ಕರ್ನಾಟಕ

karnataka

ETV Bharat / city

ಮೋದಿ ಜನತಾ ಕರ್ಫ್ಯೂ : ಏನ್​ ಇರುತ್ತೆ....ಏನ್​ ಇರಲ್ಲ .. ಒಂದ್ಸಲ ನೋಡ್ಕೊಂಡ್​​ ಬಿಡಿ - ಕೊರೊನಾ ವೈರಸ್​

ದೇಶದ ಜನರನ್ನು ಬೆಚ್ಚಿ ಬೀಳಿಸಿರುವ ಮಾಹಾಮಾರಿ ಕೊರೊನಾ ವೈರಸ್​ ತಡೆಗೆ ಪ್ರಧಾನಮಂತ್ರಿ ಮೋದಿ ಕರೆ ನೀಡಿದ್ದು, ಭಾನುವಾರ ಜನತಾ ಕರ್ಫ್ಯೂ ಘೋಷಣೆ ಮಾಡಿದ್ದಾರೆ. ಹಾಗಿದ್ರೆ ಜನತಾ ಕರ್ಫ್ಯೂ ದಿನ ಯಾವೆಲ್ಲ ಸೇವೆ ಇರಲಿದೆ ಮತ್ತು ಇರೋದಿಲ್ಲ ಅಂತೀರಾ... ಇಲ್ಲಿದೆ ವರದಿ...

modi-janata-corfu
ಮೋದಿ ಜನತಾ ಕರ್ಪ್ಯೂ

By

Published : Mar 20, 2020, 9:15 PM IST

Updated : Mar 20, 2020, 9:29 PM IST

ಬೆಂಗಳೂರು: ಕೊರೊನಾ ಕರಿಛಾಯೆ ದೇಶವನ್ನು ಆವರಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದು, ಜನತಾ ಕರ್ಫ್ಯೂಗೆ ಕರೆ ನೀಡಿದ್ದಾರೆ.

ಜನರಿಂದ ಜನರಿಗಾಗಿ ಜನತಾ ಕರ್ಫ್ಯೂ ಮಾಡಿ ಘೋಷಣೆ ಮಾಡಿರುವ ಪಿಎಂ, ಭಾನುವಾರ ಬೆಳಗ್ಗೆಯಿಂದ ಸಂಜೆಯವರೆಗೆ ಯಾರೂ ಮನೆಯಿಂದ ಹೊರ ಬರದಂತೆ ಸೂಚನೆ ನೀಡಿದ್ದಾರೆ..‌ ಹಾಗಿದರೆ ಭಾನುವಾರ ದೇಶವೇ ಸ್ತಬ್ಧವಾಗಲಿದ್ಯಾ? ಬೆಳಗ್ಗೆ 7 ರಿಂದ ರಾತ್ರಿ 9ರ ವರೆಗೆ ನಡೆಯಲಿರುವ ಜನತಾ ಕರ್ಫ್ಯೂ ವೇಳೆ ಏನು ಇರಲಿದೆ... ಏನು ಇರೋದಿಲ್ಲ.. ಎನ್ನುವ ಮಾಹಿತಿ‌ ಇಲ್ಲಿದೆ.

ಅಲಭ್ಯ ಸೇವೆಗಳು

ಆಟೋ ಟ್ಯಾಕ್ಸಿ, ಓಲಾ-ಉಬರ್, ನಮ್ಮ ಮೆಟ್ರೋ, ವಾಯುವ್ಯ ಸಾರಿಗೆ, ಲಾರಿ, ಬೇಕರಿ, ಥಿಯೇಟರ್, ಮಾರುಕಟ್ಟೆ, ಬೀದಿ ಬದಿ ವ್ಯಾಪಾರ, ಚಿನ್ನಾಭರಣ ಮಳಿಗೆ, ಪಬ್ - ಬಾರ್ ಪೆಟ್ರೋಲ್ ಬಂಕ್ ಜೊತೆಗೆ ಪ್ರವಾಸಿತಾಣಗಳಾದ ಲಾಲ್ ಬಾಗ್, ಕಬ್ಬನ್ ಪಾರ್ಕ್ ಸ್ಥಗಿತ.

ಲಭ್ಯ ಸೇವೆಗಳು

ಹಾಲು, ಸೂಪರ್ ಮಾರ್ಕೆಟ್​, ಮೆಡಿಕಲ್ ಶಾಪ್, ಆಂಬುಲೇನ್ಸ್ ಸೇವೆ, ಆಸ್ಪತ್ರೆಗಳು, ಬಿಎಂಟಿಸಿ ಬಸ್​. ‌ಕೆಎಸ್​ಆರ್​ಟಿಸಿ ಬಸ್, ರೈಲು ಸೇವೆಗಳು, ಹೋಟೆಲ್​ಗಳು ತೆರೆದಿದ್ದರೂ ಪಾರ್ಸಲ್ ವ್ಯವಸ್ಥೆಗೆ ಸೀಮಿತ. ದೇವಾಲಯ ಬಂದ್, ಒಟ್ಟಿನಲ್ಲಿ ಭಾನುವಾರದ ಜನತಾ ಕರ್ಫ್ಯೂಗೆ ಜನರೂ ಸಾಥ್ ನೀಡುತ್ತಿದ್ದು, ಬಹುತೇಕ ಬಂದ್ ವಾತಾವರಣ ಸೃಷ್ಟಿಯಾಗಲಿದೆ.

Last Updated : Mar 20, 2020, 9:29 PM IST

ABOUT THE AUTHOR

...view details