ಕರ್ನಾಟಕ

karnataka

ETV Bharat / city

ನಕಲಿ ಲೆಕ್ಕ ನೀಡಿ ಬ್ಯಾಂಕ್​​ಗಳಿಗೆ ಹಣ ವಂಚನೆ ಆರೋಪ: ಬೆಂಗಳೂರು ಸೇರಿದಂತೆ ಹಲವೆಡೆ ಸಿಬಿಐ ದಾಳಿ - CBI Attack

ಬ್ಯಾಂಕ್​ಗಳಿಗೆ ವಂಚಿಸಿದ ಆರೋಪ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಸಿಬಿಐ, ಬೆಂಗಳೂರು, ಹೈದರಾಬಾದ್ ಸೇರಿದಂತೆ ವಿವಿಧೆಡೆ ದಾಳಿ ನಡೆಸಿದೆ.

CBI Attack
ಸಿಬಿಐ

By

Published : Jan 13, 2021, 9:48 PM IST

ಬೆಂಗಳೂರು: ಹೂಡಿಕೆಯಲ್ಲಿ‌ ನಕಲಿ‌ ಲೆಕ್ಕ ನೀಡಿ ಬ್ಯಾಂಕ್​ಗಳಿಗೆ ವಂಚಿಸಿದ ಆರೋಪ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಸಿಬಿಐ, ಬೆಂಗಳೂರು‌, ಹೈದರಾಬಾದ್ ಹಾಗೂ ತಮಿಳುನಾಡಿನ ವಿವಿಧ ಕಡೆಗಳಲ್ಲಿ‌ ದಾಳಿ ನಡೆಸಿ ಪರಿಶೀಲನೆ ನಡೆಸಿದೆ‌.

ಅಂಡರ್ ಗ್ರೌಂಡ್ ಟನಲ್ ಕಾಮಗಾರಿಯ ಗುತ್ತಿಗೆ ನಿರ್ವಹಿಸುತ್ತಿದ್ದ ಕಾಸ್ಟಲ್ ಪ್ರಾಜೆಕ್ಟ್ ಕಂಪನಿಯು ವಿವಿಧ ರಾಷ್ಟ್ರೀಕೃತ ಬ್ಯಾಂಕ್​ಗಳಿಂದ ಸಾಲ ಪಡೆಯುವ ಒಪ್ಪಂದ ಮಾಡಿಕೊಂಡಿತ್ತು.

ಅಧಿಕ ಸಾಲ ಪಡೆಯುವ ಸಲುವಾಗಿ ನಕಲಿ‌ ಬಂಡವಾಳದ ಲೆಕ್ಕ ನೀಡಿದ್ದ ಹಿನ್ನೆಲೆಯಲ್ಲಿ ಬರೋಬ್ಬರಿ ₹200.38 ಕೋಟಿ ವಂಚಿಸಿರುವ ಆರೋಪ ಕೇಳಿ ಬಂದ ಬೆನ್ನಲ್ಲೇ ಬ್ಯಾಂಕುಗಳ ಒಕ್ಕೂಟವು ದೂರು ದಾಖಲಿಸಿದ್ದವು. ಈ ಸಂಬಂಧ ಜ. 6ರಂದು ಸಿಬಿಐ ಪ್ರಕರಣ ದಾಖಲಿಸಿಕೊಂಡಿತ್ತು.

ABOUT THE AUTHOR

...view details