ಹೊಸಕೋಟೆ: ಶಾಸಕರನ್ನು ಬಿಟ್ಟು ಅಧಿಕಾರಿಗಳನ್ನು ಮುಂದಿಟ್ಟುಕೊಂಡು ಹೊಸಕೋಟೆಯ ಪ್ರಸಿದ್ಧ ಅವಿಮುಕ್ತೇಶ್ವರ ಬ್ರಹ್ಮರಥೋತ್ಸವ ನಿರ್ವಹಣೆ ಕೆಲಸ ಮಾಡುತ್ತಿದ್ದಾರೆ ಎಂದು ಎಂಟಿಬಿ ನಾಗರಾಜ್ ವಿರುದ್ಧ ಶಾಸಕ ಶರತ್ ಬಚ್ಚೇಗೌಡ ಕಿಡಿಕಾರಿದರು.
ಹೊಸಕೋಟೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಶರತ್ ಬಚ್ಚೇಗೌಡ, ಬೆಂಗಳೂರು ಕರಗದಂತೆ ಹೊಸಕೋಟೆ ಕರಗ ಮತ್ತು ರಥೋತ್ಸವಕ್ಕೆ ಇತಿಹಾಸವಿದೆ. ಇದನ್ನು 1906ರಲ್ಲಿ ಮೈಸೂರು ಒಡೆಯರು ಇಲ್ಲಿಗೆ ಬಂದು ಪ್ರಾರಂಭಿಸಿದ್ದರು. ನಾವು ಕಳೆದ ಐವತ್ತು ವರ್ಷಗಳಿಂದ ಸಂಪ್ರದಾಯವಾಗಿ ರಥೋತ್ಸವ ನಡೆಸಿಕೊಂಡು ಬರುತ್ತಿದ್ದೇವೆ. ತಾಲೂಕಿನಲ್ಲಿ ಯಾರು ಶಾಸಕರಾಗಿರುತ್ತಾರೋ ಅವರು ಕರಗದ ನಿರ್ವಹಣೆ ಮಾಡಲು ಒಂದು ಸಮಿತಿ ಮಾಡಿ, ಅದಕ್ಕೆ ಒಬ್ಬ ಕನ್ವಿನೆಂಟ್‌ರನ್ನು ಆಯ್ಕೆ ಮಾಡಿ ಹಬ್ಬಕ್ಕೆ ಸಿದ್ಧತೆಗಳನ್ನ ಮಾಡಿಕೊಳ್ಳುತ್ತಾರೆ. ಆದರೆ ಈಗ ಬೇರೆ ಎಲ್ಲಿಂದಲೋ ನಮ್ಮ ಕ್ಷೇತ್ರಕ್ಕೆ ಬಂದು ಸಂಪ್ರಾದಾಯಗಳನ್ನ ಮುರಿಯುತ್ತಿದ್ದಾರೆ ಎಂದು ಎಂಟಿಬಿ ವಿರುದ್ಧ ದೂರಿದರು.