ಕರ್ನಾಟಕ

karnataka

ETV Bharat / city

Weather Report: ರಾಜ್ಯಕ್ಕೆ ಮುಂಗಾರು ಪ್ರವೇಶ ವಿಳಂಬ - Monsoon delay

ಒಂದೇ ವಾರದಲ್ಲಿ ಸಂಭವಿಸಿದ್ದ ಎರಡು ಚಂಡಮಾರುತಗಳು ತೇವಾಂಶ ಭರಿತ ಮೋಡಗಳನ್ನು ತರುವಲ್ಲಿ ವಿಳಂಬ ಮಾಡಿವೆ. ಬಂಗಾಳಕೊಲ್ಲಿಯಲ್ಲಿ ಮುಂದಿನ ದಿನಗಳಲ್ಲಿ ಮುಂಗಾರು ಮಾರುತಗಳು ಉಂಟಾಗಲಿವೆ. ದಕ್ಷಿಣದಲ್ಲಿ ಕೂಡ ಉತ್ತಮ ಹವಾಗುಣ ಸೃಷ್ಟಿಯಾಗಲಿದೆ. ಜೂ 3 ಅಥವಾ 4ರಂದು ಕೇರಳಕ್ಕೆ ಪ್ರವೇಶಿಸಲಿದೆ. ಆನಂತರ, ಮಾರುತಗಳು ಪ್ರಬಲವಾದರೆ ಒಂದೆರೆಡು ದಿನಗಳಲ್ಲಿ ರಾಜ್ಯಕ್ಕೆ ಆಗಮಿಸಲಿವೆ. ದುರ್ಬಲವಾದರೆ ವಿಳಂಬವಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದರು.

Weather Report
ಮುಂಗಾರು ಪ್ರವೇಶ ವಿಳಂಬ

By

Published : Jun 1, 2021, 6:07 PM IST

ಬೆಂಗಳೂರು: ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ರಾಜ್ಯದಲ್ಲಿ ಮುಂದಿನ ಇಂದು ಸೇರಿ ಮೂರು ದಿನ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯ ಪ್ರಾದೇಶಿಕ ನಿರ್ದೇಶಕ ಸಿ.ಎಸ್ ಪಾಟೀಲ್ ತಿಳಿಸಿದ್ದಾರೆ.

ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಇಂದಿನಿಂದ ಮತ್ತು ಜೂನ್ 5 ರವರೆಗೆ ಹಾಗೂ ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಮತ್ತು ಹಾಸನದಲ್ಲಿ ಇಂದಿನಿಂದ ಎರಡು ದಿನ ವ್ಯಾಪಕ ಮಳೆಯಾಗಲಿದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಯೆಲ್ಲೋ ಆರ್ಟ್ ಘೋಷಿಸಲಾಗಿದೆ.

ರಾಜ್ಯಕ್ಕೆ ಮುಂಗಾರು ಪ್ರವೇಶ ವಿಳಂಬ

ಉತ್ತರ ಒಳನಾಡಿನ ಬೀದರ್ ಕಲಬುರಗಿಯಲ್ಲಿ ಜೂ.2, 3 ಮತ್ತು4 ರಂದು ಹಾಗೂ ಗದಗ, ಕೊಪ್ಪಳ, ರಾಯಚೂರು, ವಿಜಯಪುರದಲ್ಲಿ ಜೂ.3ರಂದು ವ್ಯಾಪಕ ಮಳೆಯಾಗಲಿದೆ. ದಕ್ಷಿಣ ಒಳನಾಡಿನ ಚಾಮರಾಜನಗರ, ಬೆಂಗಳೂರು, ಬೆಂ. ಗ್ರಾಮಾಂತರ, ಕೋಲಾರದಲ್ಲಿ ಜೂ.2 ರಿಂದ 4 ರವರೆಗೆ ಹಾಗೂ ಚಿತ್ರದರ್ಗು, ದಾವಣಗೆರೆಯಲ್ಲಿ ಜೂ.2 ಮತ್ತು 3 ರಂದು ಭಾರಿ ಮಳೆಯಾಗಲಿದೆ. ಈ ಜಿಲ್ಲೆಗಳಲ್ಲಿ ಕೂಡ ಯೆಲ್ಲೋ ಅಲರ್ಟ್ ಎಚ್ಚರಿಕೆ ನೀಡಲಾಗಿದೆ.

ಇಂದು ಕರ್ನಾಟಕದ ಕರಾವಳಿಯಲ್ಲಿ ವ್ಯಾಪಕ ಮಳೆಯಾಗಿದೆ. ಒಳನಾಡಿನಲ್ಲಿ ಕೆಲವು ಕಡೆ ಮಾತ್ರ ಮಳೆಯಾಗಿದೆ. ಮುಖ್ಯವಾಗಿ ಧರ್ಮಸ್ಥಳದಲ್ಲಿ 5 ಸೆ. ಮೀ ಮಳೆಯಾಗಿದೆ. ಹೊನ್ನಾವರದಲ್ಲಿ 3 ಸೆ. ಮೀ ಮಂಗಳೂರು 2 ಸೆ. ಮೀ, ರಾಯಚೂರು ಜಿಲ್ಲೆಯ ಜಾಲಹಳ್ಳಿಯಲ್ಲಿ 2 ಸೆ. ಮೀ ಮಳೆಯಾಗಿದೆ ಎಂದು ಸಿ.ಎಸ್. ಪಾಟೀಲ್ ಮಾಹಿತಿ ನೀಡಿದ್ದಾರೆ.

ಮುಂಗಾರು ವಿಳಂಬ:ಕೇರಳಕ್ಕೆ ಜೂ.3ರಂದು ಮುಂಗಾರು ಮಾರುತಗಳು ಪ್ರವೇಶಿಸಲಿವೆ. ಒಂದೇ ವಾರದಲ್ಲಿ ಸಂಭವಿಸಿದ್ದ ಎರಡು ಚಂಡಮಾರುತಗಳು ತೇವಾಂಶ ಭರಿತ ಮೋಡಗಳನ್ನು ತರುವಲ್ಲಿ ವಿಳಂಬ ಮಾಡಿವೆ. ಬಂಗಾಳಕೊಲ್ಲಿಯಲ್ಲಿ ಮುಂದಿನ ದಿನಗಳಲ್ಲಿ ಮುಂಗಾರು ಮಾರುತಗಳು ಉಂಟಾಗಲಿವೆ. ದಕ್ಷಿಣದಲ್ಲಿ ಕೂಡ ಉತ್ತಮ ಹವಾಗುಣ ಸೃಷ್ಟಿಯಾಗಲಿದೆ. ಜೂ 3 ಅಥವಾ 4ರಂದು ಕೇರಳಕ್ಕೆ ಪ್ರವೇಶಿಸಲಿದೆ. ಆನಂತರ, ಮಾರುತಗಳು ಪ್ರಬಲವಾದರೆ ಒಂದೆರೆಡು ದಿನಗಳಲ್ಲಿ ರಾಜ್ಯಕ್ಕೆ ಆಗಮಿಸಲಿವೆ. ದುರ್ಬಲವಾದರೆ ವಿಳಂಬವಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್.ಪಾಟೀಲ್ ತಿಳಿಸಿದ್ದಾರೆ.

ABOUT THE AUTHOR

...view details