ಬೆಂಗಳೂರು: ರಾಜ್ಯಾದ್ಯಂತ ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ ಶುರುವಾಗಿದೆ. ಮೊದಲ ದಿನ ತರ್ಕಶಾಸ್ತ್ರ, ಬ್ಯುಸಿನೆಸ್ ಸ್ಟಡೀಸ್ ವಿಷಯಗಳ ಪರೀಕ್ಷೆ ನಡೆಯಿತು. ಮೊದಲ ದಿನವೇ 11,379 ವಿದ್ಯಾರ್ಥಿಗಳು ಹಲವು ಕಾರಣಗಳಿಂದ ಪರೀಕ್ಷೆಗೆ ಗೈರಾಗಿದ್ದಾರೆ. ಪರೀಕ್ಷೆ ಬೆಳಗ್ಗೆ 10-15ಕ್ಕೆ ಆರಂಭವಾಗಿ 1-30ಕ್ಕೆ ಮುಗಿಯಿತು.
ದ್ವಿತೀಯ ಪಿಯುಸಿ ಪರೀಕ್ಷೆ: ಮೊದಲ ದಿನ 11 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಗೈರು - ಪದವಿ ಪೂರ್ವ ಶಿಕ್ಷಣ ಇಲಾಖೆ
ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಿದೆ. ಮೊದಲನೇ ದಿನ ತರ್ಕಶಾಸ್ತ್ರ, ಬ್ಯುಸಿನೆಸ್ ಸ್ಟಡೀಸ್ ಪರೀಕ್ಷೆ ನಡೆದಿದೆ.
ದ್ವಿತೀಯ ಪಿಯುಸಿ ಪರೀಕ್ಷೆಗೆ ಮೊದಲ ದಿನವೇ 11 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಗೈರು
ತರ್ಕಶಾಸ್ತ್ರ ಪರೀಕ್ಷೆಗೆ 620 ವಿದ್ಯಾರ್ಥಿಗಳು ನೋಂದಾಯಿಸಿದ್ದು, 552 ಹಾಜರಾಗಿದ್ದರೆ 68 ವಿದ್ಯಾರ್ಥಿಗಳು ಗೈರುಹಾಜರಾಗಿದ್ದಾರೆ. ಬ್ಯುಸಿನೆಸ್ ಸ್ಟಡೀಸ್ ಪರೀಕ್ಷೆಗೆ 2,38,764 ವಿದ್ಯಾರ್ಥಿಗಳು ನೋಂದಾಯಿಸಿದರೆ 2,27,453 ಹಾಜರಾಗಿದ್ದು 11,311 ಗೈರು ಹಾಜರಾಗಿದ್ದಾರೆ. ಯಾವುದೇ ವಿದ್ಯಾರ್ಥಿ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿ ಡಿಬಾರ್ ಆಗಿಲ್ಲ. ಯಾವುದೇ ವಿದ್ಯಾರ್ಥಿಗೂ ಕೋವಿಡ್ ಸೋಂಕು ದೃಢಪಟ್ಟಿಲ್ಲ ಎಂದು ಪಿಯು ಬೋರ್ಡ್ ತಿಳಿಸಿದೆ.
ಇದನ್ನೂ ಓದಿ:2nd PUC ಪರೀಕ್ಷೆ ಬರೆಯಲು ಆಗಮಿಸಿದ ಅಭಿಷೇಕ ಹಿರೇಮಠ್ : ಪೊಲೀಸರು ಹೈಅಲರ್ಟ್