ಕರ್ನಾಟಕ

karnataka

ETV Bharat / city

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಮೊಬೈಲ್ ಬಳಕೆಗೆ ನಿರ್ಬಂಧ - ಗೃಹ ಕಚೇರಿ ಕೃಷ್ಣಾದಲ್ಲಿ ಮೊಬೈಲ್ ಬಳಕೆ ನಿರ್ಬಂಧ

ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಆಂತರಿಕ ಸಭೆಯ ಆಡಿಯೋ ಬಹಿರಂಗವಾದ ಬೆನ್ನಲ್ಲೇ ಇದೀಗ ವಿಧಾನಸೌಧ ಹಾಗೂ ಮುಖ್ಯಮಂತ್ರಿಗಳ ಅಧಿಕೃತ ಗೃಹ ಕಚೇರಿ ಕೃಷ್ಣಾಗೆ ಮುಖ್ಯಮಂತ್ರಿಗಳನ್ನು ಕಾಣಲು ಬರುವ ಅತಿಥಿಗಳು ಮೊಬೈಲ್​ ಬಳಸದಂತೆ ನಿರ್ಬಂಧ ವಿಧಿಸಲಾಗಿದೆ.

C M Yediyurappa

By

Published : Nov 6, 2019, 4:54 PM IST

ಬೆಂಗಳೂರು: ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಆಂತರಿಕ ಸಭೆಯ ಆಡಿಯೋ ಬಹಿರಂಗವಾದ ಬೆನ್ನಲ್ಲೇ ಇದೀಗ ವಿಧಾನಸೌಧ ಹಾಗೂ ಸಿಎಂ ಅಧಿಕೃತ ಗೃಹ ಕಚೇರಿ ಕೃಷ್ಣಾಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಬರುವ ಅತಿಥಿಗಳು ಮೊಬೈಲ್​ ಬಳಸದಂತೆ ನಿರ್ಬಂಧ ವಿಧಿಸಲಾಗಿದೆ.

ಹುಬ್ಬಳ್ಳಿ ಆಡಿಯೋ ಅವಾಂತರದ ಬಳಿಕ ಸಿಎಂ ಅಲರ್ಟ್ ಆಗಿದ್ದು, ಗೃಹ ಕಚೇರಿ ಕೃಷ್ಣಾಗೆ ಬರುವ ಅತಿಥಿಗಳು ಮೊಬೈಲ್ ಜೊತೆ ಬರುವಂತಿಲ್ಲ. ಸಾರ್ವಜನಿಕರು, ಪಕ್ಷದ ಕಾರ್ಯಕರ್ತರು ಪ್ರವೇಶ ದ್ವಾರದಲ್ಲೇ ಮೊಬೈಲ್​ಗಳನ್ನು ಭದ್ರತಾ ಸಿಬ್ಬಂದಿಗೆ ನೀಡಿ ಟೋಕನ್ಪಡೆದು ಒಳ ಹೋಗಬೇಕಿದೆ.

ಗೃಹ ಕಚೇರಿಯಲ್ಲಿ ನಡೆಯುವ ಸಭೆಗಳಲ್ಲಿ ಪಾಲ್ಗೊಳ್ಳುವವರಿಗೂ ಮೊಬೈಲ್ ನಿಷೇಧ ನಿಯಮ ಅನ್ವಯವಾಗಲಿದೆ. ಆಯ್ದ ವ್ಯಕ್ತಿಗಳಿಗೆ, ಅನುಮತಿ ಪಡೆದವರು, ಗಣ್ಯರಿಗೆ ಮಾತ್ರ ಮೊಬೈಲ್ ಕೊಂಡೊಯ್ಯಲು ಅವಕಾಶ ನೀಡಲಾಗಿದೆ. ಹಾಗಾಗಿ ಸಚಿವರು, ಶಾಸಕರ ಆಪ್ತ ಸಹಾಯಕರಿಗೆ ಮಾತ್ರ ಸಿಎಂ ಗೃಹ ಕಚೇರಿ ಆವರಣದೊಳಗೆ ಮೊಬೈಲ್ ಕೊಂಡೊಯ್ಯಲು ಅವಕಾಶ ಕಲ್ಪಿಸಲಾಗಿದೆ.

ಸಿಎಂ ಭೇಟಿಯಾಗಲು ಬರುವ ಜನರ ಮೊಬೈಲ್ ಪಡೆದು ಟೋಕನ್ ನೀಡಿ ಒಂದೆಡೆ ಕೂರಿಸಲಾಗುತ್ತದೆ. ಇದರಿಂದ ಮನವಿ ಪತ್ರ ಹಿಡಿದು ಸಿಎಂ ಭೇಟಿಗೆ ಜನರು ಕಾದು ಕುಳಿತುಕೊಳ್ಳುವಂತಾಗಿದೆ ಎಂಬ ಅಸಮಾಧಾನ ಕೇಳಿಬಂದಿದೆ.

For All Latest Updates

ABOUT THE AUTHOR

...view details