ಕರ್ನಾಟಕ

karnataka

ETV Bharat / city

ಸಂಪುಟ ವಿಸ್ತರಣೆಗೆ ಮುಂದಾದ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ: ಸುರಪುರ ಶಾಸಕ ಹೇಳಿದ್ದೇನು? - ರಾಜೂಗೌಡ ಪ್ರತ್ಯೇಕ ಸಭೆ

ನಮ್ಮ ಜಿಲ್ಲೆ ಹಿಂದುಳಿದ ಪ್ರದೇಶವಾದ್ದರಿಂದ ನಮಗೆ ಪ್ರಾತಿನಿಧ್ಯ ನೀಡಬೇಕು. ಈ ವಿಚಾರದಲ್ಲಿ ಬೆದರಿಕೆ ಹಾಕುವುದಿಲ್ಲ ಎಂದು ಸಚಿವ ಸಂಪುಟ ವಿಸ್ತರಣೆ ಕುರಿತು ಶಾಸಕ ರಾಜೂಗೌಡ ಅಸಮಾಧಾನ ವ್ಯಕ್ತಪಡಿಸಿದ್ಧಾರೆ.

mla-rajugowda-reaction-on-cabinet-extension
ಶಾಸಕ ರಾಜೂಗೌಡ

By

Published : Feb 3, 2020, 7:11 PM IST

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್ ಆಗಿರುವ ಬೆನ್ನಲ್ಲೇ ಬಿಜೆಪಿ ವಲಯದಲ್ಲೀಗ ಅಸಮಾಧಾನ ಸ್ಫೋಟಗೊಳ್ಳುತ್ತಿದೆ.

ಶಾಸಕರ ಭವನದಲ್ಲಿ ಇಂದು ಸುದ್ದಿಗಾರರ ಜೊತೆ ಮಾತಮಾಡಿದ ಸುರಪುರ ಶಾಸಕ ರಾಜೂಗೌಡ, ನಮ್ಮ ಜಿಲ್ಲೆ ಹಿಂದುಳಿದ ಪ್ರದೇಶವಾದ್ದರಿಂದ ನಮಗೆ ಪ್ರಾತಿನಿಧ್ಯ ನೀಡಬೇಕು. ಈ ವಿಚಾರದಲ್ಲಿ ಬೆದರಿಕೆ ಹಾಕುವುದಿಲ್ಲ. ಕಲ್ಯಾಣ ಕರ್ನಾಟಕ ಕೋಟಾದಡಿ ನಮಗೆ ಸಂಪುಟದಲ್ಲಿ ಸ್ಥಾನ ನೀಡಬೇಕೆಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರಿಗೆ ಮನವಿ ಮಾಡುವೆ ಎಂದಿದ್ದಾರೆ.

ನಮ್ಮ ಭಾಗದ 10 ಜನ ಶಾಸಕರು ಸಭೆ ಸೇರಿ ಮಾತುಕತೆ ನಡೆಸಿದ್ದೇವೆ. ನಾಳೆಯೂ ಈ ವಿಚಾರವಾಗಿ ಶಾಸಕರ ಭವನದಲ್ಲಿ ಸಭೆ ನಡೆಯಲಿದೆ. ಹೈದರಾಬಾದ್- ಕರ್ನಾಟಕದ ಎಲ್ಲಾ ಶಾಸಕರು ನಾಳೆ ಮಾತನಾಡುತ್ತಾರೆ. ಇದು ಪಕ್ಷ ವಿರೋಧಿ ಸಭೆಯಲ್ಲ. ನಾವು ರೆಸಾರ್ಟ್ ಗೂ ಹೋಗಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್ ಆದ ಬೆನ್ನಲ್ಲೇ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ

ಸಂಪುಟದಲ್ಲಿ ಬೆಂಗಳೂರು, ಬೆಳಗಾವಿ ಭಾಗದ ಶಾಸಕರು ಹೆಚ್ಚಾಗುತ್ತಿದ್ದಾರೆ. ಇದರಿಂದ ಸಂಪುಟ ಇಂಬ್ಯಾಲೆನ್ಸ್ ಆಗಲಿದೆ. ಈ ಬಗ್ಗೆ ಧ್ವನಿ ಎತ್ತದಿದ್ದಲ್ಲಿ ನಮ್ಮ ಭಾಗದ ಜನ ತಪ್ಪು ತಿಳಿಯಲಿದ್ದಾರೆ. ಜಾತಿವಾರು, ಜಿಲ್ಲಾವಾರು ಎಷ್ಟು ಜನರಿಗೆ ಸಂಪುಟದಲ್ಲಿ ಸ್ಥಾನ ಕೊಟ್ಟಿದ್ದಾರೆ? ಎಂದು ಶಾಸಕ ರಾಜೂಗೌಡ ಪ್ರಶ್ನಿಸಿದರು.

ನಮ್ಮ ಮಾನ ಮುಚ್ಚಿಕೊಳ್ಳಲು ಸಂಪುಟದಲ್ಲಿ ಸ್ಥಾನ ಕೇಳುತ್ತಿದ್ದೇವೆ. ಎರಡು ಸ್ಥಾನವಾದರೂ ನಮ್ಮ ಭಾಗಕ್ಕೆ ಕೊಡಿ ಎಂದು ಸಿಎಂಗೆ ಹಲವು ಬಾರಿ ಮನವಿ ಮಾಡಿದ್ದೆ. ಹೈದರಾಬಾದ್ ಕರ್ನಾಟಕಕ್ಕೆ ಪ್ರಾತಿನಿಧ್ಯ ಕೊಡಿ. ಕಳೆದ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರ್ಕಾರದ ಅವಧಿಯಲ್ಲೂ ನಮ್ಮ ಭಾಗಕ್ಕೆ ಹೆಚ್ಚಿನ ಸ್ಥಾನ ನೀಡಲಾಗಿತ್ತು ಎಂದರು.

ಸೋತಿದ್ದರೂ ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನ ನೀಡಿದ್ದಾರೆ. ಇದು ಹೈಕಮಾಂಡ್ ತೀರ್ಮಾನವಾಗಿದ್ದು, ಈ ಬಗ್ಗೆ ಮಾತಾಡಲ್ಲ. ಈಗ ಇರುವ ಮೂರರಲ್ಲಿ ಮತ್ತೆ ಸೋತವರಿಗೆ ಕೊಟ್ಟರೆ ಹೇಗೆ?. ಜನ ಕೇಳುವ ಪ್ರಶ್ನೆಗೆ ಉತ್ತರ ಕೊಡೋಕೆ ಆಗಲ್ಲ ಎಂದು ಸುರಪುರ ಶಾಸಕ ಅಸಮಾಧಾನ ಹೊರಹಾಕಿದ್ದಾರೆ.

ABOUT THE AUTHOR

...view details