

ಕೊರೊನಾ ಕಾರಣಕ್ಕೆ ಪದೆಪದೇ ಆಸ್ಪತ್ರೆಗೆ ಬರಲು ಕಷ್ಟವಾದರೆ, ಅವಶ್ಯಕತೆ ಇರುವವರಿಗೆ ವಿಡಿಯೋ ಮೂಲಕ ಕನ್ಸಲ್ಟೇಶನ್ ವ್ಯವಸ್ಥೆ ಕೂಡ ಇದೆ ಎನ್ನುತ್ತಾರೆ ಶ್ರೀನಾಥ್ ಮಣಿಕಂಠಿ. ಕೊರೊನಾದಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಹೀಗಾಗಿ, ತಾಯಿಗೆ ಮಗುವಿನ ಮೇಲೆ ಮುದ್ದು ಮಾಡಲು ಪ್ರೀತಿ ತೋರಲು ಆಗದೇ ಇರಬಹುದು. ಆದರೆ, ಇದು ಅನಿವಾರ್ಯ ಎಂದು ತಿಳಿಸಿದರು.

ಶಿಶುಗಳಿಗೆ ನರ್ಸ್​​ಗಳೇ ಆಪತ್ಬಾಂಧವರು :ನಗರದ ಪ್ರತಿಷ್ಠಿತ ವಾಣಿವಿಲಾಸ್ ಆಸ್ಪತ್ರೆಯಲ್ಲಿ 260ಕ್ಕೂ ಹೆಚ್ಚು ಸೋಂಕಿತ ಗರ್ಭಿಣಿಯರಿಗೆ ಹೆರಿಗೆ ಮಾಡಿಸಲಾಗಿದೆ. ಇಲ್ಲಿ ಹಸುಗೂಸು ಮಕ್ಕಳ ಪಾಲಿಗೆ ಕೊರೊನಾ ವಾರಿಯರ್ಸ್​​​ಗಳೇ ತಾಯಂದಿರಾಗಿದ್ದಾರೆ. ಟ್ರಾಮಾ ಕೇರ್ ಸೆಂಟರ್​​ನಿಂದ ವಾಣಿವಿಲಾಸ ಐಸೋಲೇಷನ್ ವಾರ್ಡ್​​​ಗೆ ಮಕ್ಕಳನ್ನು ಶಿಫ್ಟ್ ಮಾಡಲಾಗುತ್ತದೆ.

ಹಾಲಿನ ಪೌಡರ್ ಬಳಸಿ ಮಕ್ಕಳಿಗೆ ಹಾಲುಣಿಸುವುದು, ಮಗುವನ್ನು ಸುರಕ್ಷಿತವಾಗಿ ನೋಡಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಈ ನಡುವೆಯೂ ಕಳೆದ ತಿಂಗಳು 26ರಂದು 14 ನವಜಾತ ಶಿಶುಗಳಿಗೆ ಸೋಂಕು ದೃಢಪಟ್ಟಿತ್ತು. ಆದರೆ, ಈ ಬಗ್ಗೆ ವೈದ್ಯರಿಗೂ ನಿಖರ ಕಾರಣ ತಿಳಿದು ಬಂದಿಲ್ಲ. ಹೀಗಾಗಿ, ಹೆರಿಗೆಯಾದ ಕೂಡಲೇ ತಾಯಿ ಮಗುವನ್ನು‌ ಬೇರ್ಪಡಿಸಿ, ಕೊರೊನಾ ತಗಲದಂತೆ ಎಚ್ಚರಿಕೆ‌ ವಹಿಸಲಾಗುತ್ತಿದೆ. ನೆಗೆಟಿವ್ ಬಂದ ನಂತರವಷ್ಟೇ ಮಗುವನ್ನು ತಾಯಿ ಬಳಿ ಬಿಡಲಾಗುತ್ತಿದೆ.

ಇಂತಹ ಸಂದರ್ಭದಲ್ಲಿ ಗರ್ಭಿಣಿಯರು ಹಾಗು ಬಾಣಂತಿಯರು ಸೇರಿದಂತೆ ನವಜಾತ ಶಿಶುಗಳಿಗೆ ಸೋಂಕು ತಗುಲದಂತೆ ವೈದ್ಯರು ಹೆಚ್ಚು ಕ್ರಮ ವಹಿಸಲಾಗುತ್ತಿದೆ. ನವಜಾತ ಶಿಶುಗಳ ಬಗ್ಗೆ ಕಾಳಜಿ ವಹಿಸುತ್ತಿರುವ ಚಿತ್ರದುರ್ಗ ಜಿಲ್ಲಾ ಆರೋಗ್ಯ ಇಲಾಖೆಯ ಸಿಬ್ಬಂದಿ ಪರ ಸಾಮಾಜಿಕ ವಲಯದಲ್ಲಿ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ.

ABOUT THE AUTHOR

...view details