ಬೆಂಗಳೂರು: ನಗರದ ಪ್ರಯಾಣಿಕರಿಗಾಗಿ ನೂತನ ತಂತ್ರಜ್ಞಾನ ಪರಿಚಯಿಸಲು ಹೊರಟಿರುವ ಬಿಎಂಟಿಸಿ, ಇನ್ನು ಮುಂದೆ ಪಾಸ್ ಖರೀದಿಸುವ ಬದಲಾಗಿ ಮೊಬೈಲ್ ಫೋನ್‌ನ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಪ್ರಯಾಣಿಸುವುದಕ್ಕೆ ಅವಕಾಶ ಕಲ್ಪಿಸಲಿದೆ.
ನಗರದ ಖಾಸಗಿ ಟೆಕ್ ಸಂಸ್ಥೆ ಟುಮೊಕ್ ಕಂಪನಿಯ ಸಹಭಾಗಿತ್ವದಲ್ಲಿ ಮೊಬೈಲ್ ಆ್ಯಪ್ ಪರಿಚಯಿಸುತ್ತಿರುವ ಬಿಎಂಟಿಸಿ, ಸ್ಮಾರ್ಟ್ಫೋನ್ಗಳಲ್ಲೇ ಟುಮೊಕ್ ಸಂಸ್ಥೆಯ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ದಿನದ ಮತ್ತು ವಾರದ ಹಾಗೂ ಮಾಸಿಕ ಪಾಸುಗಳನ್ನು ಪಡೆಯಲು ಅವಕಾಶ ನೀಡಲಾಗುತ್ತದೆ ಎಂದು ಸಾರಿಗೆ ಸಂಸ್ಥೆ ತಿಳಿಸಿದೆ.
ಮೊಬೈಲ್ ಆ್ಯಪ್ ಅನ್ನು ಬಸ್‌ನ ನಿರ್ವಾಹಕರ ಬಳಿಯ ಎಲೆಕ್ಟ್ರಾನಿಕ್ ಟಿಕೆಟ್ ಮಿಷನ್ (ಇಟಿಎಂ) ಗಳಲ್ಲಿ ಸ್ಕ್ಯಾನ್ ಮಾಡಿ ಪ್ರಯಾಣಿಬಹುದಾಗಿದೆ. ಬಸ್‌ಗಳ ನಿರ್ವಾಹಕರ ಬಳಿ ಇಟಿಎಂ ಮಿಷನ್‌ಗಳಿರಲಿದ್ದು, ಅದರಲ್ಲಿ ಮೊಬೈಲ್‌ನಲ್ಲಿನ ಕ್ಯೂಆರ್‌ಕೋಡ್ ಸ್ಕ್ಯಾನ್ ಮಾಡಬಹುದಾಗಿದೆ ಎಂದಿದೆ.
ಇದನ್ನೂ ಓದಿ:ಮೆದುಳು ನಿಷ್ಕ್ರಿಯ: ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಮಹಿಳೆ
ಆರಂಭದಲ್ಲಿ ಎಲ್ಲ ವೋಲ್ವೋ ಎಸಿ ಬಸ್‌ಗಳಲ್ಲಿ ಹಾಗೂ ಸುಮಾರು 200 ಸಾಮಾನ್ಯ ಬಸ್‌ಗಳಲ್ಲಿ ಈ ಸೇವೆ ಪರಿಚಯಿಸಲು ಉದ್ದೇಶಿಸಲಾಗಿದೆ ಎಂದು ಎಂದು ಬಿಎಂಟಿಸಿ ಐಟಿ ವಿಭಾಗ ಮಾಹಿತಿ ನೀಡಿದೆ.