ಕರ್ನಾಟಕ

karnataka

ETV Bharat / city

ಮೋದಿ ದುರ್ಯೋಧನ ಅಷ್ಟೇ ಅಲ್ಲ, ಆಧುನಿಕ ಭಸ್ಮಾಸುರ: ವಿ ಎಸ್ ಉಗ್ರಪ್ಪ - Modi Duryodhana is not just the modern Bhasmasura

ಹಿಂದೆ ಪಾರ್ಲಿಮೆಂಟ್ ನಲ್ಲಿ ದುರ್ಯೋಧನ ಅಂದಿದ್ದೆ, ಆದ್ರೆ ದುರ್ಯೋಧನ ಅಷ್ಟೇ ಅಲ್ಲ ಮೋದಿ ಆಧುನಿಕ ಭಸ್ಮಾಸುರ ಎಂದು ಕಾಂಗ್ರೆಸ್ ಮುಖಂಡ ವಿ.ಎಸ್. ಉಗ್ರಪ್ಪ ಮೋದಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಮೋದಿ ದುರ್ಯೋಧನ ಅಷ್ಟೇ ಅಲ್ಲ, ಆಧುನಿಕ ಭಸ್ಮಾಸುರ - ವಿ ಎಸ್ ಉಗ್ರಪ್ಪ

By

Published : Nov 4, 2019, 4:35 PM IST

ಬೆಂಗಳೂರು: ಹಿಂದೆ ಪಾರ್ಲಿಮೆಂಟ್ ನಲ್ಲಿ ದುರ್ಯೋಧನ ಅಂದಿದ್ದೆ, ಆದ್ರೆ ದುರ್ಯೋಧನ ಅಷ್ಟೇ ಅಲ್ಲ ಮೋದಿ ಆಧುನಿಕ ಭಸ್ಮಾಸುರ ಎಂದು ಕಾಂಗ್ರೆಸ್ ಮುಖಂಡ ವಿ.ಎಸ್. ಉಗ್ರಪ್ಪ ವಾಗ್ದಾಳಿ ನಡೆಸಿದ್ದಾರೆ.

ಪ್ರಾದೇಶಿಕ ಸಮಗ್ರ ಆರ್ಥಿಕ ಒಪ್ಪಂದಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರದ ನಡೆ ವಿರೋಧಿಸಿ ಕಿಸಾನ್ ಕಾಂಗ್ರೆಸ್ ರೈಲ್ವೇ ನಿಲ್ದಾಣಕ್ಕೆ ಮುತ್ತಿಗೆ ಹಾಕಿದರು. ಈ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡ ವಿಎಸ್ ಉಗ್ರಪ್ಪ, ಹನ್ನೆರಡು ಸಾವಿರ ವಿದೇಶಿ ಉತ್ಪನ್ನಗಳಿಗೆ ದೇಶವನ್ನು ಮಾರ್ಕೆಟ್ ಮಾಡಲು ಮುಂದಾಗಿದ್ದಾರೆ. ಇದೇನಾ ದೇಶಪ್ರೇಮ, ದೇಶದಲ್ಲಿ ಯಾವುದರ ಮೇಲೆ ಕಣ್ಣಾಕಿದರೂ, ಅವೆಲ್ಲವೂ ಭಸ್ಮ ಆಗುತ್ತಿದೆ ಎಂದು ವ್ಯಂಗ್ಯವಾಡಿದರು.

ಮೋದಿ ದುರ್ಯೋಧನ ಅಷ್ಟೇ ಅಲ್ಲ, ಆಧುನಿಕ ಭಸ್ಮಾಸುರ - ವಿ ಎಸ್ ಉಗ್ರಪ್ಪ

ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಮಿಗಾ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಈ ಒಪ್ಪಂದಕ್ಕೆ ಮುಂದಾಗಿರುವುದು ದೊಡ್ಡ ಹುನ್ನಾರ. ರಾಷ್ಟ್ರವನ್ನು ವಿದೇಶಕ್ಕೆ ಮಾರುವಂತಹ ಒಪ್ಪಂದ ಇದು. ರೈತ ವಿರೋಧಿ ಪ್ರಧಾನಿಯಾಗಿ ದೇಶಕ್ಕೆ, ಅನ್ನ, ಹಾಲು ಕೊಡುವ ರೈತರನ್ನು ಬೀದಿಗೆ ತರುವ ಕೆಲಸ ನಡೀತಿದೆ. ಮೊದಲು ಕಡಿಮೆ ಬೆಲೆಗೆ ಮಾರಾಟ ಮಾಡಿ, ನಮ್ಮ ಉದ್ಯಮಗಳು ಬಾಗಿಲುಮುಚ್ಚಿದ ಬಳಿಕ ಹೆಚ್ಚು ಬೆಳೆಗೆ ಮಾರಾಟ ಮಾಡ್ತಾರೆ. ನಮ್ಮ ಕೃಷಿಯನ್ನು ಸರ್ವನಾಶ ಮಾಡ್ತಾರೆ ಎಂದರು.

ABOUT THE AUTHOR

...view details