ಕರ್ನಾಟಕ

karnataka

ETV Bharat / city

'ದಿ ಕಾಶ್ಮೀರ ಫೈಲ್ಸ್​' ಸಿನಿಮಾ ಕನ್ನಡಕ್ಕೆ ಡಬ್ ಮಾಡಲು ಚಿಂತನೆ: ರೇಣುಕಾಚಾರ್ಯ

ದೇಶಾದ್ಯಂತ ಹಿಂದಿ ಭಾಷೆಯಲ್ಲಿ ತೆರೆ ಕಂಡು ಭಾರಿ ಸಂಚಲನ ಸೃಷ್ಟಿಸಿರುವ ಸಿನಿಮಾ ದಿ ಕಾಶ್ಮೀರ ಫೈಲ್ಸ್​. ಇದನ್ನು ಕನ್ನಡಕ್ಕೆ ಡಬ್​ ಮಾಡಲು ಶಾಸಕ, ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಇಂಗಿತ ವ್ಯಕ್ತಪಡಿಸಿದ್ದಾರೆ. ಸಿನಿಮಾವನ್ನು ನಮ್ಮ ಭಾಷೆಗೆ ತಂದರೆ ಎಲ್ಲರನ್ನೂ ಮುಟ್ಟಲು ಸಾಧ್ಯ ಎಂದು ಅವರು ಹೇಳಿದ್ದಾರೆ.

renukacharya
ರೇಣುಕಾಚಾರ್ಯ

By

Published : Mar 18, 2022, 3:09 PM IST

ಬೆಂಗಳೂರು:'ದಿ ಕಾಶ್ಮೀರ ಫೈಲ್ಸ್‌' ಚಿತ್ರವನ್ನು ಕನ್ನಡಕ್ಕೆ ಡಬ್ಬಿಂಗ್ ಮಾಡಬೇಕು. ಈಗಾಗಲೇ ಈ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರ ಸಂಪರ್ಕ ಸಂಖ್ಯೆಯನ್ನು ಕಲೆ ಹಾಕಿದ್ದೇನೆ. ಈ ಚಿತ್ರದ ಡಬ್ಬಿಂಗ್​ಗೆ ಅವರು ಒಪ್ಪಿದರೆ ಹಣ ಸಂಗ್ರಹಿಸಿ ಡಬ್ಬಿಂಗ್ ಮಾಡುತ್ತೇವೆ ಎಂದರು.

ದಿ ಕಾಶ್ಮೀರ್ ಫೈಲ್ಸ್‌ ಈಗ ಹಿಂದಿಯಲ್ಲಿ ಮಾತ್ರ ಬಂದಿದೆ. ದೇಶದೆಲ್ಲೆಡೆ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಕನ್ನಡ ಭಾಷೆಗೆ ಡಬ್ ಮಾಡಿ ತರಬೇಕು ಅಂತ ಯೋಚನೆ ಮಾಡಿದ್ದೀನಿ. ಈ ವಿಚಾರವಾಗಿ ನನ್ನ ಸ್ನೇಹಿತರ ಬಳಿ ಚರ್ಚೆ ಸಹ ಮಾಡಿದ್ದೀನಿ. ಕನ್ನಡದಲ್ಲಿ ಬಂದ್ರೆ ಇಲ್ಲಿನವರೆಲ್ಲರೂ ನೋಡಲು ಅನುಕೂಲವಾಗುತ್ತದೆ.

ಕರುನಾಡಿನ ಜನರಿಗೆ ಎಲ್ಲರಿಗೂ ಹಿಂದಿ ಬರಲ್ಲ. ದಿ ಕಾಶ್ಮೀರ್ ಫೈಲ್ಸ್‌ ಒಂದು ಉತ್ತಮವಾದ ಚಿತ್ರ. ಪಂಡಿತರ ಮೇಲೆ ನಡೆದಿದ್ದ ದೌರ್ಜನ್ಯ ಎಲ್ಲರಿಗೂ ತಿಳಿಯಬೇಕು. ಈ ಹಿನ್ನೆಲೆಯಲ್ಲಿ ಕನ್ನಡದಲ್ಲಿ ತರಲು ಯೋಚನೆ ಮಾಡ್ತಾ ಇದ್ದೀನಿ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ​ ಜೊತೆಗೆ ಮಾತುಕತೆ ವಿಚಾರವಾಗಿ ಪ್ರತಿಕ್ರಿಯಿಸಿ, ಡಿಕೆಶಿ ನನಗೆ ಆತ್ಮೀಯ ಗೆಳೆಯರು ಅಷ್ಟೇ. ರಾಜಕಾರಣ ಬೇರೆ ವೈಯಕ್ತಿಕ ಸಂಬಂಧಗಳು ಬೇರೆ. ಯಾವಾಗಲಾದ್ರೂ ಭೇಟಿ ಮಾಡಿ ಮಾತಾಡ್ತೀವಿ. ಇಂದು ಸಹ ಮಾತುಕತೆ ಮಾಡಿದ್ದೇವೆ. ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ:ಶಾಲಾ ಪಠ್ಯದಲ್ಲಿ ಭಗವದ್ಗೀತೆ ಸೇರ್ಪಡೆ ಪರ ಬ್ಯಾಟಿಂಗ್ ಮಾಡಿದ ಬಿಜೆಪಿ ನಾಯಕರು

For All Latest Updates

TAGGED:

ABOUT THE AUTHOR

...view details