ಕರ್ನಾಟಕ

karnataka

ETV Bharat / city

ನಮ್ಮಲ್ಲಿರೋದು ಒಂದೇ ಬಣ, ಅದು ಬಿಜೆಪಿ ಬಣ: ಶಾಸಕ ರಾಜುಗೌಡ - ಬೆಂಗಳೂರು ಲೇಟೆಸ್ಟ್​ ನ್ಯೂಸ್

ನಾವು ಸಿಎಂ ಯಡಿಯೂರಪ್ಪ ಅವರ ವಿರೋಧಿ ಬಣ ಅನ್ನೋದು ಸುಳ್ಳು. ಬಿಜೆಪಿಯಲ್ಲಿ ಇರೋದು ಒಂದೇ ಬಣ, ಅದು ಬಿಜೆಪಿ ಬಣ ಎಂದು ಶಾಸಕ ರಾಜುಗೌಡ ಸ್ಪಷ್ಟಪಡಿಸಿದ್ದಾರೆ.

mla-rajugowda-statement-about-government
ಶಾಸಕ ರಾಜುಗೌಡ

By

Published : Feb 1, 2021, 12:24 PM IST

ಬೆಂಗಳೂರು: ಅತೃಪ್ತರು ಯಾವ ಸಭೆಯನ್ನೂ ನಡೆಸಿಲ್ಲ. ಹಾಗೇನಾದರೂ ಸೇರಿದ್ರೆ ಹೇಳುತ್ತೇವೆ ಎಂದು ಶಾಸಕ ರಾಜುಗೌಡ ತಿಳಿಸಿದ್ದಾರೆ.

ಬಿಜೆಪಿಯಲ್ಲಿ ಇರೋದು ಒಂದೇ ಬಣ, ಅದು ಬಿಜೆಪಿ ಬಣ: ಶಾಸಕ ರಾಜುಗೌಡ

ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ವಿರೋಧಿ ಬಣ ಅನ್ನೋದು ಸುಳ್ಳು. ಅತೃಪ್ತರು ಮಾಧ್ಯಮದವರಿಗೆ ಹೇಳಿ ಸಭೆ ಸೇರಿದ್ರೆ, ಅದಕ್ಕೆ ಒಂದು ಧೈರ್ಯ ಇರಲಿದೆ. ಜೆ ಪಿ ನಡ್ಡಾ ಭೇಟಿ, ನೀವು ನಮಗೆ ಮಾಡಿಸಬೇಕು. ಬಿಜೆಪಿಯಲ್ಲಿ ಇರೋದು ಒಂದೇ ಬಣ, ಅದು ಬಿಜೆಪಿ ಬಣ ಎಂದು ಸ್ಪಷ್ಟಪಡಿಸಿದರು.

ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಫೆ.9ರಂದು ರಾಜನಹಳ್ಳಿಯಲ್ಲಿ ಮೀಸಲಾತಿ ಹೋರಾಟ ಮಾಡಲಾಗುತ್ತಿದೆ. ವಾಲ್ಮೀಕಿ ಜನಾಂಗಕ್ಕೆ 7.5% ಮೀಸಲಾತಿ ಕೇಳಿದ್ದೆವು. ಶ್ರೀರಾಮುಲು ಅವರಿಗೆ ಮನವಿ ಮಾಡುತ್ತೇನೆ. ಗುರುಗಳು ಕಳೆದ ಬಾರಿ ಪ್ರತಿಭಟನೆಗೆ ಕುಳಿತಾಗ ಸಂಧಾನ ಮಾಡಿದ್ದರು. ಪಂಚಮಸಾಲಿ, ಕುರುಬರು, ಪೂಜಾರರು, ಎಸ್​ಸಿ, ಎಸ್​ಟಿ ಎಲ್ಲಾ ಸಮುದಾಯದಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ನಮಗೂ ಮೀಸಲಾತಿ ನೀಡುವಂತೆ ಮನವಿ ಮಾಡುತ್ತೇವೆ ಎಂದರು.

ಓದಿ:ಕೃಷಿ, ಆರೋಗ್ಯ, ರಕ್ಷಣಾ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಮೀಸಲಿಡಿ: ರಾಹುಲ್ ಆಗ್ರಹ

ಇದೇ ವೇಳೆ ಮಾತನಾಡಿದ ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ, ರಾಜಕೀಯ ಪಕ್ಷ ಅಂದ್ರೆ ಸಣ್ಣ-ಪುಟ್ಟ ಇರುತ್ತೆ. ಅದು ಭಿನ್ನಮತ, ಬಂಡಾಯ ಅಲ್ಲ. ಕೇವಲ ಅಭಿಪ್ರಾಯ ಅಷ್ಟೇ. ನಾವೆಲ್ಲಾ ಒಟ್ಟಾಗಿ, ಒಂದಾಗಿದ್ದೇವೆ. ನಾಲ್ಕು ಗೋಡೆ ಮಧ್ಯೆ ಸಮಸ್ಯೆ ಬಗೆಹರಿಸಿಕೊಳ್ಳುತ್ತೇವೆ. ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಎಲ್ಲರೂ ಒಟ್ಟಾಗಿರುತ್ತೇವೆ ಎಂದು ಹೇಳಿದ್ರು.

ABOUT THE AUTHOR

...view details