ಕರ್ನಾಟಕ

karnataka

ETV Bharat / city

ಬೆಂಗಳೂರು: ಗಲಾಟೆ‌‌ ಮಾಡ್ತಾನೆಂದು 6 ವರ್ಷದ ಮಗನನ್ನೇ ಕೊಂದ ತಾಯಿ -

mother-killed-his-son-in-bengaluru
ಗಲಾಟೆ‌‌ ಮಾಡ್ತಾನೆಂದು 6 ವರ್ಷದ ಮಗನನ್ನೇ ಕೊಂದ ತಾಯಿ

By

Published : Dec 12, 2020, 8:16 PM IST

Updated : Dec 12, 2020, 9:21 PM IST

20:11 December 12

ಆರ್.ಆರ್.ನಗರ ಠಾಣಾ ವ್ಯಾಪ್ತಿಯ ಪಟ್ಟಣಗೆರೆಯಲ್ಲಿ ಘಟನೆ

ಗಲಾಟೆ ಮಾಡುತ್ತಾನೆಂದು ಹೆತ್ತ ತಾಯಿ ತನ್ನ 6 ವರ್ಷದ ಮಗನನ್ನೇ ಉಸಿರುಗಟ್ಟಿಸಿ ಕೊಲೆ

ಬೆಂಗಳೂರು:ಗಲಾಟೆ ಮಾಡುತ್ತಾನೆಂದು ಹೆತ್ತ ತಾಯಿ ತನ್ನ 6 ವರ್ಷದ ಮಗನನ್ನೇ ಉಸಿರುಗಟ್ಟಿಸಿ ಕೊಲೆ ಮಾಡಿರುವ ಪೈಶಾಚಿಕ ಘಟನೆ ಆರ್.ಆರ್.ನಗರದ ಪಟ್ಟಣಗೆರೆಯಲ್ಲಿ ನಡೆದಿದೆ.

ದೇವಿ (26) ಎಂಬ ಮಹಿಳೆ ತನ್ನ ಮಗ ಮನೀಷ್ (6)ನನ್ನು ಕೊಲೆ ಮಾಡಿದ್ದಾಳೆ.

ಆರ್.ಆರ್.ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಪಟ್ಟಣಗೆರೆಯಲ್ಲಿ ವಾಸವಿದ್ದ ರಾಜಸ್ತಾನ ಮೂಲದ ದೇವಿ ದಂಪತಿಗೆ ಆರು ವರ್ಷದ ಮನೀಷ್ ಎಂಬ ಮಗನಿದ್ದ. ಇನ್ನು ದೇವಿ ಮೈಗ್ರೇನ್‌ನಿಂದ ಬಳಲುತಿದ್ದಳು ಎನ್ನಲಾಗಿದೆ. 2 ತಿಂಗಳ ತನ್ನ ತಮ್ಮನನ್ನು ಹೊಡೆಯುತ್ತಾನೆಂದು ಮನೀಷ್‌ನನ್ನು ದಿಂಬಿನಿಂದ ಉಸಿರುಗಟ್ಟಿ ಕೊಲೆ ಮಾಡಿದ್ದಾಳೆ ಎಂದು ತಿಳಿದುಬಂದಿದೆ. ಬಳಿಕ ತನ್ನ ಗಂಡನಿಗೆ ಕರೆ ಮಾಡಿ, ಮಗು ಪ್ರಜ್ಞೆ ತಪ್ಪಿದೆ ಎಂದು ಸುಳ್ಳು ಹೇಳಿದ್ದಾಳೆ. ಬಳಿಕ ಮನೆಗೆ ಬಂದ ಗಂಡನ ಎದುರು ತಾನೇ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಆರ್.ಆರ್.ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.

Last Updated : Dec 12, 2020, 9:21 PM IST

ABOUT THE AUTHOR

...view details