ಬೆಂಗಳೂರು:ಹಲಾಲ್ ವಿಚಾರಕ್ಕೆ ಸಂಬಂಧಿಸಿದಂತೆ ಹಲವಾರು ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಹಿಂದೂ ಯುವಕರು ಮಟನ್ ಸ್ಟಾಲ್ ಇಡುವುದಕ್ಕೆ ನಾನು ಹಣ ನೀಡುತ್ತೇನೆ. ಪ್ರೋತ್ಸಾಹ ಮಾಡುತ್ತೇನೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಹಿಂದೂ ಯುವಕರು ಮಟನ್ ಸ್ಟಾಲ್ ಇಡಲು ನಾನು ಖಂಡಿತ ಪ್ರೋತ್ಸಾಹ ಮಾಡುತ್ತೇನೆ. ನಾನೇ ಸ್ವಂತ ಅಂಗಡಿ ಇಟ್ಟುಕೊಳ್ಳಲು ಹಣ ಸಹಾಯ ಕೂಡ ಮಾಡುತ್ತೇನೆ. ಅವರ ವ್ಯಾಪಾರಕ್ಕೆ ಎಷ್ಟು ಹಣ ಬೇಕೊ ಅಷ್ಟು ಕೊಡುತ್ತೇನೆ ಎಂದರು.
ಹಿಜಾಬ್ ಸಂಬಂಧ ಕಾಂಗ್ರೆಸ್ ಪ್ರೇರಿತ ಸಂಘಟನೆಗಳು ಕೋರ್ಟ್ಗೆ ಹೋಗಿವೆ. ಇಲ್ಲಿ ರಾಜಕೀಯ ವಿವಾದ ಹುಟ್ಟು ಹಾಕಿದ್ದು ನಾವಲ್ಲ. ಕುರಾನ್ ಧರ್ಮ ಸಂಘರ್ಷ ಮಾಡಿ ಎಂದು ಹೇಳಿದ್ಯಾ?. ಅವರು ಎಲ್ಲಾ ರಂಗದಲ್ಲಿ ಇದ್ದಾರೆ. ನಮ್ಮ ಹಿಂದೂಗಳು ವ್ಯಾಪಾರಕ್ಕೆ ಬರಬೇಕು. ಯಾರೋ ಕೆಲವರಿಂದ ಮುಗ್ಧ ಮುಸ್ಲಿಮರು ಬಲಿಯಾಗುತ್ತಾರೆ.
ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಹೈಕೋರ್ಟ್ ತೀರ್ಪು ಬಂದ ಮೇಲೆ ರಾಜ್ಯ ಬಂದ್ ಮಾಡಿದ್ದು ಯಾರು?, ಹಣ್ಣುಗಳಿಗೆ ಎಂಜಲು ಹಚ್ಚಿ ಮಾರಾಟ ಮಾಡಿದ ವಿಡಿಯೋ ನೋಡಿದ್ದೇನೆ. ಹಲಾಲ್ ಅನ್ನು ನಾನು ವಿರೋಧಿಸುತ್ತೇನೆ. ಕುರಾನ್ನಲ್ಲಿ ಎಂಜಲು ಹಚ್ಚಿ ಎಂದು ಹೇಳಿದ್ದಾರಾ?. ಎಲ್ಲಾ ಹಿಂದೂಗಳು ಹಲಾಲ್ ಅನ್ನು ವಿರೋಧಿಸಬೇಕು ಎಂದು ರೇಣುಕಾಚಾರ್ಯ ಹೇಳಿದ್ದಾರೆ.
ಹಿಜಾಬ್ ವಿವಾದಕ್ಕೆ ಕಾಂಗ್ರೆಸ್ ಕಾರಣ. ಜಮೀರ್ ಹಾಗೂ ಯುಟಿ ಖಾದರ್ ಕಿಡಿಗೇಡಿಗಳು. ಕಾಂಗ್ರೆಸ್ ಮೇಲೆ ಬರೋಕೆ ಸಾಧ್ಯವಾಗುತ್ತಿಲ್ಲ. ಹಿಜಾಬ್ ವಿಚಾರ, ಕಾಶ್ಮೀರಿ ಫೈಲ್ ಚಲನಚಿತ್ರ, ಪಾಠ ಪುಸ್ತಕದಲ್ಲಿ ಭಗವದ್ಗೀತೆ, ಹಲಾಲ್ ಬಾಯ್ಕಾಟ್ ಇವೆಲ್ಲಾ ಕಾಂಗ್ರೆಸ್ಗೆ ಹೊಡೆತ ಕೊಡುತ್ತಿದೆ. ಮುಂದಿನ ಬಾರಿ ಕಾಂಗ್ರೆಸ್ಗೆ ರಾಜ್ಯದಲ್ಲಿ 40-50 ಸ್ಥಾನ ಕೂಡ ಬರುವುದಿಲ್ಲ ಎಂದು ರೇಣುಕಾಚಾರ್ಯ ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ:ಸಂಘರ್ಷದ ವಾತಾವರಣದಲ್ಲಿಯೂ ಶಾಂತಿ - ಸುವ್ಯವಸ್ಥೆ ಕಾಪಾಡಿದ್ದೇವೆ: ಸಿಎಂ ಬೊಮ್ಮಾಯಿ