ಬೆಂಗಳೂರು: ಸಚಿವ ಸ್ಥಾನದಿಂದ ವಂಚಿತರಾದ ಶಾಸಕ ರಾಮದಾಸ್ ಹಾಗೂ ಸಿ.ಪಿ. ಯೋಗೇಶ್ವರ್ ಇಬ್ಬರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಇಂದು ಭೇಟಿಯಾಗಿದ್ದರು.
ಸಿಎಂ ಬೊಮ್ಮಾಯಿ ಮೈಸೂರು ಭೇಟಿ ವೇಳೆ ಶಾಸಕ ರಾಮದಾಸ್ ಗೈರಾಗಿದ್ದರು. ಈ ಹಿನ್ನೆಲೆ ಶಾಸಕ ರಾಮದಾಸ್ ಆರ್.ಟಿ. ನಗರದಲ್ಲಿನ ಸಿಎಂ ನಿವಾಸಕ್ಕೆ ಆಗಮಿಸಿ, ಭೇಟಿ ಮಾಡಿ ಸ್ಪಷ್ಟನೆ ನೀಡಿದ್ದಾರೆ. ಬಳಿಕ ಮಾತನಾಡಿದ ಅವರು, ಮೈಸೂರಿಗೆ ಸಿಎಂ ಬಂದಿದ್ದಾಗ ನಾನು ಅವರ ಭೇಟಿ ಮಾಡಿರಲಿಲ್ಲ. ಏಕೆ ಭೇಟಿ ಮಾಡಿಲ್ಲವೆಂದು ಸೀಲ್ಡ್ ಕವರ್ನಲ್ಲಿ ಪತ್ರದ ಮೂಲಕ ಕಾರಣ ಕೊಡುತ್ತೇನೆ ಅಂದಿದ್ದೆ. ಅದರಂತೆ ಇಂದು ಸಿಎಂ ಅವರನ್ನು ಭೇಟಿ ಮಾಡಿ ಕಾರಣ ಕೊಟ್ಟಿದ್ದೇನೆ. ನನಗೆ ಯಾವುದೇ ಅಸಮಾಧಾನ ಇಲ್ಲ. ನಾನು ಬೇಸರ ಮಾಡಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.
ಸಿಎಂ ನನ್ನ ಕ್ಲೋಸ್ ಫ್ರೆಂಡ್:
ಸೀಲ್ಡ್ ಕವರ್ನಲ್ಲಿ ಕೋವಿಡ್ ವಿಚಾರ, ರಾಜ್ಯ, ಸರ್ಕಾರದ ಹಿತದೃಷ್ಟಿಯಿಂದ ಅನುಭವಗಳನ್ನು ಹಂಚಿಕೊಂಡಿದ್ದೇನೆ. ಬಿಡುವಾದಾಗ ಓದಿ ಅಂತ ಸಿಎಂಗೆ ಹೇಳಿದ್ದೇನೆ. ನಾನೊಬ್ಬ ಸ್ವಯಂಸೇವಕ, ಪಕ್ಷ ಕಟ್ಟುವ ಕಷ್ಟದ ಅನುಭವ ಇದೆ. ಪಕ್ಷದ ವಿರುದ್ಧ ಅಭಿಪ್ರಾಯ, ನನ್ನ ಅಸಮಾಧಾನ ಹೇಳಿಕೊಂಡಿಲ್ಲ. ಸಿಎಂ ಬೇಸರವಾಗಿಲ್ಲ, ಅವರು ನನ್ನ ಕ್ಲೋಸ್ ಫ್ರೆಂಡ್. ಸಿಎಂ ಒಬ್ಬ ಸಿಎಂ ಮಗ, ಪರಿಸ್ಥಿತಿಗಳು ಅವರಿಗೆ ಗೊತ್ತಿದೆ ಎಂದರು.
ನಾಯಕರಿಗೆ ಎಲ್ಲ ಗೊತ್ತಿದೆ: