ಬೆಂಗಳೂರು:ಸಹಕಾರಿ ಸಚಿವ ಎಸ್.ಟಿ. ಸೋಮಶೇಖರ್ ಪುತ್ರನಿಗೆ, ಜ್ಯೋತಿಷಿಯೊಬ್ಬರ ಮಗನಿಂದ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಶಾಸಕರೊಬ್ಬರ ಪುತ್ರಿಯ ಹೆಸರು ಕೇಳಿಬಂದಿದೆ. ಶಾಸಕರ ಪುತ್ರಿಯ ಹೆಸರಿನಲ್ಲಿದ್ದ ಮೊಬೈಲ್ನಿಂದ ಸಚಿವರ ಪುತ್ರನಿಗೆ ಬೆದರಿಕೆ ಹಾಕಲಾಗಿತ್ತು ಎಂಬ ಅಂಶ ತನಿಖೆಯಿಂದ ಗೊತ್ತಾಗಿದೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿರುವ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್, ತಮ್ಮ ಮಗಳ ಮೇಲೆ ಬಂದಿರುವ ಆರೋಪ ತಳ್ಳಿ ಹಾಕಿದ್ದಾರೆ. ಅಲ್ಲದೇ, ನನ್ನ ಪುತ್ರಿ ಕಳೆದ ಮಾರ್ಚ್ನಲ್ಲಿ ವಿದ್ಯಾಭ್ಯಾಸಕ್ಕಾಗಿ ಇಂಗ್ಲೆಂಡ್ಗೆ ತೆರಳಿದ್ದಾಳೆ. ಆರೋಪಿ ರಾಕೇಶ್ ಮತ್ತು ನನ್ನ ಮಗಳು ಗೆಳೆಯರು. ಯಾವುದೋ ಬ್ಯುಸಿನೆಸ್ ವಿಚಾರವಾಗಿ ತನ್ನ ಮೊಬೈಲ್ನಿಂದ ರಾಕೇಶ್ಗೆ ಒಟಿಪಿ ಕಳುಹಿಸಿದ್ದಾಳೆ ಅಷ್ಟೇ. ಪ್ರಕರಣದಲ್ಲಿ ತನ್ನ ಮಗಳ ಪಾತ್ರವಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.