ಕರ್ನಾಟಕ

karnataka

ETV Bharat / city

ತಾಯಿ ಮಗಳ ಸಾವಿಗೆ ಕಾರಣವಾಯ್ತಾ ಅಂತರ್ಜಾತಿ ವಿವಾಹ? - ದಂತ ವೈದ್ಯೆ ಆತ್ಮಹತ್ಯೆ

ಬೆಂಗಳೂರಿನ ಬನಶಂಕರಿ ಠಾಣಾ ವ್ಯಾಪ್ತಿಯಲ್ಲಿ ಮಗುವನ್ನ ಕೊಂದು ತಾಯಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಅಂತರ್ಜಾತಿ ವಿವಾಹ ಕಾರಣವಾದರೆ, ಮತ್ತೊಂದು ಆಸೆ ಪಟ್ಟ ವಸ್ತುಗಳನ್ನ ಪತಿ ಕೊಡಿಸಲು ನಿರಾಕರಿಸಿದ ಹಿನ್ನೆಲೆ ಹೀಗೆ ಮಾಡಿಕೊಳ್ಳಲಾಗಿದೆ ಎಂಬ ಅನುಮಾನ‌ ವ್ಯಕ್ತವಾಗಿದೆ.

mother kills daughter
ತಾಯಿ ಮಗಳ ಆತ್ಮಹತ್ಯೆ

By

Published : Aug 12, 2022, 11:02 AM IST

Updated : Aug 12, 2022, 1:06 PM IST

ಬೆಂಗಳೂರು: ಬನಶಂಕರಿ ಠಾಣಾ ವ್ಯಾಪ್ತಿಯಲ್ಲಿ ಮಗುವನ್ನ ಕೊಂದು ತಾಯಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದ್ದು, ಆತ್ಮಹತ್ಯೆಗೆ ಅಂತರ್ಜಾತಿ ವಿವಾಹವೇ ಕಾರಣ ಎನ್ನಲಾಗಿದೆ. ಅದರಿಂದಲೇ ಖಿನ್ನತೆಗೊಳಗಾಗಿದ್ದ ದಂತ ವೈದ್ಯೆ ಮಗುವನ್ನ ಕೊಂದು ಆತ್ಮಹತ್ಯೆ ಮಾಡಿಕೊಂಡಿರೋ ಶಂಕೆ ವ್ಯಕ್ತವಾಗಿದೆ‌.

ಸಾವಿಗೆ ಅಂತರ್ಜಾತಿ ವಿವಾಹ ಒಂದು ಕಾರಣವಾದರೆ ಮತ್ತೊಂದು ಆಸೆ ಪಟ್ಟ ವಸ್ತುಗಳನ್ನ ಪತಿ ಕೊಡಿಸಿರಲ್ಲ ಅನ್ನೋದು. 12 ವರ್ಷದ ಹಿಂದೆ ಪ್ರೀತಿಸಿ ನಾರಾಯಣಸ್ವಾಮಿ ಎಂಬುವರನ್ನ ಅಂತರ್ಜಾತಿ ವಿವಾಹವಾಗಿದ್ದ ಶೈಮಾಳನ್ನ ಹಲವಾರು ವರ್ಷಗಳ ಕಾಲ ಕುಟುಂಬದವರು ಒಳಗೆ ಸೇರಿಸಿಕೊಂಡಿರಲಿಲ್ಲ. ಕೆಲ ವರ್ಷಗಳ ಬಳಿಕ ಕುಟುಂಬದ ಜೊತೆ ಒಡನಾಟ ಮೂಡಿತ್ತು.

ಪ್ರಕರಣದ ಕುರಿತು ಮಾಹಿತಿ ನೀಡಿದ ಡಿಸಿಪಿ ಪಿ.‌ಕೃಷ್ಣಕಾಂತ್

ಆತ್ಮಹತ್ಯೆಗೂ ಮೊದಲು ತವರು ಮನೆಗೆ ಒಂದು ಪೂಜೆಯ ನಿಮಿತ್ತ ತೆರಳಿದ್ದ ವೇಳೆ, ಸಂಬಂಧಿಕರು ಶೈಮಾರನ್ನ ಬೇರೆ ಜಾತಿಯವನ ಮದುವೆ ಮಾಡಿಕೊಂಡಿದ್ದೀಯ. ಹಬ್ಬಕ್ಕೆ ಗಂಡನ ಕರೆದುಕೊಂಡು ಬರಲು ಆಗಲ್ಲ. ಏಕೆಂದರೆ, ನಾವು ಬೇರೆ ಜಾತಿಯವರನ್ನು ನಮ್ಮ ಪೂಜೆಯ ಒಳಗೆ ಬಿಡುವುದಿಲ್ಲಾ ಎಂದು ಹಿಯಾಳಿಸಿದರಂತೆ. ಈ ಕಾರಣಕ್ಕೆ ನೊಂದಿದ್ದ ಶೈಮಾ, ಖಿನ್ನೆತೆಗೊಳಾಗಿದ್ರು ಎಂದು ಹೇಳಲಾಗ್ತಿದೆ‌.

ಇದೇ ಸಮಯದಲ್ಲೇ ಶೈಮಾ ಕಾರು, ಐಫೋನ್​ ತೆಗೆದುಕೊಳ್ಳುವುದಾಗಿ ಆಸೆ ಪಟ್ಟಿದ್ದರಂತೆ. ಇದನ್ನು ಪತಿ ನಾರಾಯಣ್ ಕೊಡಿಸಲು ನಿರಾಕರಿಸಿದ ಕಾರಣ ‌ಮಗುವನ್ನ ಕೊಂದು ತಾಯಿ ಆತ್ಮಹತ್ಯೆ ಮಾಡಿಕೊಂಡಿರೋ ಅನುಮಾನ‌ ಮೂಡಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ:ಬೆಂಗಳೂರು: ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಡೆಂಟಲ್​ ಡಾಕ್ಟರ್​ ಮತ್ತು ಮಗಳ ಶವ ಪತ್ತೆ

Last Updated : Aug 12, 2022, 1:06 PM IST

ABOUT THE AUTHOR

...view details