ಕರ್ನಾಟಕ

karnataka

ETV Bharat / city

ಪರಿಷತ್ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ - ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ವಿಧಾನ ಪರಿಷತ್ ಚುನಾವಣೆಗೆ(Legislative council election) ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದೆ

ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

By

Published : Nov 19, 2021, 9:38 PM IST

Updated : Nov 19, 2021, 9:50 PM IST

ಬೆಂಗಳೂರು: 20 ಸ್ಥಳೀಯ ಸಂಸ್ಥೆಗಳ 25 ವಿಧಾನ ಪರಿಷತ್ ಸ್ಥಾನಕ್ಕೆ (Legislative council election) ನಡೆಯುವ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದೆ. 20 ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರನ್ನು ಬಿಜೆಪಿ ಪ್ರಕಟಿಸಿದ್ದು, ಅವಕಾಶ ನಿರೀಕ್ಷೆಯಲ್ಲಿದ್ದ ಲಖನ್ ಜಾರಕಿಹೊಳಿ ಮತ್ತು ವಲಸಿಗರಿಗೆ ಶಾಕ್ ನೀಡಿದೆ.

ಅಳೆದು ತೂಗಿ ಕಡೆಗೂ ಬಿಜೆಪಿ ಹೈಕಮಾಂಡ್ ವಿಧಾನ ಪರಿಷತ್ ಸ್ಥಾನಕ್ಕೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಸಹೋದರನಿಗೆ ಟಿಕೆಟ್ ಗಿಟ್ಟಿಸಿಕೊಳ್ಳಲು ರಮೇಶ್ ಜಾರಕಿಹೊಳಿ ತೀವ್ರ ಲಾಭಿ ನಡೆಸಿದರೂ ಹೈಕಮಾಂಡ್ ಮಣೆ ಹಾಕಿಲ್ಲ, ವಲಸಿಗ ಸಂದೇಶ ನಾಗರಾಜ್ ಮತ್ತು ಸಿ.ಆರ್.ಮನೋಹರ್ ಹೆಸರನ್ನೂ ಪಟ್ಟಿಯಲ್ಲಿ ಸೇರಿಸಿಲ್ಲ. ಸ್ವಸದಸ್ಯ ಕ್ಷೇತ್ರದಲ್ಲಿ ಕೇವಲ ಒಂದು ಸ್ಥಾನಕ್ಕೆ ಮಾತ್ರ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ.

ಅಭ್ಯರ್ಥಿಗಳ ಹೆಸರು:
ಕೊಡಗು: ಸುಜಾಕುಶಾಲಪ್ಪ
ದಕ್ಷಿಣ ಕನ್ನಡ: ಕೋಟ ಶ್ರೀನಿವಾಸ ಪೂಜಾರಿ
ಚಿಕ್ಕಮಗಳೂರು: ಎಂಕೆ ಪ್ರಾಣೇಶ್
ಶಿವಮೊಗ್ಗ: ಡಿಎಸ್ ಅರುಣ್
ಧಾರವಾಡ: ಪ್ರದೀಪ್ ಶೆಟ್ಟರ್
ಬೆಳಗಾವಿ: ಮಹಾಂತೇಶ್ ಕವಟಗಿಮಠ
ಕಲಬುರಗಿ: ಬಿಜಿ ಪಾಟೀಲ್
ಚಿತ್ರದುರ್ಗ: ಕೆ.ಎಸ್.ನವೀನ್
ಮೈಸೂರು: ರಘು ಕೌಟಿಲ್ಯ
ಹಾಸನ: ವಿಶ್ವನಾಥ್
ಉತ್ತರ ಕನ್ನಡ: ಗಣಪತಿ ಉಳ್ವೇಕರ್
ಬೀದರ್: ಪ್ರಕಾಶ್ ಖಂಡ್ರೆ
ಬೆಂಗಳೂರು: ಹೆಚ್ ಎಸ್ ಗೋಪಿನಾಥ ರೆಡ್ಡಿ
ಮಂಡ್ಯ: ಮಂಜು ಕೆ ಆರ್ ಪೇಟೆ
ಕೋಲಾರ: ಕೆಎನ್ ವೇಣುಗೋಪಾಲ್,
ರಾಯಚೂರು: ವಿಶ್ವನಾಥ್ ಬನಹಟ್ಟಿ
ಬೆಂಗಳೂರು ಗ್ರಾಮಾಂತರ: ಬಿ ಎಂ ನಾರಾಯಣಸ್ವಾಮಿ
ಬಳ್ಳಾರಿ: ವೈಎಂ ಸತೀಶ್
ತುಮಕೂರು: ಎಂ ಲೋಕೇಶ್
ವಿಜಯಪುರ: ಪಿಹೆಚ್ ಪೂಜಾರ್

ಬೆಳಗಾವಿ, ವಿಜಯಪುರ, ಧಾರವಾಡ, ದಕ್ಷಿಣ ಕನ್ನಡ ಮತ್ತು ಮೈಸೂರು ಜಿಲ್ಲೆಗಳಲ್ಲಿ ದ್ವಿ ಸದಸ್ಯ ಸ್ಥಾನವಿದೆ. ಆದರೆ ಗೊಂದಲವಾಗಬಾರದು ಎನ್ನುವ ಕಾರಣಕ್ಕೆ ದ್ವಿ ಸದಸ್ಯ ಸ್ಥಾನವಿದ್ದರೂ ಬಿಜೆಪಿ ಒಂದೇ ಸ್ಥಾನಕ್ಕೆ ಅಭ್ಯರ್ಥಿ ಕಣಕ್ಕಿಳಿಸಲು ನಿರ್ಧರಿಸಿದ್ದು, ಅದರಂತೆ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಬೆಳಗಾವಿಯ ಎರಡನೇ ಸ್ಥಾನದಿಂದ ಲಖನ್ ಜಾರಕಿಹೊಳಿಗೆ ಟಿಕೆಟ್ ಕೊಡಿಸಲು ರಮೇಶ್ ಜಾರಕಿಹೊಳಿ ಸರ್ಕಸ್ ನಡೆಸಿದ್ದರು. ಅದೇ ರೀತಿ ಮೈಸೂರಿನ ಎರಡನೇ ಸ್ಥಾನಕ್ಕೆ ಜೆಡಿಎಸ್ ತೊರೆದು ಬಿಜೆಪಿಯ ಟಿಕೆಟ್ ಆಕಾಂಕ್ಷಿಯಾಗಿದ್ದ ಸಂದೇಶ್ ನಾಗರಾಜ್, ಬೆಂಗಳೂರು ಗ್ರಾಮಾಂತರದ ಆಕಾಂಕ್ಷಿಯಾಗಿದ್ದ ಸಿ.ಆರ್.ಮನೋಹರ್ ಅವರ ಹೆಸರನ್ನು ಪಟ್ಟಿಯಲ್ಲಿ ಸೇರಿಸಿಲ್ಲ.

ಎರಡನೇ ಪಟ್ಟಿ:
ತೀವ್ರ ಒತ್ತಡ ಕಂಡುಬಂದಲ್ಲಿ ಲಖನ್ ಜಾರಕಿಹೊಳಿ ಮತ್ತು ಸಂದೇಶ ನಾಗರಾಜ್ ಅವರಿಗೆ ಬೆಳಗಾವಿ, ಮೈಸೂರಿನ ಎರಡನೇ ಸ್ಥಾನಕ್ಕೆ ಹೈಕಮಾಂಡ್ ಟಿಕೆಟ್ ನೀಡಬಹುದು ಅಥವಾ ಬಿಜೆಪಿ ಬೆಂಬಲ ಪಡೆದು ಪಕ್ಷೇತರರ ಅಭ್ಯರ್ಥಿಗಳಾಗಿ ನಿಲ್ಲಲು ಅನುಮತಿ ನೀಡಬಹುದು ಎನ್ನಲಾಗಿದೆ.

ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
Last Updated : Nov 19, 2021, 9:50 PM IST

ABOUT THE AUTHOR

...view details