ಕರ್ನಾಟಕ

karnataka

ETV Bharat / city

ಬೆಂಗಳೂರಿನಲ್ಲಿ 20 ಸಾವಿರದ ಗಡಿ ದಾಟಿದ ಕೋವಿಡ್​ ಪ್ರಕರಣ.. ಐವರು ವಿದೇಶಿಯರಿಗೂ ಕೊರೊನಾ ದೃಢ!

ಬೆಂಗಳೂರಿನಲ್ಲಿ ಕಳೆದ 24 ಗಂಟೆಗಳಲ್ಲಿ 20 ಸಾವಿರಕ್ಕೂ ಹೆಚ್ಚು ಕೋವಿಡ್ ಪ್ರಕರಣ ದಾಖಲಾಗಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

Bangalore covid cases report, Bengaluru people fight against covid, Bangalore corona report, Bangalore corona news, ಬೆಂಗಳೂರು ಕೋವಿಡ್​ ಪ್ರಕರಣಗಳ ವರದಿ, ಕೋವಿಡ್​ ವಿರುದ್ಧ ಬೆಂಗಳೂರು ಜನರ ಹೋರಾಟ, ಬೆಂಗಳೂರು ಕೊರೊನಾ ವರದಿ, ಬೆಂಗಳೂರು ಕೊರೊನಾ ಸುದ್ದಿ,
ಬೆಂಗಳೂರು

By

Published : Jan 14, 2022, 10:43 AM IST

ಬೆಂಗಳೂರು:ನಗರದಲ್ಲಿ ಕೋವಿಡ್ ಮೂರನೇ ಅಲೆ ಆರಂಭವಾಗಿದ್ದು, ಕೆಲವೇ ದಿನಗಳಲ್ಲಿ ದಿನವೊಂದಕ್ಕೆ 20 ಸಾವಿರಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ಕಾಣುತ್ತಿದ್ದು, ನಗರದ ಜನರಲ್ಲಿ ಆತಂಕವನ್ನುಂಟು ಮಾಡುತ್ತಿದೆ.

ಓದಿ:ದಾವಣಗೆರೆಯಲ್ಲಿ ಸಂಕ್ರಾಂತಿಯಂದೇ ಭೀಕರ ರಸ್ತೆ ಅಪಘಾತ.. ಮದ್ಯ ಸೇವಿಸಿ ನಿದ್ರೆಗೆ ಜಾರಿದ ಚಾಲಕ, ಏಳು ಜನರ ದುರ್ಮರಣ

ಇಂದು ಬೊಮ್ಮನಹಳ್ಳಿ ವಲಯದಲ್ಲಿ 2,232 , ದಾಸರಹಳ್ಳಿ 493, ಬೆಂಗಳೂರು ಪೂರ್ವ 3,126 , ಮಹದೇವಪುರ 2,343, ಆರ್ ಆರ್‌ನಗರ 1,528, ದಕ್ಷಿಣ ವಲಯ 3,172, ಪಶ್ಚಿಮ 2,454, ಯಲಹಂಕ 1,412, ಅನೇಕಲ್ 921, ಬೆಂಗಳೂರು ಹೊರವಲಯ 1,360 ಸೇರಿ ಒಟ್ಟು 20,121 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಓದಿ:India Covid: ದೇಶದಲ್ಲಿ ಹೊಸದಾಗಿ 2.64 ಲಕ್ಷ ಮಂದಿಯಲ್ಲಿ ಸೋಂಕು

ನಿನ್ನೆ 18,374 ಜನರಲ್ಲಿ ಕೋವಿಡ್ ಪ್ರಕರಣಗಳು ದೃಢಪಟ್ಟಿತ್ತು. ನಿನ್ನೆಯವರೆಗೂ ಸಕ್ರಿಯ ಪ್ರಕರಣಗಳ ಸಂಖ್ಯೆ 90,893 ಇದ್ದು, ಇಂದು ಲಕ್ಷ ದಾಟುವ ಸಾಧ್ಯತೆ ಇದೆ. 479ರ ಮೈಕ್ರೋ ಕಂಟೈನ್​ಮೆಂಟ್ ಝೋನ್​ಗಳಿವೆ. ಪ್ರತಿನಿತ್ಯ ಲಕ್ಷ ಮೀರಿ ಕೋವಿಡ್ ಟೆಸ್ಟ್ ನಡೆಸಲಾಗ್ತಿದೆ. ಬೂಸ್ಟರ್​ ಡೋಸ್​ ಸೇರಿದಂತೆ ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದೆ.

ವಿದೇಶಿಯರಿಗೆ ಕೊರೊನಾ:ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಿನ್ನೆ ರಾತ್ರಿ ಮತ್ತು ಇಂದು ಬೆಳಗಿನ ಜಾವ ಆಗಮಿಸಿದ 5 ಜನರಲ್ಲಿ ಕೋವಿಡ್ ಸೋಂಕು ಧೃಡಪಟ್ಟಿದೆ. ಕೆನಡಾ ಮೂಲದ 2 ಪ್ರಯಾಣಿಕರಲ್ಲಿ, ಯುಎಸ್ ಮೂಲದ 1, ಯುಕೆ ಮೂಲದ 1 ಹಾಗೂ ರೋಮ್ ಮೂಲದ 1 ಪ್ರಯಾಣಿಕನಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಸೋಂಕಿತರನ್ನು ವಿವಿಧ ಕೋವಿಡ್ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ.

ABOUT THE AUTHOR

...view details