ಕರ್ನಾಟಕ

karnataka

ETV Bharat / city

ಸರ್ಕಾರದ ಮುಖ್ಯ ಸಚೇತಕರಾಗಿ ಪರಿಷತ್ ಸದಸ್ಯ ನಾರಾಯಣಸ್ವಾಮಿ ನೇಮಕ - ಕರ್ನಾಟಕ ಸರ್ಕಾರದ ಮುಖ್ಯ ಸಚೇತಕರಾಗಿ ನಾರಾಯಣಸ್ವಾಮಿ ನೇಮಕ

ಮಾರ್ಚ್ 2022ರಿಂದ ಜಾರಿಗೆ ಬರುವಂತೆ ಸಂಪುಟ ದರ್ಜೆಯ ಸಚಿವರ ಸ್ಥಾನಮಾನದೊಂದಿಗೆ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಅವರನ್ನು ಸರ್ಕಾರದ ಮುಖ್ಯ ಸಚೇತಕರನ್ನಾಗಿ ನೇಮಕ ಮಾಡಲಾಗಿದೆ.

ನಾರಾಯಣಸ್ವಾಮಿ ನೇಮಕ
ನಾರಾಯಣಸ್ವಾಮಿ ನೇಮಕ

By

Published : Jun 12, 2022, 7:11 AM IST

ಬೆಂಗಳೂರು: ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಅವರನ್ನು ಸರ್ಕಾರದ ಮುಖ್ಯ ಸಚೇತಕರಾಗಿ ನೇಮಿಸಿ ಪರಿಷತ್ ಕಾರ್ಯದರ್ಶಿ ಕೆ.ಆರ್.ಮಹಾಲಕ್ಷ್ಮಿ ಆದೇಶಿಸಿದ್ದಾರೆ. ಈ ಮುನ್ನ ಮಹಾಂತೇಶ ಕವಟಗಿಮಠ ಪರಿಷತ್​​ನಲ್ಲಿ ಸರ್ಕಾರದ ಮುಖ್ಯ ಸಚೇತಕರಾಗಿದ್ದರು. ಆದರೆ ಕಳೆದ ವರ್ಷ ಡಿಸೆಂಬರ್​ನಲ್ಲಿ ನಡೆದ ದ್ವಿಸದಸ್ಯ ಬಲದ ಬೆಳಗಾವಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕವಟಗಿಮಠ ಸೋಲು ಕಂಡಿದ್ದರು. ಹೀಗಾಗಿ ಸರ್ಕಾರಿ ಮುಖ್ಯ ಸಚೇತಕ ಸ್ಥಾನ ತೆರವಾಗಿತ್ತು.

ABOUT THE AUTHOR

...view details