ಬೆಂಗಳೂರು:ಆಧುನಿಕ ತಂತ್ರಜ್ಞಾನ ಬಳಸಿ ಉದ್ಯಮದಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ಅಂತಹ ತಂತ್ರಜ್ಞಾನ ಲೆಕ್ಕಪರಿಶೋಧಕರು ಅಳವಡಿಸಿಕೊಂಡರೆ ಆಗ ಉದ್ಯಮ ಮತ್ತು ವ್ಯವಹಾರಗಳಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯ ಎಂದುಇಂಡಿಯನ್ ಇನ್‍ಸ್ಟಿಟ್ಯುಟ್ಸ್ ಆಫ್ ಮ್ಯಾನೇಜ್‍ಮೆಂಟ್ (ಐಐಎಂ) ಮುಖ್ಯಸ್ಥ ಪ್ರೊ.ಕೆ.ಕುಮಾರ್ ಅಭಿಪ್ರಾಯಪಟ್ಟರು.
ಉದ್ಯಮದಲ್ಲಿ ಅಭಿವೃದ್ಧಿ ಹೊಂದಲು ಆಧುನಿಕ ತಂತ್ರಜ್ಞಾನ ಅಗತ್ಯ: ಪ್ರೊ.ಕೆ.ಕುಮಾರ್ - ಉತ್ತಮ ಕೌಶಲ ಮತ್ತು ವೃತ್ತಿಪರತೆ
ಬೆಂಗಳೂರು ನಗರದ ಅಂಬೇಡ್ಕರ್ ಭವನದಲ್ಲಿ ಎರಡು ದಿನಗಳ ಅಭ್ಯುದಯ ಕಾರ್ಯಕ್ರಮ ನಡೆಯಿತು.
ಐಐಎಂ ಮುಖ್ಯಸ್ಥ ಪ್ರೊ.ಕೆ.ಕುಮಾರ್
ನಗರದ ಅಂಬೇಡ್ಕರ್ ಭವನದಲ್ಲಿ ಜರುಗಿದ 2 ದಿನಗಳ ಅಭ್ಯುದಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಕೇವಲ ಅಂಕ ಗಳಿಸಿ ಉತ್ತೀರ್ಣರಾಗುವುದಲ್ಲ. ಉತ್ತಮ ಕೌಶಲ ಮತ್ತು ವೃತ್ತಿಪರತೆಯನ್ನೂ ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಲೆಕ್ಕ ಪರಿಶೋಧಕರು ಸಮಾಜದಲ್ಲಿ ಪ್ರತಿಷ್ಠಿತ ಸ್ಥಾನಮಾನ ಹೊಂದಿದ್ದಾರೆ. ಬ್ಯಾಂಕಿಂಗ್, ಕಾರ್ಪೊರೇಟ್ ವಲಯ, ಬಹುರಾಷ್ಟ್ರೀಯ ಕಂಪನಿ ಸೇರಿದಂತೆ ವಿವಿಧ ಉದ್ಯಮ, ವ್ಯವಹಾರಗಳಲ್ಲಿ ಕಾರ್ಯನಿರ್ವಹಿಸುತ್ತಾರೆ. ಹೀಗಾಗಿ ಪ್ರತಿದಿನವೂ ಇಲ್ಲಿ ಹೊಸ ಯೋಜನೆಗಳತ್ತ ಗಮನ ಕೂಡ ಹರಿಸಬೇಕು. ಹೊಸದನ್ನು ಕಲಿಯಬೇಕಾಗುತ್ತದೆ ಎಂದರು.